ವಿಜಯಪುರ : ಜಿಲ್ಲೆಯ 12 ತಾಲೂಕುಗಳ ಗ್ರಾಮ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಆಯಾ ತಾಲೂಕು ಕೇಂದ್ರಗಳಲ್ಲಿ ಸದಸ್ಯರ ಸಮ್ಮುಖದಲ್ಲಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ಕುಮಾರ್ ತಿಳಿಸಿದ್ದಾರೆ.
ಜ.16ರಂದು ಬೆಳಗ್ಗೆ 11ಕ್ಕೆ ಕೊಲ್ಹಾರದ ಶಾದಿ ಮಹಲ್, ಮಧ್ಯಾಹ್ನ 3ಕ್ಕೆ ನಿಡಗುಂದಿ ಮಹೇಶ್ವರಿ ಕಲ್ಯಾಣ ಮಂಟಪ, ಜ.17ರಂದು ಬೆಳಗ್ಗೆ 11ಕ್ಕೆ ತಿಕೋಟಾದ ಹಾಜಿ ಮಸ್ತಾನ್ ಕಲ್ಯಾಣ ಮಂಟಪ, ಮಧ್ಯಾಹ್ನ 3ಕ್ಕೆ ಬಬಲೇಶ್ವರ ಹರಳಯ್ಯನ ಸಮುದಾಯ ಭವನ, ಜ.18ರಂದು ಬೆಳಗ್ಗೆ 11ಕ್ಕೆ ವಿಜಯಪುರದ ಕಂದಗಲ್ಲ ಹನುಮಂತ ರಾಯ ರಂಗಮಂದಿರ, ಮಧ್ಯಾಹ್ನ 3ಕ್ಕೆ ಬ.ಬಾಗೇವಾಡಿಯ ಜಗದ್ಗುರು ಪಂಚಾಕ್ಷರಿ ಜನ ಕಲ್ಯಾಣ ಭವನದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ
ಜ. 22ಕ್ಕೆ ಬೆಳಗ್ಗೆ 11ಕ್ಕೆ ಮುದ್ದೇಬಿಹಾಳದ ವಿಜಯ ಮಹಾಂತೇಶ ಕಲ್ಯಾಣ ಭವನ, ಮಧ್ಯಾಹ್ನ 3ಕ್ಕೆ ತಾಳಿಕೋಟೆಯ ಸಂಗಮೇಶ್ವರ ಕಲ್ಯಾಣ ಮಂಟಪ, ಜ.23ಕ್ಕೆ ಬೆಳಗ್ಗೆ 11 ಕ್ಕೆ ಇಂಡಿ ಶಾಂತೇಶ್ವರ ಮಂಗಲ ಕಾರ್ಯಾಲಯ, ಮಧ್ಯಾಹ್ನ 3ಕ್ಕೆ ಚಡಚಣದ ಗುರು ಕೃಪಾ ಭವನ, ಜ.24ರಂದು ಬೆಳಗ್ಗೆ 11ಕ್ಕೆ ಸಿಂದಗಿಯ ಡಾ.ಭಾವಿಕಟ್ಟಿ ಕಲ್ಯಾಣ ಮಂಟಪ, ಮಧ್ಯಾಹ್ನ 3ಕ್ಕೆ ದೇ.ಹಿಪ್ಪರಗಿಯ ಜಗದ್ಗುರು ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.