ETV Bharat / state

ಬೈಕ್​ಗೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಬೈಕ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಬಲೇಶ್ವರದ ಹೊರ ಭಾಗದ ಹಲಗಣಿ ರಸ್ತೆಯ ಬಸವಣ್ಣೆಪ್ಪ ಗುಡಿಯ ಬಳಿ ನಡೆದಿದೆ.

ಬೈಕ್​ಗೆ ಕಾರು ಡಿಕ್ಕಿ
ಬೈಕ್​ಗೆ ಕಾರು ಡಿಕ್ಕಿ
author img

By

Published : Aug 23, 2020, 4:41 PM IST

ವಿಜಯಪುರ: ಬೈಕ್​ಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಬಲೇಶ್ವರದ ಹೊರ ಭಾಗದ ಹಲಗಣಿ ರಸ್ತೆಯ ಬಸವಣ್ಣೆಪ್ಪ ಗುಡಿಯ ಬಳಿ ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಸಂಭವಿಸಿದೆ.

ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದ ಸಂಗಯ್ಯಾ ಗುರುಬಸಯ್ಯಾ ಹಿರೇಮಠ (42) ಹಾಗೂ ಶಂಕರಯ್ಯಾ ಬಸಲಿಂಗಯ್ಯಾ ಮಠ (55) ಮೃತರು. ಇವರು ಬಬಲೇಶ್ವರದಿಂದ ಶೇಗುಣಸಿಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.

ಬೈಕ್​ಗೆ ಕಾರು ಡಿಕ್ಕಿ

ಕಾರಿನಲ್ಲಿದ್ದ ವಿಜಯಪುರದ ಅಕ್ಷಯ ಹಾಗೂ ರಮೇಶಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ವಿಜಯಪುರದ ಬಿಎಲ್​ಡಿಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಮಖಂಡಿಯಿಂದ ವಿಜಯಪುರ ಕಡೆಗೆ ಕಾರು ಹೋಗುತ್ತಿತ್ತು. ಪೆಟ್ರೋಲ್ ಬಂಕ್​​ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ಹೊರ ಬರುತ್ತಿದ್ದ ಬೈಕ್ ಸವಾರರಿಗೆ ಎದುರಿಗೆ ಬಂದ್ ಕಾರು ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಅಪಘಾತದ ಬಳಿಕ ಪಲ್ಟಿಯಾಗಿದೆ. ಕಾರಣ ಕಾರಿನಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಬಬಲೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.