ವಿಜಯಪುರ : ಫ್ರಾನ್ಸ್ನಿಂದ ವಿಜಯಪುರಕ್ಕೆ ಆಗಮಿಸಿದ್ದ ಯುವಕನ ಥ್ರೋಟ್ ಸ್ವಾಬ್ ಅನ್ನು (Throat Swab) ಪರೀಕ್ಷೆಗೆ ಉಡುಪಿಯ ಮಣಿಪಾಲ ವೈರಾಲಜಿ ಇನ್ಸ್ಟ್ಯೂಟ್ ಗೆ ರವಾನೆ ಮಾಡಲಾಗಿದೆ.
ಫ್ರಾನ್ಸ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕ ಜಿಲ್ಲೆಗೆ ಆಗಮಿಸಿದ್ದು, ಕೊರೊನಾ ವೈರಸ್ ಭೀತಿ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮಲ್ಲನಗೌಡ ಬಿರಾದಾರ ಮಾಹಿತಿ ನೀಡಿದ್ದಾರೆ.
ಯುವಕನನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.