ETV Bharat / state

ಸ್ವಾಮಿಗಳೇ ನಿಮ್ಮ ವರ್ತನೆ ಸರಿಯಲ್ಲ.. ನಾವು ಸಿಎಂ ಬೆನ್ನಿಗೆ ನಿಲ್ತೇವೆ.. ಯತ್ನಾಳ್ - ಶಾಸಕ ಬಸನಗೌಡ ಯತ್ನಾಳ್​

ಸ್ವಾಮೀಜಿಗಳು ಏನು ಬೇಕಾದ್ದು ಮಾತನಾಡಲು ಜನರಲ್ ಪವರ್ ಆಫ್ ಅಟಾರ್ನಿ ಕೊಟ್ಟಿಲ್ಲ. ಮಠಾಧೀಶರಾಗಿ ಗೌರವಯುತವಾಗಿ ಇರ್ಬೇಕು ಎಂದು ಬಿಜೆಪಿ ಶಾಸಕ ಬಸವರಾಜ ಯತ್ನಾಳ್ ನೇರವಾಗಿ ವಚನಾನಂದ ಸ್ವಾಮೀಜಿ ವಿರುದ್ಧ ಕಿಡಿಕಾರಿದರು.

Basanagowda yatnal
ಯತ್ನಾಳ
author img

By

Published : Jan 15, 2020, 3:41 PM IST

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮೂರು ಸಚಿವ ಸ್ಥಾನ ನೀಡಬೇಕು ಎಂಬ ವಚನಾನಂದ ಶ್ರೀಗಳ ಹೇಳಿಕೆಗೆ ಶಾಸಕ ಬಸನಗೌಡ ಯತ್ನಾಳ್​ ಗರಂ ಆಗಿದ್ದಾರೆ.

ವಚನಾನಂದ ಶ್ರೀ ಮತ್ತು ಶಾಸಕ ನಿರಾಣಿ ವಿರುದ್ಧ ಎಂಎಲ್‌ಎ ಬಸನಗೌಡ ಯತ್ನಾಳ್​ ಕಿಡಿ..

ನಿರಾಣಿಗೆ ಸಚಿವ ಸ್ಥಾನ ನೀಡಬೇಕು ಎಂದು ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ್​ ನಿರಾಣಿಯನ್ನು ಬಿಜೆಪಿಗೆ ತಂದವರು ನಾನು ಹಾಗೂ ಶ್ರೀಕಾಂತ ಕುಲಕರ್ಣಿ,ಅವರನ್ನ ಬೃಹತ್ ಕೈಗಾರಿಕೆ ಮಂತ್ರಿ ಮಾಡಿದ್ದು ಯಡಿಯೂರಪ್ಪ ಅದನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಕಾರ್ಯಕ್ರಮಕ್ಕೆ ಕರಿಸಿ ನಿರಾಣಿಯನ್ನು ಮಂತ್ರಿ‌ಮಾಡಬೇಕು ಎಂದು ಹೇಳುತ್ತಿರೋದನ್ನ ನಾನು ಖಂಡಿಸುತ್ತೇನೆ. ಸ್ವಾಮೀಜಿಗಳೇ ನಿಮ್ಮ ನಡುವಳಿಕೆಯಿಂದ ಪಂಚಮಸಾಲಿ‌ ಸಮಾಜಕ್ಕೆ ಅಪಮಾನವಾಗಿದೆ. ಈ ರೀತಿ ನಿಮ್ಮ ವರ್ತನೆ ಮುಂದುವರೆದರೆ ಯಾವ ಶಾಸಕರೂ ಸುಮ್ನೆ ಕೂರುವುದಿಲ್ಲ ಎಂದು ವಚನಾನಂದ ಸ್ವಾಮೀಜಿಗೆ ಯತ್ನಾಳ ಎಚ್ಚರಿಸಿದರು.

ಸ್ವಾಮೀಜಿಗಳಿರಲಿ, ಬೇರೆ ಯಾರೇ ಇರಲಿ ಸಿಎಂಗೆ ಗೊಡ್ಡು ಬೆದರಿಕೆ ಹಾಕುವಂತಿಲ್ಲ. ಸ್ವಾಮೀಜಿಗಳು ಏನು ಬೇಕಾದ್ದು ಮಾತನಾಡಲು ಜನರಲ್ ಪವರ್ ಆಫ್ ಅಟಾರ್ನಿ ಕೊಟ್ಟಿಲ್ಲ. ಮಠಾಧೀಶರಾಗಿ ಗೌರವಯುತವಾಗಿ ಇರ್ಬೇಕು ಎಂದರು.

ಸರ್ಕಾರ ಮೂರುವರೆ ವರ್ಷ ಇರ್ತದೆ. ಯಡಿಯೂರಪ್ಪ ಸಿಎಂ‌ ಆಗಿರ್ತಾರೆ. ಮುಖ್ಯಮಂತ್ರಿಗಳು ರಾಜನಿದ್ದಂತೆ. ರಾಜನಿಗೆ ಮಠಾಧೀಶರು ಯಾರೂ ಕೂಡ ಬೆದರಿಕೆ ಹಾಕಬಾರದು ಎಂದರು. ಪ್ರವಾಹ ಸಮಯದಲ್ಲಿ ಸ್ವಾಮೀಜಿ ಎಲ್ಲಿ ಹೋಗಿದ್ರು. ಸ್ವಾಮೀಜಿಯಾಗಿ ಧರ್ಮ ಬೋಧನೆ ಮಾಡಲಿ. ನಾನು ಯಾವ ಸ್ವಾಮೀಜಿ ಬಳಿ ಹೋಗಿ ಮಂತ್ರಿ ಕೊಡಿಸಿ ಎಂದು ಹೋಗಿಲ್ಲ. ನನಗೆ ಅರ್ಹತೆ ಇದ್ರೆ ಮಂತ್ರಿ ಮಾಡ್ರಿ, ಇಲ್ಲದಿದ್ರೆ ಬೇಡ, ನನ್ನ ಅರ್ಹತೆ ಏನು ಎಂಬುದು ವಾಜಪೇಯಿ ಅವರಿಗೆ ಗೊತ್ತಿತ್ತು. ವಿಜಯಪುರ ಜನತೆಗೂ ಕೂಡ ಗೊತ್ತಿದೆ ಎಂದರು.

Intro:ವಿಜಯಪುರ: ವಚನಾನಂದ ಶ್ರೀಗಳ ಪಂಚಮಸಾಲಿ ಸಮುದಾಯಕ್ಕೆ ಮೂರು ಸಚಿವ ಸ್ಥಾನ ನೀಡಬೇಕು ಎಂಬ ಹೇಳಿಕೆಗೆ ಶಾಸಕ ಬಸನಗೌಡ ಯತ್ನಾಳ ಗರಂ‌ ಆಗಿ ಉತ್ತರಿಸಿದ್ದಾರೆ, ಸ್ವಾಮೀಜೀಗಳು ಇತರರು ಸೇರಿದಂತೆ ಸಿಎಂಗೆ ಗೊಡ್ಡು ಬೇದರಿಕೆ ಹಾಕುವಂತಲ್ಲ, ಸ್ವಾಮೀಜಿಗಳು ಏನು ಬೇಕಾದ್ದು ಮಾತನಾಡಲು ಜನರಲ್ ಪವರ್ ಆಫ್ ಅಟಾರ್ನಿ ಕೊಟ್ಟಿಲ್ಲ ಮಠಾಧೀಶರಾಗಿ ಗೌರವಯುತವಾಗಿ ಇರ್ಬೇಕು ಎಂದು ಯತ್ನಾಳ ನೇರವಾಗಿ ಮಠಾಧೀಶರಿಗೆ ಎಚ್ಚರಿಕೆ‌‌ ನೀಡಿದ್ದಾರೆ.

Body:ಸರ್ಕಾರ ಮೂರುವರೆ ವರ್ಷ ಇರ್ತದೆ, ಯಡಿಯೂರಪ್ಪ ಸಿ ಎಂ‌ ಆಗಿರುತ್ತಾರೆ. ಮುಖ್ಯಮಂತ್ರಿಗಳು ರಾಜ ಇದ್ದಂತೆ,ರಾಜನಿಗೆ ಯಾರೂ ಮಠಾಧೀಶರು ಬೆದರಿಕೆ ಹಾಕಬಾರದು ಎಂದು ಯತ್ನಾಳ ಮಠಾಧೀಶರಿಗೆ ವಾರ್ನ್ ಮಾಡಿದರು‌

ನಿರಾಣಿಗೆ ಸಚಿವ ಸ್ಥಾನ ನೀಡಬೇಕು ಎಂದು ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯತ್ನಾಳ ನಿರಾಣಿಯನ್ನು ಬಿಜೆಪಿಗೆ ತಂದವರು ನಾನು ಹಾಗೂ ಶ್ರೀಕಾಂತ ಕುಲಕರ್ಣಿ,ಅವರನ್ನ ಬೃಹತ್ ಕೈಗಾರಿಕೆ ಮಂತ್ರಿ ಮಾಡಿದ್ದು ಯಡಿಯೂರಪ್ಪ ಅದನ್ನ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕಾರ್ಯಕ್ರಮಕ್ಕೆ ಕರಿಸಿ ನಿರಾಣಿಯನ್ನು ಮಂತ್ರಿ‌ಮಾಡಬೇಕು ಎಂದು ಹೇಳುತ್ತಿರೋದನ್ನ ನಾನು ಖಂಡಿಸುತ್ತೇನೆ. ಸ್ವಾಮೀಜಿಗಳೇ ನಿಮ್ಮ ನಡುವಳಿಕೆಯಿಂದ ಪಂಚಮಸಾಲಿ‌ ಸಮಾಜಕ್ಕೆ ಅಪಮಾನವಾಗಿದೆ. ಈ ರೀತಿ ನಿಮ್ಮ ವರ್ತನೆ ಮುಂದುವರೆದರೆ ನಾವು ಯಾವ ಶಾಸಕರೂ ಸುಮ್ನೆ ಕೂರುವುದಿಲ್ಲ ಎಂದು ವಚನಾನಂದ ಸ್ವಾಮೀಜಿಗೆ ಯತ್ನಾಳ ಎಚ್ಚರಿಸಿದರು..

ನಮ್ಮವರಿಂದಲ್ಲೆ ನಿಜಲಿಂಗಪ್ಪ, ಜೆ ಹೆ ಎಚ್ ಪಟೇಲ್, ವಿರೇಂದ್ರ ಪಟೇಲ್ ಸೇರಿದಂತೆ ನಮ್ಮವರೆ ಬೆನ್ನಲ್ಲೇ ಚೂರಿ ಹಾಕಿದ್ದಾರೆ.‌ಈಗ ಮಾತನಾಡುವ ಸ್ವಾಮೀಜಿ ಪ್ರವಾಹ ಸಮಯದಲ್ಲಿ ಎಲ್ಲಿ ಹೋಗಿದ್ರು ಪ್ರಶ್ನೀನಿಸಿ, ಸ್ವಾಮೀಜಿಯಾಗಿ ಧರ್ಮ ಭೋದನೆ ಮಾಡಲಿ ಅವರ ಮಠದ ಮುಂದೆ ಹೋಗಿ ಕೂರಬೇಕಾಗುತ್ತೆ. ಅದ್ಕಾಗಿ ನಾನು ಯಾವ ಸ್ವಾಮೀಜಿ ಬಳಿ ಹೋಗಿ ಮಂತ್ರಿ ಕೊಡಸಿ ಎಂದು ಹೋಗಿಲ್ಲ ನನಗೆ ಅರ್ಹತೆ ಇದ್ರೆ ಮಂತ್ರಿ ಮಾಡ್ರಿ,ಇಲ್ಲದಿದ್ರೆ ಬೇಡ, ನನ್ನ ಅರ್ಹತೆ ಏನು ಎಂಬುದು ವಾಜಪೇಯಿ ಅವರಿಗೆ ಗೊತ್ತಿತ್ತು, ವಿಜಯಪುರ ಜನತೆ ಕೂಡ ಗೊತ್ತಿದೆ. ನಿನ್ನೆ ಸ್ವಾಮೀಜಿ ಜೊತೆ ಸೇರಿ ನಿರಾಣಿ ಅವ್ರು ಮಾತನಾಡಿದ್ದು ನಮ್ಮ ಸಮಾಜ ಒಪ್ಪೂದಿಲ್ಲ.ನಾನು ಒಪ್ಪೂದಿಲ್ಲ ನಿರಾಣಿ ಅವರು( ಯಾವ ಪೀಠದಲ್ಲಿ) ಜೋರಾಗುತ್ತೂ ಅಲ್ಲಿ ಮೆಂಟೇನ್ ಮಾಡ್ತಾರೆ. ನಾವು ಉಳಿದ ನಾವು ಎಂ ಎಲ್ ಎ ಗಳೇನು ಕತ್ತೆ ಕಾಯ್ತಿದೇವಾ, ಎಲ್ಲವೂ ಅವರ ಮನೆಗೆ ಬೇಕಾ? ಎಂ ಎಲ್‌ಎ, ಎಂ‌ಎಲ್‌ಸಿ‌,ಉಪ ಮುಖ್ಯಮಂತ್ರಿ ಸೇರಿದಂತೆ ಅವರ ಮನೆಯಲ್ಲಿರುವ ಬೆಕ್ಕು ನಾಯಿಗಳಿಗೆ,ಅವರಿಗೆ ಬೇಕು ಎಂದು ಶಾಸಕ ಯತ್ನಾಳ ಆಕ್ರೋಶ ಹೊರ ಹಾಕಿದರು.

Conclusion:ಸ್ವಾಮೀಜಿಗಳು ಬಹಳ ಉಪಕಾರ ಮಾಡಿದ್ದಾರೆ ಎಂದು ಹೇಳ್ತಾರೆ, ಏನು ಉಪಕಾರ ಮಾಡಿದ್ದಾರೆ? ಒಂದಿಷ್ಟು ಹಣ ಕೊಟ್ಟಿರಬೇಕು ಅದೇ ಉಪಕಾರವೇ ಎಂದು ಪ್ರಶ್ನೀಸಿ ಐದು ವರ್ಷ ಕೈಗಾರಿಕಾ ಮಂತ್ರಿ ಮಾಡಿದ್ದಾಗ,ನಾಲ್ಕೈದು ಶುಗರ್ ಪ್ಯಾಕ್ಟರಿ ಮಾಡಿಕೊಂಡಿದ್ದಾರೆ. ನಾನು ಏನು ಬೇಡುವುದಿಲ್ಲ ಎಂದು ಯಡಿಯೂರಪ್ಪ ಅವರಿಗೆ ವಚನ ಕೊಟ್ಟಿದೇನಿ ನಾನು ಮಂತ್ರಿ ಬೇಡುವುದಿಲ್ಲ ಅಭಿವೃದ್ಧಿ ಮಾತ್ರ ಬೇಡ್ತಿನಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ ವಚನಾನಂದ ಸ್ವಾಮೀಜಿ ಹಾಗೂ ನಿರಾಣಿ ವಿರುದ್ಧ ಗರಂ‌ ಆದ್ರು..

ಶಿವಾನಂದ ಮದಿಹಳ್ಳಿ
ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.