ETV Bharat / state

ಮೂರನೇ ಕುಟುಂಬಕ್ಕೂ ಅಂಟಿದ ಕೊರೊನಾ: ವಿಜಯಪುರ ಹೆಚ್ಚಿದ ಆತಂಕ! - ವಿಜಯಪುರ ಜನರಲ್ಲಿ ಆತಂಕ

ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಈಗ ಮತ್ತೊಂದು ಕುಟುಂಬಕ್ಕೂ ಅಂಟಿಕೊಂಡಿದೆ. ಈ ಮೂಲಕ ಜನರಲ್ಲಿ ಮತ್ತಷ್ಟ ಆತಂಕ ಸೃಷ್ಟಿಸಿದೆ.

Anxiety in the people of Corona and Vijayapur, afflicted with a third family
ಮೂರನೇ ಕುಟುಂಬಕ್ಕೂ ಅಂಟಿದ ಕೊರೊನಾ, ವಿಜಯಪುರ ಜನರಲ್ಲಿ ಆತಂಕ..!
author img

By

Published : Apr 16, 2020, 9:16 PM IST

ವಿಜಯಪುರ: ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣ ಈಗ ಮತ್ತೊಂದು ಕುಟುಂಬಕ್ಕೂ ಅಂಟಿಕೊಂಡಿದೆ.

ನಗರದ ಚಪ್ಪರಬಂದ್ ಬಡಾವಣೆಯ ನಿವಾಸಿ ರೋಗಿ ನಂ.221 ಹಾಗೂ ಅದೇ ಬಡಾವಣೆಯ ನಿವಾಸಿ ರೋಗಿ ನಂ.228ರ ಜೊತೆ ಸಂಪರ್ಕ ಹೊಂದಿದ್ದ ಒಟ್ಟು 15 ಪಾಸಿಟಿವ್ ಪ್ರಕರಣ ದಾಖಲಾಗಿವೆ. ಈಗ ಇದೇ ಚಪ್ಪರಬಂದ್ ಬಡಾವಣೆಯ ಇನ್ನೊಂದು ಕುಟುಂಬದ ತಂದೆ-ಮಗನಿಗೂ ಪಾಸಿಟಿವ್ ಬಂದಿದ್ದು, ಕೊರೊನಾ ಜಾಲ ಮತ್ತಷ್ಟು ಹರಡಿಕೊಂಡಿದೆ.

ರೋಗಿ ನಂ.221 ಆದ 60 ವರ್ಷದ ಮಹಿಳೆ ಹಾಗೂ ಮೃತ ರೋಗಿ ನಂ.257 ಆದ 69 ವರ್ಷದ ಪತಿ ಜತೆ ಮೂರನೇ ಕುಟುಂಬದ ರೋಗಿ ನಂ.306 ಅಂತ್ಯಕ್ರಿಯೆಗೆಂದು ಮಹಾರಾಷ್ಟ್ರದ ಇಚಲಕರಂಜಿಗೆ ಹೋಗಿ ಬಂದಿದ್ದರು. ನಂತರ ಅವರ ಮಗ ರೋಗಿ ನಂ.308ಕ್ಕೂ ಸೋಂಕು ಹಬ್ಬಿದೆ. ಇದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ ವೈ.ಎಸ್.ಪಾಟೀಲ, ಜಿಲ್ಲೆಯಲ್ಲಿ ಈವರೆಗೆ ಒಟ್ಟು 17 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ವಿದೇಶ ಮತ್ತು ಇತರೆ ಪ್ರದೇಶಗಳಿಂದ ಈವರೆಗೆ 780 ಜನರು ಜಿಲ್ಲೆಗೆ ಬಂದ ಬಗ್ಗೆ ವರದಿಯಾಗಿದೆ. 335 ಜನರು 28 ದಿನಗಳ ಅವಧಿಯನ್ನು ಪೂರ್ಣಗೊಳಿಸಿದ್ದು, 72 ಜನರು ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆಂದು ತಿಳಿಸಿದರು.

ಅದರಂತೆ ಜಿಲ್ಲೆಯಲ್ಲಿ 373 ಜನರನ್ನು ಕ್ವಾರಂಟೈನ್ ಮಾಡಲಾಗಿದ್ದು, ಇಲ್ಲಿಯವರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದ 451 ಗಂಟಲು ದ್ರವ ಮಾದರಿಗಳ ಪೈಕಿ 267 ಜನರ ವೈದ್ಯಕೀಯ ಪರೀಕ್ಷೆ ನೆಗೆಟಿವ್ ಬಂದಿದ್ದು, 184 ಜನರ ಪರೀಕ್ಷಾ ವರದಿ ಇನ್ನೂ ಬರಬೇಕಾಗಿದೆ ಎಂದು ಹೇಳಿದರು.

ಈ ಹಿಂದಿನ 10 ಮತ್ತು ಇಂದು ದೃಢಪಟ್ಟ 7 ಪಾಸಿಟಿವ್ ಪ್ರಕರಣಗಳಲ್ಲಿ 221ನೇ ರೋಗಿಯೊಂದಿಗೆ 6 ಜನ ಹಾಗೂ 228ನೇ ರೋಗಿಯೊಂದಿಗೆ ಒಬ್ಬರು ಸಂಪರ್ಕ ಹೊಂದಿರುವ ಬಗ್ಗೆ ದೃಢಪಟ್ಟಿದ್ದು, ಇಂದು ಮೂರನೇ ಕುಟುಂಬದ ಇಬ್ಬರು ಜನರಿಗೆ ಕೊರೊನಾ ಸೋಂಕು ತಗುಲಿರುವ ಬಗ್ಗೆ ದೃಢಪಡಿಸಲಾಗಿದೆ. ಇನ್ನೂ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.