ETV Bharat / state

ಭೀಮಾತೀರದ ರಕ್ತಸಿಕ್ತ ಅಧ್ಯಾಯ.. ಸಂಧಾನದ ಮೂಲಕ ಇತಿಶ್ರೀ ಹಾಡಿದ ಎಡಿಜಿಪಿ ಅಲೋಕ್​ ಕುಮಾರ್ - ಅಗ್ನಿಪಥ್​ ವೀರರೊಂದಿಗೆ ಸಂವಾದ ಕಾರ್ಯಕ್ರಮ

ಭೀಮಾತೀರದ ರಕ್ತಸಿಕ್ತ ಇತಿಹಾಸ - ಮಹಾದೇವ ಭೈರಗೊಂಡ ಹಾಗೂ ಚಡಚಣ ಕುಟುಂಬದ ನಡುವಿನ ದ್ವೇಷ- ಎಡಿಜಿಪಿ ಅಲೋಕ್​ ಕುಮಾರ್​ ಅವರ ಸಂಧಾನ ಮೂಲಕ ಇತ್ಯರ್ಥ

Conversation program with heroes of Agnipath
ಅಗ್ನಿಪಥ್​ ವೀರರೊಂದಿಗೆ ಸಂವಾದ ಕಾರ್ಯಕ್ರಮ
author img

By

Published : Feb 16, 2023, 7:51 AM IST

Updated : Feb 16, 2023, 10:31 AM IST

ಮಹಾದೇವ ಭೈರಗೊಂಡ ಹಾಗೂ ಚಡಚಣ ಕುಟುಂಬದ ನಡುವೆ ನಡೆದ ಸಂಧಾನದ ದೃಶ್ಯ

ವಿಜಯಪುರ: ಕಳೆದ ಐದು ದಶಕಗಳ ಭೀಮಾತೀರದ ರಕ್ತಸಿಕ್ತ ಚರಿತ್ರೆಗೆ ಎಡಿಜಿಪಿ ಅಲೋಕ್​ ಕುಮಾರ್​ ಅವರು ಸಂಧಾನ ಮೂಲಕ ಶಾಂತಿ ಸುವ್ಯವಸ್ಥೆ ಕಾಪಾಡಲು ಮೊದಲ ಹೆಜ್ಜೆ ಇಟ್ಟಿದ್ದಾರೆ. ಮಹಾದೇವ ಭೈರಗೊಂಡ ಹಾಗೂ ವಿಮಲಾಬಾಯಿ ಚಡಚಣ ಕುಟುಂಬದ ದ್ವೇಷಕ್ಕೆ ಇತಿಶ್ರೀ ಹಾಡಿದ್ದು, ಆಕಸ್ಮಿಕವಾಗಿ ಮತ್ತೆ ಹಳೆ ಚಾಳಿ ಮುಂದುವರೆಸಿದರೆ ಪೊಲೀಸರು ಆಯುಧ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಚಡಚಣದಲ್ಲಿ ನಡೆದ ಅಗ್ನಿಪಥ್​ ವೀರರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಐದು ದಶಕಗಳ ರಕ್ತಸಿಕ್ತ ಅಧ್ಯಾಯ.. ಭೀಮಾತೀರದಲ್ಲಿ ಮಹಾದೇವ ಭೈರಗೊಂಡ ಹಾಗೂ ಚಡಚಣ ಕುಟುಂಬದ ನಡುವೆ ಐದು ದಶಕಗಳಿಂದ ದ್ವೇಷದ ಹೊಗೆ ಆಡುತ್ತಲೇ ಇದೆ. ಎರಡು ಕುಟುಂಬಗಳಲ್ಲಿ ಹಲವರು ಈ ದ್ವೇಷಕ್ಕೆ ಬಲಿಯಾಗಿದ್ದಾರೆ. ಇದು ಭೀಮಾತೀರಕ್ಕೆ ಅಂಟಿದ ಕಳಂಕವೇ ಆಗಿತ್ತು. ಹಿರಿಯ ಐಪಿಎಸ್ ಅಧಿಕಾರಿ ಅಲೋಕ್​ ಕುಮಾರ್​ ಕಲಬುರಗಿ ಬೆಳಗಾವಿ ಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಈ ಭೀಮಾತೀರದ ರಕ್ತಸಿಕ್ತ ಅಧ್ಯಾಯ ಅಂತ್ಯ ಹಾಡಲು ನಡೆಸಿದ ಹಲವು ಪ್ರಯತ್ನಗಳ ಫಲವಾಗಿ ಈಗ ಕೊನೆಗೂ ಚಡಚಣ ಪೊಲೀಸ್ ಠಾಣೆಯ ಆವರಣದಲ್ಲಿ ಸ್ವಾಮೀಜಿ ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಇನ್ನೂ ಹಳೆ ದ್ವೇಷ ಮುಂದುವರೆಸುವುದಿಲ್ಲ ಎಂದು ಉಭಯ ಕುಟುಂಬದವರಿಂದ ಪ್ರಮಾಣ ಮಾಡಿಸಲಾಗಿದೆ.

ಈ ವೇಳೆ ವೇದಿಕೆಯಲ್ಲಿ ವಿಮಲಾಬಾಯಿ ಚಡಚಣ ಹಾಗೂ ಅವರ ಸಹೋದರ ಮಲ್ಲಿಕಾರ್ಜುನ ಮಹಾದೇವ ಭೈರಗೊಂಡ ತನ್ನ ಮೂರು ಮಕ್ಕಳನ್ನು ಕೊಲೆ ಮಾಡಿಸಿದ್ದಾನೆ ಎಂದು ಆಕ್ರೋಶ ಹೊರಹಾಕಿದರು. ವಿಮಲಾಬಾಯಿ ಮಕ್ಕಳ ಕಳೆದುಕೊಂಡ ನೋವಿಗೆ ಕಣ್ಣೀರು ಹಾಕಿದರು. ಇನ್ನೊಂದು ಕಡೆ ವೇದಿಕೆಯಲ್ಲಿದ್ದ ಮಹಾದೇವ ಭೈರಗೊಂಡ ಸೈಲೆಂಟ್ ಆಗಿಯೇ ಇದ್ದು ತಾನು ಸೇಡು ಮರೆತು ಉತ್ತಮ‌ ಜೀವನ ನಡೆಸುವುದಾಗಿ ಪ್ರಮಾಣ ಮಾಡಿದರು.

ಇದೇ ವೇಳೆ ಮಾತನಾಡಿದ ಎಡಿಜಿಪಿ ಅಲೋಕ್​ ಕುಮಾರ್, ತಾನು ಕಲಬುರಗಿ ಐಜಿಯಾಗಿದ್ದಾಲೇ ಭೀಮಾತೀರದಲ್ಲಿ ಶಾಂತಿ ನೆಲೆಸಬೇಕು ಎನ್ನುವುದು ನನ್ನ ಗುರಿಯಾಗಿತ್ತು. ನಂತರ ಬೆಳಗಾವಿಗೆ ವರ್ಗಾವಣೆ ಆದ ಮೇಲೆಯೂ ಪ್ರಯತ್ನ ಬಿಟ್ಟಿರಲಿಲ್ಲ. ಬೆಂಗಳೂರಿಗೆ ಮತ್ತೊಮ್ಮೆ ವರ್ಗಾವಣೆ ಆದಾಗ ನನ್ನ ಮನಸ್ಸಿನಲ್ಲಿ ಇದು ಕಾಡುತ್ತಿತ್ತು. ಈಗ ಕಾನೂನು ಸುವ್ಯವಸ್ಥೆ ಎಡಿಜಿಪಿಯಾದ ಮೇಲೆ ಮತ್ತೆ ಅವಕಾಶ ದೊರೆತ ಮೇಲೆ ಭೀಮಾತೀರದಲ್ಲಿ ಶಾಂತಿ ನೆಲೆಸಬೇಕೆಂಬ ತಮ್ಮ ಆಶಯ ಈಗ ಈಡೇರುತ್ತಿದೆ ಎಂದರು.

ಹಳೆ ಚಾಳಿ ಮುಂದುವರಿಸಿದರೆ ಹುಷಾರ್​.. ಈಗ ಕೇವಲ ಬಾಯಿ ಮಾತಿನಲ್ಲಿ ರಾಜಿ ಸಂದಾಯ ಮಾಡಿಕೊಂಡಿದ್ದರೂ, ಅವರ ಮೇಲೆ ನಿಗಾವಹಿಸುತ್ತೇವೆ, ಮತ್ತೆ ಹಳೆ ಚಾಳಿ ಆರಂಭಿಸಿದರೆ, ನಮಗೆ ಸರ್ಕಾರ ಆಯುಧ ಕೊಟ್ಟಿರುವದು ಪೂಜೆಗಲ್ಲ, ಅಗತ್ಯ ಬಿದ್ದರೆ ಅದನ್ನು ಬಳಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು. ಸದ್ಯ ಮೇಲ್ನೋಟಕ್ಕೆ ಎರಡು ಕುಟುಂಬದ ಮಧ್ಯೆ ಸಂಧಾನ ಯಶಸ್ವಿಯಾಗಿರಬಹುದು. ಆದರೂ ಪೊಲೀಸರು ಮಾತ್ರ ಇವರ ಚಲನವಲನದ ಮೇಲೆ ನಿಗಾ ಇಡುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಎಡಿಜಿಪಿ ಸಭೆ: ಇನ್ನೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿರುವ ಕಾರಣ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದು, ಅಪರಾಧ ಹಿನ್ನೆಲೆ ಹೊಂದಿರುವವರು ರಾಜಕೀಯ ನಾಯಕರ ಜತೆ ಗುರುತಿಸಿಕೊಂಡಿದ್ದವರ ಮೇಲೆ ನಿಗಾ ವಹಿಸಲಾಗಿದೆ. ಅಗತ್ಯಕ್ಕಿಂತ ಹೆಚ್ಚು ಗನ್ ಲೈಸನ್ಸ್ ನೀಡಿರುವ ಮಾಹಿತಿ ಲಭ್ಯವಾಗಿದೆ. ಅದನ್ನು ತಡೆಯಲು ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಜಿಲ್ಲೆಯಲ್ಲಿ ಅಪರಾಧ ಹಿನ್ನೆಲೆ ಹೊಂದಿರುವ 16 ಜನ ಗಡಿಪಾರಾಗಿದ್ದಾರೆ. ಇವರ ಜೊತೆ ರೌಡಿ ಶೀಟರ್​ಗಳ ಚಲನವಲನಗಳ ಮೇಲೆ ನಿಗಾವಹಿಸಲಾಗುತ್ತಿದೆ. ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಅಲೋಕ್​ಕುಮಾರ್​ ಮಾಹಿತಿ ನೀಡಿದರು.

ಇದನ್ನೂ ಓದಿ: ಕಳ್ಳತನ ಮಾಡಲು ಬಂದ ಖದೀಮ ನಿದ್ದೆಗೆ ಜಾರಿದ.. ಇದು ನಡೆದಿದ್ದೆಲ್ಲಿ ಗೊತ್ತೇ?

Last Updated : Feb 16, 2023, 10:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.