ETV Bharat / state

ಭೀಮಾತೀರದಲ್ಲಿ ಸದ್ದು ಮಾಡಿದ ಕಿಡ್ನಾಪ್​ ಕೇಸ್​.. ಬೇಕರಿ ಮಾಲೀಕನ ಅಪಹರಿಸಿ​ ₹50 ಲಕ್ಷಕ್ಕೆ ಬೇಡಿಕೆ - bakery owner Kidnapped in vijayapur

ಭೀಮಾತೀರದಲ್ಲಿ ಕಿಡ್ನಾಪ್​ ಪ್ರಕರಣವೊಂದು ಸದ್ದು ಮಾಡಿದೆ. ರಾಜಸ್ಥಾನ ಮೂಲದ ಮಾನ್​ಸಿಂಗ್​ ಅಪಹರಣಕ್ಕೊಳಗಾದವರು. ಕಾರ್ಯಾಚರಣೆ ನಡೆಸಿದ ಪೊಲೀಸರು ಮಾನ್​ಸಿಂಗ್​ರನ್ನು ರಕ್ಷಿಸಿ ಇಂಡಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

kidnapped
ಮಾಲೀಕನ ಕಿಡ್ನಾಪ್
author img

By

Published : Feb 22, 2022, 2:38 PM IST

ವಿಜಯಪುರ: ಹಣಕ್ಕಾಗಿ ವ್ಯಕ್ತಿಯೊಬ್ಬನನ್ನು ಅಪಹರಣ ಮಾಡುವ ಮೂಲಕ ಭೀಮಾತೀರದಲ್ಲಿ ಅಪರಾಧ ಚಟುವಟಿಕೆಗಳು ಮತ್ತೆ ಶುರುವಾಗಿವೆ. ಬಿಳಿ ಬಣ್ಣದ ಸ್ವಿಫ್ಟ್​ ಕಾರಿನಲ್ಲಿ ಬಂದ ಮೂವರು ಅಪಹಣಕಾರರು ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಬೇಕರಿ ಮಾಲೀಕನೊಬ್ಬನನ್ನು ಕಿಡ್ನಾಪ್ ಮಾಡಿದ್ದಲ್ಲದೇ ಹಲ್ಲೆ ಮಾಡಿದ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ರಾಜಸ್ಥಾನ ಮೂಲದ ಮಾನ್​ಸಿಂಗ್​ ಕಿಡ್ನಾಪ್​ ಆಗಿ ಹಲ್ಲೆಗೊಳಗಾದವರು. ಕಾರ್ಯಾಚರಣೆ ನಡೆಸಿದ ಪೊಲೀಸರು ಮಾನ್​ಸಿಂಗ್​ರನ್ನು ರಕ್ಷಿಸಿ ಇಂಡಿ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ನಡೆದಿದ್ದೇನು?: ನಿನ್ನೆ ಸಂಜೆ 6.30 ರ ಸುಮಾರಿನಲ್ಲಿ ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಮಾನ್​ಸಿಂಗ್​ರ ಬೇಕರಿ ಅಂಗಡಿಗೆ ಬಂದ ದುಷ್ಕರ್ಮಿಗಳು ಸ್ವೀಟ್​ ಆರ್ಡರ್​ ಕೊಡುವ ನೆಪದಲ್ಲಿ ಮಾನ್​ಸಿಂಗ್​ರನ್ನು ಕಾರಿನ ಹತ್ತಿರ ಕರೆದಿದ್ದಾರೆ. ಹತ್ತಿರ ಬಂದ ಮಾನ್​ಸಿಂಗ್​ರನ್ನು ಕಾರಿನೊಳಗೆ ಎಳೆದುಕೊಂಡು ಅಪಹರಣ ಮಾಡಿದ್ದಾರೆ.

ಬಳಿಕ ಮಾನ್​ಸಿಂಗ್​ರ ಕುಟುಂಬಸ್ಥರಿಗೆ ಕರೆ ಮಾಡಿ 50 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಕುಟುಂಬಸ್ಥರು 20 ಲಕ್ಷ ರೂಪಾಯಿ ಕೊಡುವುದಾಗಿ ಒಪ್ಪಿಕೊಂಡಿದ್ದಾರೆ. ಝಳಕಿ ಬಳಿ ಬಂದು ಹಣ ನೀಡುವಂತೆ ಅಪಹರಣಕಾರರು ಸೂಚಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆ: ಬೇಕರಿ ಮಾಲೀಕ ಮಾನ್​ಸಿಂಗ್​ರ ಅಪಹರಣದ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ ಝಳಕಿ ಬಳಿ 20 ಲಕ್ಷ ನೀಡುವಂತೆ ಬೇಡಿಕೆ ಇಟ್ಟ ಬಗ್ಗೆ ತಿಳಿಸಿದ್ದಾರೆ. ಅದರಂತೆ ಅಪಹರಣಕಾರರ ಸೆರೆ ಹಿಡಿಯಲು ಪೊಲೀಸರು ಯೋಜನೆ ರೂಪಿಸಿದ್ದಾರೆ. 20 ಲಕ್ಷ ರೂಪಾಯಿ ಸಮೇತ ಕುಟುಂಬಸ್ಥರ ಜೊತೆಗೆ ಪೊಲೀಸರು ಅಡಗಿ ಕುಳಿತಿದ್ದರು.

ಝಳಕಿ ಬಳಿ ಮಾನ್​ಸಿಂಗ್​ ಕುಟುಂಬಸ್ಥರ ಬಳಿ ಹಣ ಪಡೆಯಲು ದುಷ್ಕರ್ಮಿಗಳು ಬಂದಾಗ ಪೊಲೀಸರನ್ನು ಕಂಡು ಪೇರಿ ಕಿತ್ತಿದ್ದಾರೆ. ಕಾರು ಬೆನ್ನತ್ತಿದ ಪೊಲೀಸರು ಲೋಣಿ ಬಳಿ ಅಪಹರಣಕಾರರನ್ನು ಬಂಧಿಸಿದ್ದಾರೆ. ತಡರಾತ್ರಿಯವರೆಗೂ ಪೊಲೀಸರು ಕಾರ್ಯಾಚರಣೆ ನಡೆಸಿ, ಬೇಕರಿ ಮಾಲೀಕ ಮಾನ್​ಸಿಂಗ್​ರನ್ನು ರಕ್ಷಿಸಿದ್ದಾರೆ.

ಓದಿ: ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಪೋಟ: ಸುಟ್ಟು ಕರಕಲಾದ 6 ಕಾರ್ಮಿಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.