ವಿಜಯಪುರ: ತೊಗರಿ ಖರೀದಿ ಕೇಂದ್ರದಲ್ಲಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದು, ಅವರಿಂದ ಏಳು ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಈ ಇಬ್ಬರು ಅಧಿಕಾರಿಗಳನ್ನು ಬಂಧನ ಮಾಡಲಾಗಿದೆ.
ಪಿಕೆಪಿಎಸ್ ಮ್ಯಾನೇಜರ್ ಶಾಂತಪ್ಪ ಹಾದಿಮನಿ ಹಾಗೂ ಸೇಲ್ಸ್ಮನ್ ಸಂಗನಬಸಪ್ಪ ಗೋಠೆದ ಬಂಧಿತ ಆರೋಪಿಗಳು. ಉಚಿತವಾಗಿ ವಿತರಿಸಬೇಕಿದ್ದ ತೊಗರಿ ಕೇಂದ್ರದಲ್ಲಿ ರೈತರಿಂದ ಸುಲಿಗೆ ನಡೆಸಲಾಗುತ್ತಿತ್ತು. ಪ್ರತಿ ಕ್ವಿಂಟಲ್ ತೊಗರಿಗೆ 100 ರಿಂದ 150 ರೂಪಾಯಿ ಹಣ ವಸೂಲಿ ಮಾಡಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಬಿ, ಡಿವೈಎಸ್ಪಿ ವೇಣುಗೋಪಾಲ, ಇನ್ಸ್ಪೆಕ್ಟರಗಳಾದ ಶಿವಶಂಕರ ಗಣಾಚಾರಿ, ಹರಿಶ್ಚಂದ್ರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.