ವಿಜಯಪುರ : ಪೊರಕೆ ತಯಾರಿಸುತ್ತಿದ್ದ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಪೊರಕೆಗಳು ಬೆಂಕಿಗಾಹುತಿಯಾದ ಘಟನೆ ವಿಜಯಪುರ ನಗರದ ಕೊಂಚಿಕೊರಮ ಓಣಿಯಲ್ಲಿ ನಡೆದಿದೆ.
ನಗರದ ಗೋಳಗುಮ್ಮಟ ಎದುರಿಗಿರುವ ಕೊಂಚಿಕೊರಮ ಓಣಿಯ ನಿವಾಸಿ ಮಳ್ಳೆಪ್ಪ ಕೊಂಚಿ ಕೊರಮ ಎಂಬುವರಿಗೆ ಸೇರಿದ ಸೆಂಧಿ ಪೊರಕೆ ಘಟಕ ಬೆಂಕಿಗೆ ಆಹುತಿಯಾಗಿದೆ. ಮಾರಾಟ ಮಾಡಲು ಸೆಂಧಿ ಪೊರಕೆ ತಯಾರಿ ಶೇಖರಿಸಿಡಲಾಗಿತ್ತು.
ಓದಿ:ಬೈಕ್ ಸವಾರ ಸಾವು ಪ್ರಕರಣ : ಪೊಲೀಸರ ಮೇಲೆ ಹಲ್ಲೆ ಮಾಡಿದ 8 ಜನರ ಬಂಧನ
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.