ETV Bharat / state

ಶಾಸಕ ನಡಹಳ್ಳಿ ಅರೆಹುಚ್ಚ, ಆತನ ಸರ್ಟಿಫಿಕೇಟ್‌ ಎಂಬಿಪಿಗೆ ಬೇಕಿಲ್ಲ : ಸಂಗಮೇಶ ಬಬಲೇಶ್ವರ ವಾಗ್ದಾಳಿ - undefined

ಎ.ಎಸ್.ಪಾಟೀಲ್ ನಡಹಳ್ಳಿ, ಮರದಿಂದ-ಮರಕ್ಕೆ ಹಾರುವ ಮಂಗನಂತೆ. ಕಾಂಗ್ರೆಸ್‍ಗೆ ಬಂದು ದೇವರಹಿಪ್ಪರಗಿಯಲ್ಲಿ ಎರಡು ಬಾರಿ ಚುನಾಯಿತರಾಗಿ, ನಂತರ ಜೆಡಿಎಸ್‍ಗೆ ಸೇರಿ ಅಲ್ಲಿ ತಮ್ಮ ಪತ್ನಿಗೆ ಟಿಕೆಟ್ ಕೇಳಿ ಸಿಗದಿದ್ದಾಗ, ಇದೀಗ ಬಿಜೆಪಿಗೆ ಸೇರಿ, ಸರಾಯಿ ಕುಡಿದ ಮಂಗನಂತೆ ವರ್ತಿಸುತ್ತಿದ್ದಾರೆ ಎಂದು ಸಂಗಮೇಶ ಬಬಲೇಶ್ವರ ಆರೋಪಿಸಿದ್ದಾರೆ.

ಸಂಗಮೇಶ ಬಬಲೇಶ್ವರ
author img

By

Published : Apr 7, 2019, 9:43 PM IST

ವಿಜಯಪುರ: ಮುದ್ದೇಬಿಹಾಳದಲ್ಲಿ ಜೆಡಿಎಸ್ ಟಿಕೆಟ್ ಕೇಳಿದ್ದ ಎ.ಎಸ್.ಪಾಟೀಲ್ ನಡಹಳ್ಳಿ, ಮರದಿಂದ-ಮರಕ್ಕೆ ಹಾರುವ ಮಂಗನಂತೆ. ಕಾಂಗ್ರೆಸ್‍ಗೆ ಬಂದು ದೇವರಹಿಪ್ಪರಗಿಯಲ್ಲಿ ಎರಡು ಬಾರಿ ಚುನಾಯಿತರಾಗಿ, ನಂತರ ಜೆಡಿಎಸ್‍ಗೆ ಸೇರಿ ಅಲ್ಲಿ ತಮ್ಮ ಪತ್ನಿಗೆ ಟಿಕೆಟ್ ಕೇಳಿ ಸಿಗದಿದ್ದಾಗ, ಇದೀಗ ಬಿಜೆಪಿಗೆ ಸೇರಿ, ಸರಾಯಿ ಕುಡಿದ ಮಂಗನಂತೆ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ರೈತರ ಸೊಸೈಟಿ ಸಾಲವನ್ನು ನಾನೇ ತುಂಬುತ್ತೇನೆ. ಬೃಹತ್ ಗಾರ್ಮೆಂಟ್ ಉದ್ದಿಮೆ ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗ ಕೊಡುತ್ತೇನೆ ಎಂದು ಜನರಿಗೆ ಮಂಕುಬೂದಿ ಎರಚಿದ್ದಾರೆ. ಚುನಾಯಿತರಾದ ನಂತರ ಆ ಕ್ಷೇತ್ರದಿಂದ ಫಲಾಯನಗೈದಿದ್ದಾರೆ.
ಶೇ.50 ಬುದ್ಧಿವಂತ, ಶೇ.50 ಹುಚ್ಚ ಸೇರಿದರೆ ಒಬ್ಬ ಎ.ಎಸ್.ಪಾಟೀಲ್ ನಡಹಳ್ಳಿ ಆಗುತ್ತಾನೆ ಎಂಬುದಕ್ಕೆ ಅವರು ವಿಜಯಪುರದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿದ ಅಂಶಗಳೇ ಸಾಕ್ಷಿ ಎಂದರು.

ಕೆಪಿಸಿಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ

ಎಂ.ಬಿ.ಪಾಟೀಲರು ಮಾಡಿದ ಕಾರ್ಯಸಾಧನೆಗೆ ನಡಹಳ್ಳಿಯಂತಹ ಅರೆಹುಚ್ಚನ ಸರ್ಟಿಫಿಕೇಟ್ ಬೇಕಾಗಿಲ್ಲ. ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳೇ ಆ ಸರ್ಟಿಫಿಕೇಟ್ ನೀಡಿದ್ದಾರೆ. ಶ್ರೀಗಳಿಗಿಂತ ಯಾರು ದೊಡ್ಡವರಿಲ್ಲ. ಕೇಂದ್ರದ ಜಲಸಂಪನ್ಮೂಲ ಸಚಿವೆ ಉಮಾಭಾರತಿ ರಾಷ್ಟ್ರೀಯ ಜಲಸಪ್ತಾಹದಲ್ಲಿ ಉದ್ಘಾಟನೆಗೆ ಎಂ.ಬಿ. ಪಾಟೀಲ್‍ರನ್ನು ಆಹ್ವಾನಿಸಿದ್ದು ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ ಎಂದರು.

12ನೇ ಶತಮಾನದಲ್ಲಿ ಬಸವಾದಿ ಶರಣರು ಸ್ಥಾಪಿಸಿರುವ ಲಿಂಗಾಯತ ಧರ್ಮದ ಬಗ್ಗೆ ಅದೇ ಧರ್ಮದಲ್ಲಿ ಹುಟ್ಟಿದ ಎ.ಎಸ್.ಪಾಟೀಲ್ ನಡಹಳ್ಳಿ ಅವಹೇಳನಕಾರಿಯಾಗಿ ಮಾತನಾಡುವುದು ಸರಿಯಲ್ಲ. ನಡಹಳ್ಳಿ ಲಿಂಗಾಯತ ಬಿಟ್ಟು ಬೇರೆ ಧರ್ಮದಲ್ಲಿ ಹುಟ್ಟಿದ್ದರೇ ದಾಖಲೆಗಳನ್ನು 24 ಗಂಟೆಗಳಲ್ಲಿ ಸಾಬೀತುಪಡಿಸಲಿ ಎಂದರು.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.