ವಿಜಯಪುರ: ಲಾಕ್‌ಡೌನ್ ಅವಧಿ ಹಾಗೂ ಶಾಲೆ ಆರಂಭವಾಗುವ ತನಕ ಅಕ್ಷರ ದಾಸೋಹ ಕಾರ್ಮಿಕರಿಗೆ ವೇತನ ಪಾವತಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೊರೊನಾ ಭೀತಿ ಆರಂಭದ ದಿನಗಳಿಂದಲೂ ಅಕ್ಷರ ದಾಸೋಹದ ಕಾರ್ಮಿಕರಿಗೆ ಸರ್ಕಾರ ವೇತನ ನೀಡಿಲ್ಲ. ಶಾಲೆಗಳಿಗೆ ಬೀಗ ಹಾಕಿದ ಪರಿಣಾಮ ಶಾಲೆಗಳಲ್ಲಿ ಅಡುಗೆ ತಯಾರಿಸಿ ಬದಕು ಕಟ್ಟಿಕೊಂಡಿದ್ದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.
ಕುಟುಂಬ ನಿರ್ವಹಣೆ ಮಾಡಲಾಗದ ಪರಿಸ್ಥಿತಿ ಬಂದೂದಗಿದರು ಸರ್ಕಾರವು ಮಾತ್ರ ಅಕ್ಷರ ದಾಸೋಹದ ಕಾರ್ಮಿಕರ ನೆರವಿಗೆ ಬಂದಿಲ್ಲ. ಇತ್ತ ದುಡಿಮೆ ಇಲ್ಲದೆ ಕಂಗಾಲಾದ ಕಾರ್ಮಿಕರಿಗೆ ವೇತನ ನೀಡಲು ಮುಂದಾಗದಿರೋದು ದುರ್ದೈವ ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.
ಇನ್ನೂ ಸರ್ಕಾರ ಅಕ್ಷರ ದಾಸೋಹ ಕಾರ್ಮಿಕರಿಗೆ ಕಾಲ ಕಾಲಕ್ಕೆ ಸಂಭಾವನೆ ಪಾವತಿಸಿಬೇಕು. ಲಾಕ್‌ಡೌನ್ ಅವಧಿಯ ವೇತನ ನೀಡಬೇಕು ಹಾಗೂ ಅಗತ್ಯ ದಿನಸಿ ಕಿಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನಾಕಾರು ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.