ETV Bharat / state

ರಕ್ಷಿಸಲು ಹೋದಾಗ ಕಚ್ಚಿದ ಹಾವು.. ಹಿಡಿದು ಆಸ್ಪತ್ರೆಗೆ ಬಂದ ಭೂಪ, ಉರಗಕ್ಕೂ ಚಿಕಿತ್ಸೆ ಕೊಡಿಸಲು ಪಟ್ಟು - ವಿಷಕಾರಿ ನಾಗರಹಾವು

ಮುದ್ದೇಬಿಹಾಳದ ಸರ್ಕಾರಿ ಆಸ್ಪತ್ರೆಗೆ ಯುವಕನೊಬ್ಬ ತನಗೆ ಕಚ್ಚಿದ ಹಾವನ್ನೇ ಹಿಡಿದು ಚಿಕಿತ್ಸೆಗೆ ಬಂದಿರುವ ಘಟನೆ ನಡೆದಿದೆ.

ಸ್ನೇಕ್ ಭಾಷಾ
ಸ್ನೇಕ್ ಭಾಷಾ
author img

By

Published : Mar 5, 2023, 8:31 PM IST

ಮುದ್ದೇಬಿಹಾಳ : ಯಾರಾದರೂ ಹಾವು ಕಚ್ಚಿಸಿಕೊಂಡರೆ ಮೊದಲು ಜೀವ ಉಳಿಸಿಕೊಳ್ಳುವುದಕ್ಕೆ ಆಸ್ಪತ್ರೆಗೆ ಧಾವಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ತನ್ನನ್ನು ಕಚ್ಚಿದ ಹಾವು ಹಿಡಿದು ಡಬ್ಬದಲ್ಲಿ ಹಾಕಿಕೊಂಡು ಬಂದು ಚಿಕಿತ್ಸೆ ಪಡೆದುಕೊಂಡಿರುವ ಅಪರೂಪದ ಘಟನೆ ಶುಕ್ರವಾರ ಸಂಜೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ತಾಲೂಕಿನ ತಂಗಡಗಿ ಗ್ರಾಮದ ಯುವಕ ಭಾಷಾ ಎಂಬುವವರು ಹಾವುಗಳನ್ನು ಹಿಡಿಯುವ ಮೂಲಕ ಈ ಭಾಗದಲ್ಲಿ ಹೆಸರು ಮಾಡಿಕೊಂಡಿದ್ದಾರೆ. ಆದರೆ ಬಸವನ ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದಲ್ಲಿ ಹಾವು ಹಿಡಿಯಲೆಂದು ತೆರಳಿದ್ದ ವೇಳೆ ವಿಷಕಾರಿ ನಾಗರಹಾವು ಅವರ ಕೈಗೆ ಕಚ್ಚಿದೆ. ಆದರೂ ಪಟ್ಟು ಬಿಡದೆ ಆ ನಾಗರಹಾವನ್ನು ಹಿಡಿದು ಡಬ್ಬದಲ್ಲಿ ಹಾಕಿಕೊಂಡು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಸದ್ಯ ಸ್ನೇಕ್ ಭಾಷಾ ಅವರಿಗೆ ಜೀವಕ್ಕೆ ತೊಂದರೆಯಿಲ್ಲ: ಹಾವು ಕಚ್ಚಿಸಿಕೊಂಡು ನಿತ್ರಾಣರಾಗಿದ್ದ ಭಾಷಾ ಅವರಿಗೆ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ ಅಮರನಾಥ ಕುಂಬಾರ, ಶುಶ್ರೂಷಕ ಅಧಿಕಾರಿ ಎಂ ಬಿ ಬಾಗವಾನ್​ ತೀವ್ರ ನಿಗಾ ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಡಿದ್ದಾರೆ. ಸದ್ಯಕ್ಕೆ ಭಾಷಾ ಚೇತರಿಸಿಕೊಂಡಿದ್ದು, ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

500 ನೂರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ ಭಾಷಾ: ಚಿಕಿತ್ಸೆ ಪಡೆದುಕೊಂಡು ಹಾವು ಬಿಡುವಂತೆ ಅಕ್ಕಪಕ್ಕದವರು, ವೈದ್ಯರು ಹೇಳಿದರೂ ಹಾವು ಬಿಡದ ಭಾಷಾ, ಅದಕ್ಕೆ ಆಗಿರುವ ಗಾಯಕ್ಕೆ ಚಿಕಿತ್ಸೆ ಕೊಟ್ಟು ಬಳಿಕ ಅರಣ್ಯ ಇಲಾಖೆಯವರೆಗೆ ಒಪ್ಪಿಸುವುದಾಗಿ ತಿಳಿಸಿ ಉರಗ ಪ್ರೇಮ ಮೆರೆದಿದ್ದಾರೆ. ಈವರೆಗೂ 500ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸುರಕ್ಷಿತವಾದ ಸ್ಥಳಕ್ಕೆ ಸ್ನೇಕ್ ಭಾಷಾ ಬಿಟ್ಟಿದ್ದಾರೆ.

ಇದನ್ನೂ ಓದಿ : ಹೆಚ್ 3 ಎನ್ 2 ಪ್ರಭೇದ ಪತ್ತೆ, ಕ್ರಮಗಳ ಕುರಿತು ಅಧಿಕಾರಿಗಳು, ತಜ್ಞರ ಸಭೆ : ಸಚಿವ ಡಾ ಕೆ ಸುಧಾಕರ್

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ‌ದಲ್ಲಿ ಬೆಂಕಿ ಅವಘಡ: ಇನ್ನೊಂದೆಡೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ‌ ವ್ಯಾಪ್ತಿಯ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಗೌರಿಕಲ್ಲು ಬೆಟ್ಟ ಎಂಬ ಪ್ರದೇಶದ ಅರಣ್ಯದಲ್ಲಿ ನಿನ್ನೆ (ಶನಿವಾರ) ಬೆಂಕಿ ಕಾಣಿಸಿಕೊಂಡಿತ್ತು. ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿ ಉರಿದಿದ್ದು, ಅಂದಾಜು 25-30 ಎಕರೆಯಷ್ಟು ಕಾಡು ಸುಟ್ಟು ಕರಕಲಾಗಿದೆ‌.

ಇದನ್ನೂ ಓದಿ : ವೇತನ ಹೆಚ್ಚಳಕ್ಕೆ ಸಿಗದ ಸ್ಪಂದನೆ : ಮಾ. 24ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನೌಕರರಿಂದ ಕರೆ

ಕಿಡಿಗೇಡಿಗಳ ಕಾಟದಿಂದ ಕಾಡು ಬೆಂಕಿಗೆ ಆಹುತಿ: ಅಂದಾಜು 70 ರಿಂದ 80 ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರು. ದಿನೇ ದಿನೆ ಚಾಮರಾಜನಗರ ಜಿಲ್ಲೆಯಲ್ಲಿ ವಾತಾವರಣದಲ್ಲಿ ಬಿಸಿ ಏರುತ್ತಿದೆ. ಈ ನಡುವೆ ಕೆಲವು ಕಿಡಿಗೇಡಿಗಳ ಕೃತ್ಯದಿಂದ ಕಾಡು ಬೆಂಕಿಗೆ ಆಹುತಿಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ನಿರಂತರ‌ ಮಳೆ ಮತ್ತು ಕೊರೊನಾ ಕಾಲದಿಂದ ಕಾಡಿಗೆ ಬೆಂಕಿ ಬಿದ್ದಿರಲಿಲ್ಲ, ಈಗ ಪರಿಸ್ಥಿತಿ ಬದಲಾಗಿದ್ದು, ಕಾಡಿಗೆ ಬೇಸಿಗೆ ಕಂಟಕ ಆರಂಭವಾಗಿದೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: ಅಂಗಡಿ ಎದುರು ಆಟವಾಡುತ್ತಿದ್ದ ಬಾಲಕ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.