ವಿಜಯಪುರ: ಎರಡು ದಿನ ಶಾಂತವಾಗಿದ್ದ ಕೊರೊನಾ ಮಹಾಮಾರಿ ಇಂದು ಜಿಲ್ಲೆಯಲ್ಲಿ ಇಬ್ಬರಿಗೆ ವಕ್ಕರಿಸಿದೆ. ಈ ಮೂಲಕ ಪಾಸಿಟಿವ್ ಸಂಖ್ಯೆ 43ಕ್ಕೆ ಏರಿಕೆಯಾಗಿದೆ.
62 ವರ್ಷದ ವ್ಯಕ್ತಿ ಹಾಗೂ 33 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ. 62 ವರ್ಷದ ವ್ಯಕ್ತಿ ರೋಗಿ ನಂಬರ್ 537 ಹಾಗೂ 33 ವರ್ಷದ ಮಹಿಳೆ ರೋಗಿ ನಂಬರ್ 538 ಎಂದು ಗುರುತಿಸಲಾಗಿದೆ. ಈ ಇಬ್ಬರು ಸೋಂಕಿತರಿಗೆ ರೋಗಿ ನಂಬರ್ 221ರ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿದೆ. ಮೇಲಿನ ಮೂವರು ಸೋಂಕಿತರು ಸಂಬಂಧಿಕರು ಎಂದು ಗುರುತಿಸಲಾಗಿದೆ.
ಈ ಮೊದಲೇ ರೆಡ್ ಝೋನ್ ಪ್ರದೇಶದಲ್ಲಿದ್ದ 26 ಮಂದಿಗೆ, ರೋಗಿ ನಂಬರ್ 221ರ ಮೂಲಕವೇ ಸೋಂಕು ತಗುಲಿದ್ದನ್ನು ಇಲ್ಲಿ ಸ್ಮರಿಸಬಹುದು.