ವಿಜಯಪುರ : ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಬಳಿ 108 ಆ್ಯಂಬುಲೆನ್ಸ್ನಲ್ಲೇ ಗರ್ಭಿಣಿಯೊಬ್ಬಳು ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾಳೆ.
ಬ್ಯಾಕೋಡ ಗ್ರಾಮದ ನಿವಾಸಿ ದಿಲಶಾದ್ ಚಪ್ಪರಬಂದ್ ಎಂಬಾಕೆಯನ್ನು ಹೆರಿಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಹೆರಿಗೆ ನೋವು ಹೆಚ್ಚಾಗಿದೆ. ಈ ವೇಳೆ ಆ್ಯಂಬುಲೆನ್ಸ್ ನ ಶುಶ್ರೂಷಕ ರಮೇಶ್ ಹಾಗೂ ಚಾಲಕ ಬಸವರಾಜಯ್ಯ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮಕ್ಕಳು ಸುರಕ್ಷಿತವಾಗಿದ್ದಾರೆ.
ಹೆರಿಗೆ ಬಳಿಕ ಹೂವಿನ ಹಿಪ್ಪರಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಯಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ.