ವಿಜಯಪುರ: ಕಾಶ್ಮೀರಿ ಹಿಂದೂಗಳಿಗೆ ಪುನರ್ವಸತಿ ಕಲ್ಪಿಸುವಂತೆ ಕೋರಿ ಹಿಂದೂ ಜನ ಜಾಗೃತಿ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
1990ರಲ್ಲಿ ಮುಸಲ್ಮಾನರು, ಕಾಶ್ಮೀರಿ ಹಿಂದೂಗಳ ಮೇಲೆ ದೌರ್ಜನ್ಯ ಮಾಡಿ ಅವರನ್ನು ಕಾಶ್ಮೀರದಿಂದ ಹೊರದೂಡಿ ದೇವಸ್ಥಾನ, ಮನೆ ಮಠಗಳನ್ನು ಬಲವಂತವಾಗಿ ವಶಪಡಿಸಿಕೊಂಡಿದ್ದರು. ಘಟನೆ ನಡೆದು 30 ವರ್ಷಗಳು ಕಳೆದರು ಅವರಿಗೆ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನೇಕ ಕಾಶ್ಮೀರಿ ಹಿಂದೂಗಳು ಇಂದಿಗೂ ಸರಿಯಾದ ನೆಲೆಯಿಲ್ಲದೆ ಪರದಾಟ ನಡೆಸುವಂತಾಗಿದೆ. ಸರ್ಕಾರ ತಕ್ಷಣವೇ ಕಾಶ್ಮೀರಿ ಹಿಂದೂಗಳಿಗೆ ನ್ಯಾಯ ಕೊಡಿಸಿ ಅವರ ಜನ್ಮ ಭೂಮಿಯಲ್ಲಿ ಸ್ಥಿರವಾಗಿ ನೆಲೆಸುವ ವಾತಾವರಣ ಕಲ್ಪಿಸುವಂತೆ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.