ETV Bharat / state

ವಿಜಯಪುರ: ಮುತ್ತೂಟ್ ಫೈನಾನ್ಸ್​ ಕಳ್ಳತನಕ್ಕೆ ಯತ್ನ - Finance company theft

ವಿಜಯಪುರ ನಗರದ ಬಿಎಲ್ ಡಿ ಇ ಹತ್ತಿರದ ಮುತ್ತೂಟ್ ಫೈನಾನ್ಸ್​ನಲ್ಲಿ ಕಚೇರಿ ಬಾಗಿಲು ಒಡೆದು ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.

ಕಳ್ಳತನ
ಕಳ್ಳತನ
author img

By

Published : Sep 27, 2020, 11:28 AM IST

ವಿಜಯಪುರ: ದಿನದಿಂದ ದಿನಕ್ಕೆ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ತಡರಾತ್ರಿ ನಗರದ ಮುತ್ತೂಟ್ ಫೈನಾನ್ಸ್​ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಘಟನೆ ನಡೆದಿದೆ.

ನಗರದ ಬಿಎಲ್​ಡಿಇ ಹತ್ತಿರದ ಮುತ್ತೂಟ್ ಫೈನಾನ್ಸ್ ಕಚೇರಿ ಬಾಗಿಲು ಒಡೆದು ಒಳನುಗ್ಗಿರುವ ಖದೀಮರು, ಹಣ, ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಫೈನಾನ್ಸ್ ನಲ್ಲಿ ಯಾವುದೇ ಬೆಲೆ ಬಾಳುವ ವಸ್ತುಗಳು ದೊರೆಯದ ಹಿನ್ನೆಲೆಯಲ್ಲಿ ಬಂದ ದಾರಿಗೆ ಸುಂಕವಿಲ್ಲವೆಂದು ವಾಪಸ್ ಹೋಗಿದ್ದಾರೆ.

ಬಳಿಕ ಹತ್ತಿರದಲ್ಲಿರುವ ಇನ್ನೊಂದು ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. ಬೆಳಗ್ಗೆ ಫೈನಾನ್ಸ್ ಬಾಗಿಲು ತೆರೆದಿರುವುದನ್ನು ಗಮನಿಸಿದಾಗ ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವುದು ಬೆಳಕಿಗೆ ಬಂದಿದೆ.

ಈ ಹಿಂದೆಯೂ ಇದೇ ಫೈನಾನ್ಸ್​ನಲ್ಲಿ ಹಣ ಕದಿಯಲು ವಿಫಲ ಯತ್ನ ನಡೆಸಲಾಗಿತ್ತು. ಸಿಬ್ಬಂದಿ ಕರ್ತವ್ಯ ಪ್ರಜ್ಞೆಯಿಂದ ಅದು ವಿಫಲವಾಗಿತ್ತು.

ಈ ಕುರಿತು ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.