ETV Bharat / state

ಹೆಚ್ಚಿನ ಚಿಕಿತ್ಸೆ.. ಹೈದರಾಬಾದ್​ಗೆ ಶಿಫ್ಟ್ ಆದ ಭೀಮಾತೀರದ ಸಾಹುಕಾರ ಭೈರಗೊಂಡ  ​​ - Bairagonda attack

ನಿನ್ನೆ ತಡರಾತ್ರಿಯೇ ಪೂರ್ಣ ಭದ್ರತೆಯಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಅವರನ್ನು ವಿಜಯಪುರದಿಂದ ಸ್ಥಳಾಂತರ ಮಾಡಲಾಗಿದೆ. ಭೈರಗೊಂಡ ಮೇಲೆ ನಡೆದ ದಾಳಿಯಲ್ಲಿ ಮೂರು ಗುಂಡು ಅವರಿಗೆ ತಗುಲಿದ್ದವು..

Bairagonda
ಭೀಮಾತೀರದ ಸಾಹುಕಾರ ಭೈರಗೊಂಡ
author img

By

Published : Nov 7, 2020, 1:34 PM IST

ವಿಜಯಪುರ : ಭೀಮಾತೀರದ ಸಾಹುಕಾರ ಮಹಾದೇವ ಭೈರಗೊಂಡ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್​​​​ನ ಖಾಸಗಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. ತಡರಾತ್ರಿ‌ ಆ್ಯಂಬುಲೆನ್ಸ್​​​ ಮೂಲಕ ಬಿಗಿ ಭದ್ರತೆಯಲ್ಲಿ ಅವರನ್ನು ಹೈದರಾಬಾದ್​​​​ಗೆ ಕರೆದುಕೊಂಡು ಹೋಗಲಾಗಿದೆ.

ಆದರೆ, ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಎಸ್​​ಪಿ ಅನುಪಮ್ ಅಗರವಾಲ್, ವಿಜಯಪುರದ ಬಿಎಲ್​​​ಡಿಇ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳಾಂತರ ಮಾಡಲಾಗಿದೆ. ಆದರೆ, ಭದ್ರತೆ ದೃಷ್ಟಿಯಿಂದ ಯಾವ ಕಡೆ ಸ್ಥಳಾಂತರ ಮಾಡಲಾಗಿದೆ ಎಂಬ ಮಾಹಿತಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ನಿನ್ನೆ ತಡರಾತ್ರಿಯೇ ಪೂರ್ಣ ಭದ್ರತೆಯಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಅವರನ್ನು ವಿಜಯಪುರದಿಂದ ಸ್ಥಳಾಂತರ ಮಾಡಲಾಗಿದೆ. ಭೈರಗೊಂಡ ಮೇಲೆ ನಡೆದ ದಾಳಿಯಲ್ಲಿ ಮೂರು ಗುಂಡು ಅವರಿಗೆ ತಗುಲಿದ್ದವು.

ಅದನ್ನು ವಿಜಯಪುರದ ಬಿಎಲ್​ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೊರ ತೆಗೆಯಲಾಗಿದೆ. ಬಿಪಿ ಹಾಗೂ ಸಕ್ಕರೆ ಕಾಯಿಲೆ ಇರುವ ಕಾರಣ ಕೃತಕ ಉಸಿರಾಟದಲ್ಲಿ ಮಹಾದೇವ ಸಾಹುಕಾರ ಭೈರಗೊಂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.