ವಿಜಯಪುರ: ಕೊರೊನಾ ಆತಂಕದ ನಡುವೆಯೂ ಸೀಲ್ ಡೌನ್ ಪ್ರದೇಶದಲ್ಲಿ ಓಡಾತ್ತಿದ್ದ ಯುವಕರಿಗೆ ಪೊಲೀಸರು ಬಸ್ಕಿ ಹೊಡೆಸಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಸ್ಟೇಷನ್ ರಸ್ತೆಯ ಬಡೆ ಕಮಾನ್ ಹತ್ತಿರ ಎಟಿಎಂಗೆ ಹೋಗುವ ನೆಪದಲ್ಲಿ ಮೂರು ಜನ ಯುವಕರು ಸೀಲ್ ಆಗಿರುವ ಪ್ರದೇಶದಲ್ಲಿ ಓಡಾಡುತ್ತಿದ್ದರು. ಯುವಕರನ್ನು ಸ್ಥಳದಲ್ಲಿದ್ದ ಪೊಲೀಸರು ವಿಚಾರಣೆ ನಡೆಸಿದಾಗ ಒಂದು ಎಟಿಎಂ ಕಾರ್ಡ್ ತಗೆದುಕೊಂಡು ಮೂರು ಜನ ಯುವಕರು ಹೋಗುತ್ತಿರುವುದು ಎಂದು ಹೇಳಿದ್ದಾರೆ. ನಗರದಲ್ಲಿ 7 ಕೊರೊನಾ ಪಾಸಿಟಿವ್ ಕಂಡು ಬಂದ ಕಾರಣ ಸ್ಟೇಷನ್ ರಸ್ತೆಯ ಬಡೆ ಕಮಾನ್ ಬಡಾವಣೆ ಸೀಲ್ ಡೌನ್ ಮಾಡಿದ್ದರೂ ಕೂಡ ಯುವಕರು ಅನವಶ್ಯಕವಾಗಿ ಓಡಾಟ ನಡೆಸುತ್ತಿದ್ದರು.
ಇನ್ನು ಪೊಲೀಸರು ಯುವಕರನ್ನು ವಿಚಾರಣೆ ನಡೆಸಿದಾಗ ಅನಗತ್ಯವಾಗಿ ಓಡಾಟ ನಡೆಸುತ್ತಿರುವುದು ಕಂಡು ಬಂದ ಕಾರಣ ಮೂವರು ಯುವಕರನ್ನು ರಸ್ತೆಯಲ್ಲಿ ನಿಲ್ಲಿಸಿ ಬಸ್ಕಿ ಹೊಡಸಿದ್ದಾರೆ.