ETV Bharat / state

ಜೆಡಿಎಸ್​​​ ಶಾಸಕರ ಮನೆ ಆವರಣದಲ್ಲಿದ್ದ ಶ್ರೀಗಂಧದ ಮರ ಕಳ್ಳತನಕ್ಕೆ ಯತ್ನ - ಆದರ್ಶ ನಗರ ಪೊಲೀಸ್ ಠಾಣೆ

ಗಂಧದ ಮರ ಕತ್ತರಿಸುವ ವೇಳೆ ಎಚ್ಚರಗೊಂಡು ಮನೆಯವರು ಹೊರ ಬಂದಿದ್ದಾರೆ. ಈ ವೇಳೆ ಮನೆಯವರನ್ನು ನೋಡಿ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ..

Attempt to steal sandalwood from JDS MLA's residence
ಜೆಡಿಎಸ್​​​ ಶಾಸಕರ ಮನೆ ಆವರಣದ ಶ್ರೀಗಂಧದ ಮರ ಕಳ್ಳತನಕ್ಕೆ ಯತ್ನ
author img

By

Published : Nov 14, 2020, 12:14 PM IST

ವಿಜಯಪುರ : ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚೌಹಾಣ್​​​ ಮನೆಯ ಆವರಣದಲ್ಲಿರುವ ಗಂಧದ ಮರ ಕಳ್ಳತನದ ಯತ್ನ ನಡೆದಿದೆ. ಇಂದು ನಸುಕಿನ ಜಾವ ಗಂಧದ ಮರ ಕಳ್ಳತನಕ್ಕೆ ಯತ್ನ ನಡೆದಿದೆ.

ಜೆಡಿಎಸ್​​​ ಶಾಸಕರ ಮನೆ ಆವರಣದಲ್ಲಿದ್ದ ಶ್ರೀಗಂಧದ ಮರ ಕಳ್ಳತನಕ್ಕೆ ಯತ್ನ

ಗಂಧದ ಮರ ಕತ್ತರಿಸುವ ವೇಳೆ ಎಚ್ಚರಗೊಂಡು ಮನೆಯವರು ಹೊರ ಬಂದಿದ್ದಾರೆ. ಈ ವೇಳೆ ಮನೆಯವರನ್ನು ನೋಡಿ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ. ಕಾಂಡದ ಸಮೇತ ಕತ್ತರಿಸಿದ್ದರಿಂದ ಮರ ಕೆಳಕ್ಕೆ ಬಿದ್ದರೂ, ಅದನ್ನ ತೆಗೆದುಕೊಂಡು ಹೋಗಲು ಕಳ್ಳರಿಗೆ ಧೈರ್ಯವಾಗಿಲ್ಲ.

ಹಾಗಾಗಿ, ಶ್ರೀಗಂಧ ಮರವನ್ನ ಸ್ಥಳದಲ್ಲಿಯೇ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಈ ಕುರಿತು ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.