ETV Bharat / state

ವಿಜಯಪುರ: ನಾಳೆಯಿಂದ 5 ದಿನಗಳ ಕಾಲ ಅಮೋಘಸಿದ್ದೇಶ್ವರ ಜಾತ್ರೆ.. ಕೊರೊನಾ ಭೀತಿ ನಡುವೆ ಸಕಲ ಸಿದ್ಧತೆ

ನಾಳೆಯಿಂದ 5 ದಿನಗಳ ಕಾಲ ಜಾತ್ರೆ ನಡೆಯಲಿದ್ದು, ಇದಕ್ಕಾಗಿ ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.

amoghasiddeshwara-fair-will-starts-from-tomorrow
ನಾಳೆಯಿಂದ ಐದು ದಿನಗಳ ಕಾಲ ಅಮೋಘಸಿದ್ದೇಶ್ವರ ಜಾತ್ರೆ
author img

By

Published : Dec 3, 2021, 10:41 PM IST

ವಿಜಯಪುರ: ಕೊರೊನಾ ರೂಪಾಂತರಿ ಸಂಕಷ್ಟ ಹೆಚ್ಚುತ್ತಿರುವ ನಡುವೆ ರಾಜ್ಯದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಹೊಸ ನಿಯಮಾವಳಿ ಜಾರಿ ಮಾಡಲಾಗಿದೆ. ಹೀಗಾಗಿ ವಿಜಯಪುರದ ಮುಮ್ಮಟ್ಟಿಗುಡ್ಡದ ಅಮೋಘಸಿದ್ದೇಶ್ವರ ಜಾತ್ರೆಯನ್ನ ಸರಳವಾಗಿ ನೆರವೇರಿಸಲು ನಿರ್ಧರಿಸಲಾಗಿದೆ.

ಪ್ರತಿ ವರ್ಷ ಕರ್ನಾಟಕವಲ್ಲದೇ ಮಹಾರಾಷ್ಟ್ರದಿಂದಲೂ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದರು. ಆದರೆ, ಕಳೆದೆರಡು ವರ್ಷದಿಂದ ಜಾತ್ರೆಯನ್ನ ಸರಳವಾಗಿ ನಡೆಸಲಾಗುತ್ತಿದೆ. ಈ ಬಾರಿ ಅದ್ದೂರಿಯಾಗಿ ನೆರವೇರಿಸಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ, ಸರ್ಕಾರದ ನೂತನ ಮಾರ್ಗಸೂಚಿ ಅನ್ವಯದಂತೆ ಸರಳ ಮಹೋತ್ಸವಕ್ಕೆ ಮುಂದಾಗಲಾಗಿದೆ.

ಅಮೋಘಸಿದ್ದೇಶ್ವರ ಜಾತ್ರೆಗಾಗಿ ಸಕಲ ಸಿದ್ಧತೆ

ನಾಳೆಯಿಂದ 5 ದಿನಗಳ ಕಾಲ ಜಾತ್ರೆ ನಡೆಯಲಿದ್ದು, ಇದಕ್ಕಾಗಿ ದೇವಸ್ಥಾನ ಆಡಳಿತ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ವ್ಯಾಪಾರಸ್ಥರು ಸಹ ದೇವಾಲಯ ಬೀದಿಗಳಲ್ಲಿ ಅಂಗಡಿಗಳ ಹಾಕಿದ್ದು, ಜಿಲ್ಲಾಡಳಿತ ಕೋವಿಡ್ ಮಾರ್ಗಸೂಚಿಗಳ ಜೊತೆಗೆ ಜಾತ್ರೆಗೆ ಅನುಮತಿ ನೀಡಿ ನಮಗೂ ಬದುಕಲು ಅವಕಾಶ ಮಾಡಿಕೊಡಬೇಕು ಎಂಬುದು ವ್ಯಾಪಾರಿಗಳ ಮನವಿಯಾಗಿದೆ.

ಇದನ್ನೂ ಓದಿ: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಕಠಿಣ ನಿಮಯ ಪಾಲನೆಗೆ ಆದೇಶ: ಏನೇನು ಬದಲಾವಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.