ETV Bharat / state

ಮದುವೆಯಾಗಲಿಲ್ಲವೆಂದು ಮನನೊಂದ ಯುವಕ ನೇಣಿಗೆ ಶರಣು - unhappy-with-not-getting-married

ಮದುವೆ ಆಗದ ಕಾರಣಕ್ಕೆ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ನಡೆದಿದೆ.

ನೇಣಿಗೆ ಶರಣು
ಮದುವೆಯಾಗಲಿಲ್ಲವೆಂದು ಮನನೊಂದ ಯುವಕ ನೇಣಿಗೆ ಶರಣು
author img

By

Published : Apr 2, 2021, 9:07 PM IST

ಮುದ್ದೇಬಿಹಾಳ: ಮದುವೆಯಾಗಲಿಲ್ಲವೆಂದು ಮನನೊಂದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಹಡಲಗೇರಿ ಸೀಮೆಯ ಗುಡ್ಡದಲ್ಲಿ ನಡೆದಿದೆ.

ಕಂದಗನೂರ ಗ್ರಾಮದ ನಿವಾಸಿ ರಮೇಶ ಸಿದ್ದರಾಮಪ್ಪ ಕಣಕಾಲ (27) ಸಾವನ್ನಪ್ಪಿದ ಯುವಕ. ಈತ ಕಳೆದ ಹದಿನೈದು ದಿನಗಳ ಹಿಂದಷ್ಟೇ ಊರು ತೊರೆದು ಮುದ್ದೇಬಿಹಾಳದಲ್ಲಿ ಬಾಡಿಗೆ ಮನೆ ಹಿಡಿದು ಇಲ್ಲಿಯೇ ವಾಸಿಸುತ್ತಿದ್ದನು. ಈತನಿಗೆ ಮದುವೆ ಆಗಿರಲಿಲ್ಲ ಎಂದು ತಿಳಿದು ಬಂದಿದ್ದು, ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹಡಲಗೇರಿ ಸೀಮೆಯಲ್ಲಿ ಬರುವ ಕಾಲುವೆಗೆ ಈಜಾಡಲೆಂದು ಬಂದಿದ್ದ ಯುವಕರು, ವ್ಯಕ್ತಿ ನೇಣು ಬಿಗಿದುಕೊಂಡಿದ್ದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುದ್ದೇಬಿಹಾಳ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ.. ಮಲ್ಲಿಕಾರ್ಜುನ ಖರ್ಗೆ ದಲಿತ ವಿರೋಧಿ ನಾಯಕ: ಟ್ವೀಟ್ ಮೂಲಕ ಬಿಜೆಪಿ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.