ವಿಜಯಪುರ: ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ ಮನೆ ಎದುರು ಶಾಸಕ ಜಮೀರ್ ಅಹಮ್ಮದ್ ಧರಣಿ ಕುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ತಾಕತ್ ಇದ್ರೆ , ಪಾಕಿಸ್ತಾನದ ಬಾರ್ಡರ್ನಲ್ಲಿ ಕುಳಿತುಕೊಂಡು ಧೈರ್ಯ ತೋರಿಸಲಿ ಎಂದು ಜಮೀರ್ ಅಹ್ಮದ್ಗೆ ಸವಾಲು ಹಾಕಿದರು. ಜಮೀರ್ ಮೊದಲು ಯಡಿಯೂರಪ್ಪ ಮನೆ ಎದುರು ವಾಚ್ಮನ್ ಡ್ಯೂಟಿ ಮಾಡಲಿ. ಎಂಎಲ್ಎ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಅಂದ್ರು. ಯಡಿಯೂರಪ್ಪ ಸಿಎಂ ಆದರೆ ನಾನು ಅವರ ಮನೆ ಮುಂದೆ ವಾಚ್ಮನ್ ಡ್ಯೂಟಿ ಮಾಡುತ್ತೇನೆ ಎಂದು ಅವರೇ ಹೇಳಿದ್ದರು. ಅವರು ಹೇಳಿದ ಹಾಗೆ ನಡೆದುಕೊಳ್ಳಲಿ ಎಂದು ಯತ್ನಾಳ್ ವ್ಯಂಗ್ಯವಾಡಿದರು.
ಜಮೀರ್ ಈ ಮೊದಲು ದೇಶದ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ.ಈ ಕುರಿತು ಜಮೀರ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.