ETV Bharat / state

ಕೇಂದ್ರದ ನೋಟಿಸ್​​ಗೂ ತಲೆಕೆಡಿಸಿಕೊಳ್ಳದ ಬಸನಗೌಡ ಯತ್ನಾಳ್​

ಗುಮ್ಮಟ ನಗರಿ‌ ವಿಜಯಪುರದ ಬಿಜೆಪಿ‌ ಪಾಳಯದಲ್ಲಿ ಸದ್ಯ ಪರಸ್ಪರ ಪರ ವಿರೋಧ ಹೇಳಿಕೆಗಳು ದಿನದಿಂದ‌ ದಿನಕ್ಕೆ‌ ಹೆಚ್ಚುತ್ತಿವೆ. ಇನ್ನು ವಿಜಯಪುರ‌ ನಗರ ಶಾಸಕ ಬಸನಗೌಡ ಪಾಟೀಲ್ (ಯತ್ನಾಳ) ಮಾತಿನ ಒರಸೆಯಿಂದ ತಮ್ಮ ಬಿಜೆಪಿ ಪಕ್ಷದಲ್ಲಿ‌ ಎಲ್ಲವೂ ಸರಿಯಿಲ್ಲ ಎಂಬುದನ್ನ ಮೇಲ್ನೋಟಕ್ಕೆ ಸಾಬೀತು ಪಡಿಸುತ್ತಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್​
author img

By

Published : Oct 10, 2019, 12:59 PM IST

ವಿಜಯಪುರ : ಬಸನಗೌಡ ಪಾಟೀಲ್ ಯತ್ನಾಳ ಸ್ವಪಕ್ಷದ ವಿರುದ್ಧವೇ ಸಿಡಿದು ನೆರೆ ಸಂತ್ರಸ್ತರ ಪರ ಬ್ಯಾಟಿಂಗ್ ಮಾಡ್ತಿರೋದು ರಾಜ್ಯದ ಕೆಲವು ನಾಯಕರಿಗೆ ಮುಜುಗರ ಉಂಟು ಮಾಡುತ್ತಿದೆ.‌ ಹೀಗಾಗಿ ಬಿಜೆಪಿ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ಕೇಂದ್ರದ ನೋಟಿಸ್​​ಗೂ ತಲೆಕೆಡಿಸಿಕೊಳ್ಳದ ಬಸನಗೌಡ ಪಾಟೀಲ್ ಯತ್ನಾಳ್​

ಹೌದು, ಬಿಜೆಪಿ ಶಾಸಕ‌ ಬಸನಗೌಡ ಯತ್ನಾಳ್​ ಎಂದರೇ ಸಾಕು ಸದಾ‌ ರಾಜ್ಯದಲ್ಲಿ ಒಂದಲ್ಲ ಒಂದು ಸುದ್ದಿಯಲ್ಲಿರುತ್ತಾರೆ. ಉತ್ತರ ಕರ್ನಾಟಕ ನೆರೆ ಪರಿಹಾರ ‌ನೀಡುವ ಕುರಿತಾಗಿ ಸಂತ್ರಸ್ತರ ಪರ ಹೇಳಿಕೆಗಳನ್ನ ನೀಡುತ್ತಲ್ಲೇ ರಾಜ್ಯದ ಕೇಂದ್ರ ಸಚಿವರ ವಿರುದ್ಧ ಗುಡುಗಿದ್ದರು. ಪಕ್ಷದ ವರಿಷ್ಠರಿಗೂ ಮಾತಿನ ಬಿಸಿ ಮುಟ್ಟಿಸಿದ್ರು, ಹೀಗಾಗಿ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಯತ್ನಾಳ್ ಹೇಳಿಕೆಗಳನ್ನು‌ ಸಮರ್ಥಿಸುವಂತೆ‌ 10 ದಿನ ಗಡವು ನೀಡಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಆದರೂ ಕೂಡ ಬಸನಗೌಡ ಯತ್ನಾಳ್ ತಮ್ಮ ಹಳೆಯ ಚಾಳಿ‌ ಮುಂದುವರಿಸಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಬನ್ನಿ ವಿನಿಮಯ ಮಾಡಿಕೊಳ್ಳಲು ಬಂದ ಕ್ಷೇತ್ರದ ಜನತೆಗೆ ಶಾಸಕ ಯತ್ನಾಳ್​ ಹಬ್ಬದ ಊಟದ ವ್ಯವಸ್ಥೆ ಮಾಡಿದ್ರು.

ಒಟ್ಟಾರೆ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ‌ ವಿಜಯಪುರ ನಗರ ಶಾಸಕನಿಗೆ ಶೋಕಾಸ್ ನೋಟಿಸ್ ಬಂದಿದ್ದು, ಸಾರ್ವಜನಿಕ ವಲಯದಲ್ಲಿ‌ ಚರ್ಚೆಯಾಗುತ್ತಿದೆ. ಇನ್ನು ಯತ್ನಾಳರ ಈ ಹೇಳಿಕೆ ಪಕ್ಷಕ್ಕೆ ಮುಜುಗರ ತರುತ್ತದೆ ಎನ್ನುವುದು ಸ್ವಪಕ್ಷೀಯರ ಅಳಲು. ಅಲ್ಲದೇ ತಮ್ಮ ಜಿಲ್ಲೆಯ ಸಂಸದರ ವಿರುದ್ಧ ಕೂಡ ಯತ್ನಾಳ ಮಾತಿನ‌ ಒರಸೆ ಮುಂದುವರೆಸಿದ್ದಾರೆ. ಅದೇನೇ ಇರಲಿ‌ ಸಂತ್ರಸ್ತರಿಗೆ ನ್ಯಾಯ ಸಿಕ್ಕರೆ ಸಾಕು.

Intro:Anchor: ಗುಮ್ಮಟ ನಗರಿ‌ ವಿಜಯಪುರದಲ್ಲಿ ಸದ್ಯ ಬಿಜೆಪಿ‌ ಪಾಳ್ಯದಲ್ಲಿ ಪರಸ್ಪರ ಪರ ವಿರೋಧ ಹೇಳಿಕೆಗಳು ದಿನದಿಂದ‌ದಿನಕ್ಕೆ‌ ಹೆಚ್ಚುತ್ತಿವೆ. ಇನ್ನೂ ವಿಜಯಪುರ‌ ನಗರ ಶಾಸಕ ಬಸನಗೌಡ ಪಾಟೀಲ್ ( ಯತ್ನಾಳ ) ಮಾತಿನ ಒರಸೆಯಿಂದ ತಮ್ಮ ಬಿಜೆಪಿಯ ಪಕ್ಷದಲ್ಲಿ‌ ಎಲ್ಲವೂ ಸರಿಯಿಲ್ಲ ಎಂಬುದನ್ನ ಮೇಲ್ನೋಟಕ್ಕೆ ಸಾಬೀತು ಪಡಿಸುತ್ತಿದ್ದಾರೆ. ಸ್ವ ಪಕ್ಷದ ವಿರುದ್ಧವೇ ಸಿಡಿದು ನೆರೆ ಸಂತ್ರಸ್ತರ ಪರ ಬ್ಯಾಟಿಂಗ್ ಮಾಡ್ತಿರೋದು ರಾಜ್ಯ ಕೇಲವು ನಾಯಕರಿಗೆ ಮುಜುಗರ ಉಂಟು ಮಾಡುತ್ತಿದೆ.‌ ಹೀಗಾಗಿ ಬಿಜೆಪಿ ಪಕ್ಷದ ವರಿಷ್ಠರ ಕೆಂಗಣ್ಣಿಗೆ ಗುರಿಯಾಗುತ್ತಿದ್ದು, ಇವತ್ತು ಕೂಡ ಯತ್ನಾಳವರು ಸ್ವ ಪಕ್ಷದ ಮುಖಂಡರಗೆ ಮಾತಿನ ಚಾಟಿ ಏಟು‌ ಯಾವ ರೀತಿಯಲ್ಲಿ ಬೀಸಿದರು ಎಂಬುದರ ಕುರಿತು ಇಲ್ಲಿದೆ‌‌ ನೋಡಿ ಇಂಟ್ರಸ್ಟಿಂಗ್ ಸ್ಟೋರಿ ..

Body:ವೈ.ಓ 01: ಬಿಜೆಪಿ ಶಾಸಕ‌ ಬಸನಗೌಡ ಯತ್ನಾಳ ಎಂದರೇ ಸಾಕು ಸದಾ‌ ರಾಜ್ಯದಲ್ಲಿ ಒಂದಲ್ಲಾ ಒಂದು ಸುದ್ದಿಯಲ್ಲಿರುತ್ತಾರೆ. ಉತ್ತರ ಕರ್ನಾಟಕ ನೆರೆ ಪರಿಹಾರ ‌ನೀಡುವ ಕುರಿತಾಗಿ ಸಂತ್ರಸ್ತರ ಪರ ಹೇಳಿಕೆಗಳನ್ನ ನೀಡುತ್ತಲ್ಲೇ ರಾಜ್ಯದ ಕೇಂದ್ರ ಸಚಿವರ ವಿರುದ್ಧ ಗುಡುಗಿದರು. ಪಕ್ಷದ ವರಿಷ್ಠತಿಗೂ ಮಾತಿನ ಬಿಸಿ ಮುಟ್ಟಿಸಿದ್ರು ಹೀಗಾಗಿ ಕೇಂದ್ರ ಬಿಜೆಪಿ ಶಿಸ್ತು ಸಮಿತಿ ಯತ್ನಾಳ‌ ಹೇಳಿಕೆಗಳನ್ನು‌ ಸಮರ್ಥಿಸುವಂತೆ‌ 10 ದಿನ ಗಡವು ನೀಡಿ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಆದ್ರೂ ಕೂಡ. ಬಸನಗೌಡ ಯತ್ನಾಳ ತಮ್ಮ ಹಳೆಯ ಚಾಳಿ‌ ಮುಂದುರಿಸಿದ್ದಾರೆ. ಇವತ್ತು ಕೂಡ ಯತ್ನಾಳ ನಿವಾಸದಲ್ಲಿ ದಸರಾ ಹಬ್ಬದ ಬನ್ನಿ ವಿನಿಮಯ ಮಾಡಿಕೊಳ್ಳು ಕೇತ್ರದ ಜನ್ರ ದಂಡು ಹರಿದು ಬರುತ್ತಿತ್ತು. ದಸರಾ ಹಬ್ಬದ ಶುಭ ಕೋರಲು ಬಂದ ಕ್ಷೇತ್ರ ಜನತೆಗೆ ಶಾಸಕ ಯತ್ನಾಳ ಹಬ್ಬ ಊಟದ ವ್ಯವಸ್ಥೆ ಮಾಡಿದ್ರು..

ವೈ.ಓ02: ನಾನು ಸಂತ್ರಸ್ತರ ಪರ ಮಾತನಾಡದಿದ್ದರೆ. ಸಿಎಮ್ ಸ್ಥಾನಕ್ಕೆ ರಾಜೀನಾಮೆ ನೀಡುಬೇಕಿತ್ತು ಅಂತಾ ಹೊಸ ಬಾಂಬ್ ಸಿಡಿಸಿದ್ರು ಅಲ್ಲದೇ ಕರ್ನಾಟಕದ ಇಬ್ಬರು ಕೇಂದ್ರ ಸಚಿವರು ಸಿಎಂ ಯಡಿಯೂರಪ್ಪನ್ನ ಮುಗಿಸಲು‌ ಪ್ರಯತ್ನಿಸುತಗತಿದ್ದಾರೆ ಅಂತಾ‌ ಅಚ್ಚರಿ ಮೂಡಿಸಿದ್ರು ಇಲ್ಲಿಗೆ ಸುಮನ್ನಾಗದ‌ ಬಸನಗೌಡ್ರು ವಿಜಯಪುರ ಕ್ಷೇತ್ರದ ಸಂಸದ ರಮೇಶ ಜಿಗಜಿಣಗಿಯವರು ನರೇಂದ್ರ ಮೋದಿ‌ಯವರ ಪೋಟೋ ಮೇಲೆ ಆರಿಸಿ ಬಂದವರಿಗೆ ಜನ್ರ ಕಷ್ಟ ಅರಿವಾಗೋದಿಲ್ಲ ಜಿಗಜಿಣಗಿಯವರು ಯಾವುದೇ ಹಳ್ಳಿಗೂ ಹೋಗಿ ಜನ್ರ ಕಷ್ಟ ಕೇಳಿಲ್ಲ , ಕೇವಲ ಒಂದು ವರ್ಗದ ಪರವಾಗಿ ಮಾತನಾಡುತ್ತಿರಿ ನಿಮ್ಮಗೆ ಎಲ್ಲ ವರ್ಗದವರು ಓಟ್‌ ಹಾಕಿ ಗೆಲ್ಲಿಸಿದ್ದಾರೆ. ನಿಮ್ಮಿಂದ ನಾನು ನೈತಿಕ ಪಾಠ ಕಲಿಯಬೇಕಿಲ್ಲ ಅಂತಾ ಸಂಸದ ರಮೇಶ ಜಿಗಜಿಣಗಿಯವರಿಗೆ‌ ಟಾಂಗ್ ನೀಡಿದ್ರು..

ಬೈಟ್01: ಬಸನಗೌಡ ಯತ್ನಾಳ ( ವಿಜಯಪುರ ನಗರ‌ ಶಾಸಕ)

ವೈ.ಓ03.‌ಇನ್ನೂ ಮಾಧ್ಯಮಗಳಿಗೆ‌‌ ನಿರ್ಬಂಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಾಧ್ಯಮಗಳಿಗೆ ಸ್ವಾತಂತ್ರ್ಯ ಇದೆ‌. ನಾವು ವಿಧಾನಸಭೆಯಲ್ಲಿ ಶಿಸ್ತಿನಿಂದ ವರ್ತನೆ‌ ಮಾಡ್ತಿವೋ ಅಥವಾ ಜಾತ್ರೆ,ಸಂತೆಯಲ್ಲಿ‌ ಮಾಡಿದಂಗೆ ನಮ್ಮ ವರ್ತನೆ ಇರ್ತದೋ ಎಂಬುದನ್ನ ಜನ್ರು ನೋಡ್ತಾರೆ‌ ಅಂತಾ ಶಾಸಕರು ಶಿಸ್ತಿನಿಂದ ‌ಇರಲು‌ ಸಾಧ್ಯವಾಗುತ್ತದೆ‌. ಕಾರ್ಯ ಕಲಾಪ‌ನಾಡಿನ‌‌ ಜನ್ರು ನೋಡಬೇಕು ನಾನು ನಿಷೇಧ ಕುರಿತಾಗಿ ವಿಧಾನಸಭೆ ಅಧ್ಯಕ್ಷರಿಗೆ ಮನವಿ ಮಾಡ್ತಿನಿ‌ ಈ ರೀತಿ ಯಾಕೆ‌ ಆಗಿದೆ‌ ಅಂತಾ ನನಗೂ ಗೊತ್ತಿಲ್ಲ, ಮಾಧ್ಯಮಗಳಿಗೆ ಸ್ವಾತಂತ್ರ್ಯ ‌ಇದೆ‌. ನಾಳೆ ಬೆಂಗಳೂರಿಗೆ ಹೋದ ತಕ್ಷಣ ಅವರಿಗೆ ಭೇಟಿ ಮಾಡ್ತಿನಿ‌ ಅಂತಾ ಮಾಧ್ಯಮದವರ ಪರವಾಗಿ‌ ಹೇಳಿದ್ರು. ಇನ್ನೂ ಶಾಸಕ ಬಸನಗೌಡ ಯತ್ನಾಳ ನೇರವಾಗಿ ಮೋದಿ‌ ,ಶಾ ಭೇಟಿ‌ ಮಾಡಲು‌ ಪತ್ರ. ಬರೆದಿದ್ದು, ಪಕ್ಷದ ವರಿಷ್ಠರ ಉತ್ತರಕ್ಕಾಗಿ ಕಾಯುತ್ತಿದ್ದಾರೆ.‌.

ಬೈಟ್ 02: ಬಸನಗೌಡ ಯತ್ನಾಳ

Conclusion:ವೈ.ಓ04: ಒಟ್ಟಾರೆಯಾಗಿ ಸಂತ್ರಸ್ತರ ಪರವಾಗಿ ಧ್ವನಿತ್ತಿದ್ದಕ್ಕಾಗಿ‌ ವಿಜಯಪುರ ನಗರ ಶಾಸಕನಿಗೆ ಶೋಕಾಸ್ ನೋಟಿಸ್ ಬಂದಿದ್ದು ಸಾರ್ವಜನಿಕ ವಲಯದಲ್ಲಿ‌ ಚರ್ಚೆಯಾಗುತ್ತಿದ್ದು,‌ಇನ್ನೂ ಸ್ವ ಪಕ್ಷದ ನಾಯಕರಿಗೆ ಮುಜುಗರ ತರುವ ರೀತಿಯಲ್ಲಿ ಹೇಳಿಕೆಗಳು‌ ಇದಕ್ಕೆ ಕಾರಣ ಎಂದು ಬಿಜೆಪಿ ನಾಯಕರ ನಿಲುವಾಗಿದೆ. ಇವತ್ತು ತಮ್ಮ‌ಜಿಲ್ಲೆ ಸಂಸದರ ವಿರುದ್ಧ ಕೂಡ ಯತ್ನಾಳ ಮಾತಿನ‌ ಒರಸೆ ಮುಂದುವರೆದಿದೆ. ಅದೇನೇ ಇರಲಿ‌ ಸಂತ್ರರಿಗೆ‌ ನ್ಯಾಯ ಒದಗಿಸುವ ಕಾರ್ಯ ಮಾಡಲಿ ಎಂಬುದೆ ನಮ್ಮಲ್ಲರ ಆಶಯ..

(ಸರ್ ಸ್ಟೋರಿ ಸಂಬಂದಿಸಿದಂತೆ ಇವತ್ತು ಶರಣು ಸರ್ ಕಳುಸಿರುವ ಯತ್ನಾಳ ವಿಜ್ವಲ್ಸ ಹಾಗೂ ಹೇಳಿಕೆಯನ್ನು ಈ‌ ಸ್ಟೋರಿಗೆ ಬಳಸಿ)

ಶಿವಾನಂದ ಮದಿಹಳ್ಳಿ
ವಿಜಯಪುರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.