ETV Bharat / state

ಭೀಮಾ ನದಿಯಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ - man found as dead

ಶಂಕರ ಕಲ್ಲಪ್ಪ ಕೋಲೆ(65) ಶನಿವಾರ ಸಂಜೆ ನಂದೂರ ಗ್ರಾಮದ ಸಂಬಂಧಿಕರ ಮನೆಯಿಂದ ವಾಪಸ್ ಕಂದಲಗಾಂವಗೆ ಬೈಕ್​​ನಲ್ಲಿ ಬರುವಾಗ ಭಂಡರಕವಟೆಯ ಸೇತುವೆ ಮೇಲಿಂದ ಆಯ ತಪ್ಪಿ ಭೀಮಾ ನದಿಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದು, ಸದ್ಯ ಶವ ಪತ್ತೆಯಾಗಿದೆ.

A man found as dead
ಭೀಮಾನದಿಯಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆ
author img

By

Published : Sep 15, 2020, 10:53 AM IST

ವಿಜಯಪುರ: ಭೀಮಾನದಿಯಲ್ಲಿ ಬೈಕ್ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ಮಹಾರಾಷ್ಟ್ರದ ಲೌವಲಗಿ ಗ್ರಾಮದ ಭೀಮಾ ನದಿಯಲ್ಲಿ ತೇಲಾಡುತ್ತಿದ್ದ ಈತನ ಶವವನ್ನು ರೈತನೊಬ್ಬ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಮಹಾರಾಷ್ಟ್ರದ ಕಂದಲಗಾಂವ ನಿವಾಸಿ ಶಂಕರ ಕಲ್ಲಪ್ಪ ಕೋಲೆ(65) ಶನಿವಾರ ಸಂಜೆ ನಂದೂರ ಗ್ರಾಮದ ಸಂಬಂಧಿಕರ ಮನೆಯಿಂದ ವಾಪಸ್ ಕಂದಲಗಾಂವಗೆ ಬೈಕ್​​ನಲ್ಲಿ ಬರುವಾಗ ಭಂಡರಕವಟೆಯ ಸೇತುವೆ ಮೇಲಿಂದ ಆಯ ತಪ್ಪಿ ಭೀಮಾ ನದಿಯಲ್ಲಿ ಬಿದ್ದು ಕೊಚ್ಚಿ ಹೋಗಿದ್ದ. ಅವರ ಪತ್ತೆಗಾಗಿ ಸ್ಥಳೀಯ ಮೀನುಗಾರರು ಹಾಗೂ ಈಜುಗಾರರು ಎರಡು ದಿನಗಳಿಂದ ಶೋಧ ಕಾರ್ಯ ನಡೆಸಿದ್ದರು. ಸೋಮವಾರ ಸಂಜೆ ನಾದೇಪೂರ ಬಾಂದಾರ ಮುಂಭಾಗ ಲೌವಲಗಿ ಬಳಿಯ ಭೀಮಾ ನದಿಯ ರೈತರೊಬ್ಬರ ಪಂಪ್ ​​​ಸೆಟ್ ಬಳಿ ಶವ ಪತ್ತೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.