ವಿಜಯಪುರ: ಜಿಲ್ಲೆಯಲ್ಲಿ ಕೊರೊನಾ ವೈರಸ್ನಿಂದ ಮತ್ತೊಬ್ಬರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ತಿಳಿಸಿದ್ದಾರೆ.
P374 ರ ಸಂಖ್ಯೆಯ 42 ವರ್ಷದ ಸೋಂಕಿತ ವ್ಯಕ್ತಿ ಏಪ್ರಿಲ್ 16 ರಂದೇ ಹೃದಯಾಘಾತದಿಂದ ಸಾವನ್ನಪ್ಪಿದ್ದ. ಇಂದು ಬಂದ ರಿಪೋರ್ಟ್ನಲ್ಲಿ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಇವರು ವೃತ್ತಿಯಲ್ಲಿ ಕಾರು ಚಾಲಕನಾಗಿದ್ದರು. ಈಗಾಗಲೇ ಪಾಸಿಟಿವ್ ಬಂದಿರುವ P306, P308 ಸೋಂಕಿತ ವ್ಯಕ್ತಿಯ ಜೊತೆ ಬೆಂಗಳೂರಿಗೆ ತೆರಳಿದ್ದರು. ಅವರಿಬ್ಬರು ಸೋಂಕಿತರಾಗಿದ್ದಾರೆ ಎಂಬುದನ್ನು ತಿಳಿದು ಈ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು.
P308 ಸಂಖ್ಯೆಯ 37 ವರ್ಷದ ಕ್ಯಾನ್ಸರ್ ಪೀಡಿತನಾದ ಸೋಂಕಿತ ವ್ಯಕ್ತಿ, ಸೋಂಕಿತ ಪೊಲೀಸ್ ಪೇದೆಯ ಜೊತೆಗೆ ಸಂಪರ್ಕ ಹೊಂದಿದ್ದರು. ಏಪ್ರಿಲ್ 4 ರಂದು P306 ಹಾಗೂ P308 ಜೊತೆ ಕಾರಿನಲ್ಲಿ ಬೆಂಗಳೂರಿಗೆ ಹೋಗಿ ಬಂದಿದ್ದರು.
ಗುಮ್ಮಟ ನಗರಿಯಲ್ಲಿ ಈವರೆಗೆ ಕೊರೊನಾ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. 60 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ದೃಢವಾಗಿದೆ ಎಂದು ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್ ತಿಳಿಸಿದ್ದಾರೆ.