ವಿಜಯಪುರ: ನಗರದ ಮನಗೂಳಿ ಅಗಸಿ ಬಳಿ ಪಬ್ ಜಿ ಗೇಮ್ ಗೀಳಿನಿಂದ ಯುವಕನೋರ್ವ ಮಾನಸಿಕ ಸಮತೋಲನವನ್ನೇ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿದ್ದಾನೆ. ಗೇಮ್ನಲ್ಲಿ ಬಾಂಬ್ಗಳನ್ನು ಎಸೆಯುವಂತೆ ಕಲ್ಲುಗಳನ್ನು ಎಸೆಯುತ್ತಿರುವುದರಿಂದ ಸಾರ್ವಜನಿಕರೇ ಯುವಕನನ್ನು ಕಟ್ಟಿಹಾಕಿ ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸುತ್ತಿದ್ದಾರೆ.
ಈ ಯುವಕನ ಕುರಿತಂತೆ ಯಾವುದೇ ಗುರುತು, ಮಾಹಿತಿ ಲಭ್ಯವಾಗಿಲ್ಲ. ನಗರದ ಮನಗೂಳಿ ಅಗಸಿ ಬಳಿ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿರುವ ಈತನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಪಬ್ ಜಿ ಗೇಮ್ನಲ್ಲಿ ವಾಹನ ಹಾಗೂ ಮನೆಗಳಿಗೆ ಬಾಂಬ್ ಎಸೆಯುವಂತೆ ಎಲ್ಲರ ಮೇಲೂ ಈತ ಮನಬಂದಂತೆ ಕಲ್ಲು ಎಸೆಯುತ್ತಿದ್ದನಂತೆ.
ರಸ್ತೆಯಲ್ಲಿ ಬರುವ ಸಾರ್ವಜನಿಕರು ಹಾಗೂ ವಾಹನದ ಮೇಲೆ ಮನಬಂದಂತೆ ಕಲ್ಲು ಎಸೆಯುತ್ತಿರುವುದರಿಂದ ಬೆಚ್ಚಿಬಿದ್ದಿರುವ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ಬಂಧಿಸಲು ಹಿಂದೇಟು ಹಾಕಿದ್ದರಿಂದ ಕೆಲಕಾಲ ವಾಗ್ವಾದ ಉಂಟಾಗಿತ್ತು.