ವಿಜಯಪುರ: ದೇವರ ಪಲ್ಲಕ್ಕಿ ಹೋಗುವಾಗ ರೋಗಿಯನ್ನು ಆಸ್ಪತ್ರೆಗೆ ಸೇರಿಸಲು ಹೋಗುತ್ತಿದ್ದ ಆ್ಯಂಬುಲೆನ್ಸ್ಗೆ ಭಕ್ತರು ದಾರಿ ಬಿಟ್ಟು ನಿಜವಾದ ಭಕ್ತಿ ಮೆರೆದ ಘಟನೆ ಜಿಲ್ಲೆಯ ದೇವರ ಹಿಪ್ಪರಗಿಯಲ್ಲಿ ನಡೆದಿದೆ.
ಆ್ಯಂಬುಲೆನ್ಸ್ ಬರ್ತಿದ್ದಂತೆ ಸೈಡಿಗೆ ದೇವರ ಪಲ್ಲಕ್ಕಿಯನ್ನು ಭಕ್ತರು ಸರಿಸಿ ದಾರಿ ಮಾಡಿಕೊಟ್ಟ ಅಪರೂಪದ ಘಟನೆ ನಡೆದಿದೆ. ದೇವರಹಿಪ್ಪರಗಿಯ ರಾವುತ ರಾಯ ದೇವರ ಜಾತ್ರೆ ಹಿನ್ನೆಲೆ ಪಲ್ಲಕ್ಕಿ ಮೆರವಣಿಗೆ ನಡೆದಾಗ ಈ ಪ್ರಸಂಗ ನಡೆದಿದೆ.
ಪಲ್ಲಕ್ಕಿ ಮೆರವಣಿಗೆಯಿಂದ ರಸ್ತೆ ಜಾಮ್ ಆಗಿತ್ತು. ಆ್ಯಂಬುಲೆನ್ಸ್ ಬರ್ತಿದ್ದಂತೆ ಪಲ್ಲಕ್ಕಿ ಹೊತ್ತ ಭಕ್ತರು ದಾರಿ ಬಿಟ್ಟುಕೊಟ್ಟಿದ್ದಾರೆ. ದೇವರ ಪಲ್ಲಕ್ಕಿ ಹೋಗುವಾಗ ಸಾಕಷ್ಟು ಭಕ್ತರು ಜಮಾವಣೆಗೊಳ್ಳುವುದು ಸಹಜ. ಆದರೆ, ಆ್ಯಂಬುಲೆನ್ಸ್ ಶೈರನ್ ಕೇಳುತ್ತಿದ್ದಂತೆ ಭಕ್ತರೇ ದೇವರ ಪಲ್ಲಕ್ಕಿಯನ್ನು ರಸ್ತೆ ಬದಿ ತೆಗೆದುಕೊಂಡು ಹೋಗಿ ದಾರಿ ಮಾಡಿಕೊಡುವ ಮೂಲಕ ನಿಜವಾದ ಭಕ್ತಿ ಮೆರೆದಿದ್ದಾರೆ.
ಓದಿ: ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತಲಿದೆ ಬಿಲ್ಲಿಂಗ್ ಕೌಂಟರ್ ಲೆಸ್ ಡಯಾಲಿಸಿಸ್ ಕೇಂದ್ರ