ವಿಜಯಪುರ: ಸಪ್ಲಾಯರ್ಸ್ಗಳು ಯಾರ್ಯಾರಿಗೆ ಏನೇನು ಸಪ್ಲೈ ಮಾಡ್ತಾರೋ, ಯಡಿಯೂರಪ್ಪನವರಿಗೆ ಏನು ಸಪ್ಲೈ ಮಾಡ್ತಾರೋ, ಮೇಲಿನವರಿಗೆ ಏನು ಸಪ್ಲೈ ಮಾಡ್ತಾರೋ ಎಲ್ಲಾ ಗೊತ್ತಿದೆ. ಕಾಲ ಬಂದಾಗ ಎಲ್ಲವನ್ನೂ ಬಹಿರಂಗಪಡಿಸುತ್ತೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೆಸರು ಹೇಳದೇ ಪರೋಕ್ಷವಾಗಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಗುಡುಗಿದರು.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆ.ಟಿ.ಪಾಟೀಲ ಸಿಡಿ, ಹುಲ್ಲಪ್ಪ ಮೇಟಿ ಸಿಡಿ ಹಾಗು ಮತ್ತೆ ಯಾರ್ಯಾರಿಗೆ ಏನೇನು ಸಪ್ಲೈ ಮಾಡಿದ್ದಾರೋ ಅವರೆಲ್ಲಾ ನಾಲಾಯಕರು. ನಾನು ಸಪ್ಲಾಯರ್ ಅಲ್ಲ. ಮಂತ್ರಿಯಾಗಲು, ಎಂಎಲ್ಸಿಯಾಗಲು ಯಾರ ಕೈ-ಕಾಲು ಹಿಡಿದಿಲ್ಲ. ಇಂತಹ ನಾಲಾಯಕರಿಂದ ಏನೂ ಕಲಿಯಬೇಕಾದ ಅವಶ್ಯಕತೆ ಇಲ್ಲ ಎಂದು ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಮ, ಬ್ರಹ್ಮನ ಬಗ್ಗೆ ಮಾತನಾಡುವ ಕಳ್ಳರೆಲ್ಲಾ ಸಿಡಿ ಇಟ್ಟುಕೊಂಡು, ಬ್ಲ್ಯಾಕ್ಮೇಲ್ ಮಾಡಿ ಮಂತ್ರಿಯಾಗಿದ್ದಾರೆ ಎಂದು ಇದೇ ವೇಳೆ ಅವರು ಆರೋಪಿಸಿದರು.
ಇದನ್ನೂ ಓದಿ: ಸಿಡಿಲೇಡಿ ಭೇಟಿಗಾಗಿ ಕಾಯುತ್ತಿರುವ ಪೋಷಕರು: ಎಸ್ಐಟಿಗೆ ಮನವಿ ಸಲ್ಲಿಕೆ