ETV Bharat / state

ತಾಳಿಕೋಟಿ ಬಳಿ ಕುರಿ ಕದ್ದೊಯ್ಯುತ್ತಿರುವಾಗ ಅಪಘಾತ.. ಕಾರು ಬಿಟ್ಟು ಪರಾರಿಯಾದ ಖದೀಮರು - ತಾಳಿಕೋಟೆ ತಾಲೂಕಿನ ಮುಕರ್ತಿಹಾಳ ಗ್ರಾಮದಲ್ಲಿ ಕುರಿ ಕಳ್ಳರು

ಕುರಿಗಳನ್ನು ಕದಿಯಲು ಬಂದವರ ಕಾರು ಅಪಘಾತಕ್ಕೀಡಾಗಿ, ಬಳಿಕ ಸ್ಥಳದಿಂದ ಕಳ್ಳರು ಪರಾರಿಯಾದ ಘಟನೆ ತಾಳಿಕೋಟೆ ತಾಲೂಕಿನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

attempt-theft-sheeps-in-talikote
ಕುರಿ ಕದಿಯಲು ಬಂದಾಗ ಅಪಘಾತ... ಕಾರು ಬಿಟ್ಟು ಪರಾರಿಯಾದ ಖದೀಮರು
author img

By

Published : Sep 11, 2021, 10:04 AM IST

ವಿಜಯಪುರ: ಕುರಿಗಳನ್ನು ಕದಿಯಲು ಕಾರಿನಲ್ಲಿ ಬಂದ ಕಳ್ಳರು‌ ಫಜೀತಿ‌ ಅನುಭವಿಸಿದ ಘಟನೆ ಜಿಲ್ಲೆಯ ತಾಳಿಕೋಟೆ ತಾಲೂಕಿನ ಮುಕರ್ತಿಹಾಳ ಗ್ರಾಮದ ಹೊರವಲಯದಲ್ಲಿ ತಡರಾತ್ರಿ ನಡೆದಿದೆ.

ಮೂಕರ್ತಿಹಾಳ ಗ್ರಾಮಕ್ಕೆ ಕುರಿಗಳ ಕಳ್ಳತನಕ್ಕೆ ಖದೀಮರು ಕಾರಿನಲ್ಲಿ ಬಂದಿದ್ದರು. ಕಳ್ಳರ ಕೃತ್ಯ ಕಂಡು ಕುರಿಗಾಹಿ ಕೂಗಿದ್ದು, ತಕ್ಷಣ ಎಚ್ಚೆತ್ತ ಖದೀಮರು ಕಾರಿನಲ್ಲಿ ತಾಳಿಕೋಟೆಯತ್ತ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಆದರೆ ಡೋಣಿ ನದಿ ಸೇತುವೆ ಜಲಾವೃತವಾದ ಕಾರಣ ಮುಂದೆ ತೆರಳಲಾಗದೆ, ಮರಳಿ ಮೂಕರ್ತಿಹಾಳದತ್ತ ಬಂದಿದ್ದಾರೆ.

ಎಸ್ಕೇಪ್​ ಆಗುವಾಗ ಕಾರು ಪಲ್ಟಿ:

ಕಳ್ಳರು ಬಂದಿರುವ ಬಗ್ಗೆ ಸುದ್ದಿ ತಿಳಿದ ಗ್ರಾಮಸ್ಥರು ದೊಣ್ಣೆ ಹಿಡಿದು ಹುಡುಕಾಟ ನಡೆಸಿದ್ದರು. ಇದೇ ವೇಳೆ ವಾಪಸ್​ ಬಂದ ಕಳ್ಳರ ಕಾರನ್ನು ಜನರು ತಡೆದಿದ್ದಾರೆ. ಆಗ ತಪ್ಪಿಸಿಕೊಳ್ಳಲು ಯತ್ನಿಸಿದ ಕುರಿಗಳ್ಳರು ಪರಾರಿಯಾಗುವ ವೇಳೆ ಕಾರು (KA 03 - AE 2627) ಪಲ್ಟಿಯಾಗಿದ್ದು, ಅದನ್ನು ಕುರಿಗಳ ಸಮೇತ ಸ್ಳಳದಲ್ಲೇ ಬಿಟ್ಟು ಕಾಲ್ಕಿತ್ತಿದ್ದಾರೆ.

ಘಟನೆ ಬಗ್ಗೆ ಸುದ್ದಿ ತಿಳಿದು ತಾಳಿಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ‌ ಕಲೆಹಾಕಿದ್ದಾರೆ. ಖದೀಮರು ಕಾರನ್ನೂ ಕೂಡ ಕಳ್ಳತನ ಮಾಡಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಬಸ್​- ಬೊಲೆರೋ ನಡುವೆ ಭೀಕರ ಅಪಘಾತ: ನಾಲ್ವರು ಮಹಿಳೆಯರು ಸಾವು, 12 ಮಂದಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.