ETV Bharat / state

'ಮಹಾ'ದಿಂದ ಹರಿದು ಬಂದ ನೀರು; ಆಲಮಟ್ಟಿ ವಿದ್ಯುತ್ ಕೇಂದ್ರ ಆರಂಭ - ವಿದ್ಯುತ್ ಉತ್ಪಾದನಾ ಕೇಂದ್ರ

ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಹರಿದು ಬರುತ್ತಿರುವ ಕಾರಣ, ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯದಿಂದ ಹೊರಹರಿವು ಹೆಚ್ಚಾಗಿದ್ದು, ಸ್ಥಗಿತಗೊಂಡಿದ್ದ ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತೆ ಕಾರ್ಯಾರಂಭಿಸಿದೆ.

Alamatti Reservoir
ಆಲಮಟ್ಟಿ ಜಲಾಶಯ
author img

By

Published : Jul 9, 2020, 4:58 PM IST

ವಿಜಯಪುರ: ನಿಡಗುಂದಿ ತಾಲೂಕಿನ ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯಕ್ಕೆ ಮಹಾರಾಷ್ಟ್ರದಿಂದ ಹೆಚ್ಚುವರಿ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಹೊರಹರಿವು ಹೆಚ್ಚಾಗಿದೆ. ಹೀಗಾಗಿ, ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತೆ ಕೆಲಸ ಆರಂಭಿಸಿದೆ.

ಇಂದು ಜಲಾಶಯಕ್ಕೆ 10,088 ಕ್ಯೂಸೆಕ್ ನೀರು ಹರಿದು ಬಂದಿದೆ. ಇದರಿಂದ 55 ಮೆಗಾವ್ಯಾಟ್ ಸಾಮರ್ಥ್ಯದ ಎರಡು ಘಟಕಗಳು ಕಾರ್ಯ ಆರಂಭಿಸಿವೆ. ಮಹಾರಾಷ್ಟ್ರದಲ್ಲಿ ಮುಂಗಾರು ಚುರುಕುಗೊಂಡು ಜಲಾಶಯದ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಸದ್ಯ ಪ್ರವಾಹ ಭೀತಿ ಇಲ್ಲ. ಮುನ್ನೆಚ್ಚರಿಕೆಯಾಗಿ ನದಿ ತಟದಲ್ಲಿರುವ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ 5 ಲಕ್ಷ ಕ್ಯುಸಕ್ ನೀರು ಒಳಹರಿವು ಇದ್ದಾಗಲೂ 11 ಗ್ರಾಮಗಳನ್ನು ಮಾತ್ರ ನೀರು ಸುತ್ತುವರಿದಿತ್ತು. ಗ್ರಾಮದ ಒಳಗೆ ನೀರು ನುಸುಳಿರಲಿಲ್ಲ. ಈಗ 49,636 ಕ್ಯೂಸೆಕ್ ನೀರು ಬಂದಿದೆ. ಹೀಗಾಗಿ, ಯಾವುದೇ ಪ್ರವಾಹದ ಆತಂಕ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

ಜಲಾಶಯಕ್ಕೆ ನೀರಿಕ್ಷಿತ ಪ್ರಮಾಣದಲ್ಲಿ ಒಳಹರಿವು ಇನ್ನೂ ಬಂದಿಲ್ಲ. ಪ್ರವಾಹ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಿದ್ದಗೊಂಡಿದೆ. ಅಗತ್ಯ ಬೋಟ್, ಇನ್ನಿತರ ಸಾಮಗ್ರಿ ಸಂಗ್ರಹಿಸಲಾಗಿದೆ. ಈಗಾಗಲೇ ನದಿ ಪಾತ್ರದ ಅಧಿಕಾರಿಗಳ ಸಭೆ ಸಹ ನಡೆಸಲಾಗಿದೆ.

ತಾಲೂಕು ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದೆ. ಗ್ರಾಮ ಮಟ್ಟದಲ್ಲಿ ಗ್ರಾಮಸ್ಥರ ಮುಂದಾಳತ್ವದಲ್ಲಿ ಸಮಿತಿ ರಚಿಸಲಾಗಿದೆ. ಪ್ರತಿ ವರ್ಷ ಬಾದಿತ ಪ್ರದೇಶಗಳ ಗ್ರಾಮಸ್ಥರಿಗೆ ನೀರು ಯಾವ ಮಟ್ಟದವರೆಗೆ ಬರಬಹುದು ಎನ್ನುವ ಅಂದಾಜು ಇರುವ ಕಾರಣ, ತಕ್ಷಣ ಪ್ರವಾಹ ಎದುರಾದರೂ ಅದನ್ನು ನಿಭಾಯಿಸಲು ಅಧಿಕಾರಿಗಳು ಸಿದ್ಧರಿದ್ದಾರೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.