ETV Bharat / state

ಹಳ್ಳಿ ಹುಡುಗರ ಕೃಷಿ ಯಂತ್ರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ.. ಇನ್ಸ್​ಪೈರ್​​ ಅವಾರ್ಡ್​​ ಗೆದ್ದ ವಿಜಯಪುರದ ವಿದ್ಯಾರ್ಥಿಗಳು..

author img

By

Published : Sep 28, 2021, 2:29 PM IST

Updated : Sep 28, 2021, 7:30 PM IST

ಕೃಷಿ ಕೆಲಸಗಳಲ್ಲಿ ಪವರ್ ಟಿಲ್ಲರ್, ರೂಟರ್, ಬಿತ್ತನೆ ಕಾರ್ಯ, ಕಳೆ ಕತ್ತರಿಸುವುದು, ಔಷಧ ಸಿಂಪಡಣೆ, ಗುಂಡಿ ತೋಡುವುದು, ಗ್ರಾಸ್ ಕಟಿಂಗ್, ಪುಟ್ಟ ಪುಟ್ಟ ಮರಗಳ ಬಾರ್ಡರ್ ಕಟಿಂಗ್ ಸೇರಿದಂತೆ ಇತರ ಕೆಲಸಗಳನ್ನು ಈ ಒಂದೇ ಯಂತ್ರದ ಮೂಲಕ ಮಾಡಬಹುದಾಗಿದೆ..

A Machine which made by SSLC Students wins Inspire Awarded
ಹಳ್ಳಿ ಹುಡುಗರ ಕೃಷಿ ಯಂತ್ರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ

ವಿಜಯಪುರ : ಕೃಷಿ ವಲಯದಲ್ಲಿ ಕೆಲಸಗಾರರು ಸಿಗದೇ ರೈತರು ಜಮೀನು ಕೆಲಸಗಳಿಗೆ ಯಂತ್ರಗಳ ಮೊರೆ ಹೋಗಿದ್ದಾರೆ. ಆದರೆ, ಸಣ್ಣ ಮತ್ತು ಮಧ್ಯಮ ರೈತರಿಗೆ ಈ ಯಂತ್ರಗಳ ಬಳಕೆಯೂ ಸಹ ಹೆಚ್ಚು ಹೊರೆಯಾಗುತ್ತಿದೆ. ಈ ಹಿನ್ನೆಲೆ ರೈತರಿಗೆ ಕೈಗೆಟುಕುವ ಯಂತ್ರವೊಂದನ್ನ ಎಸ್​​ಎಸ್​​ಎಲ್​ಸಿ ವಿದ್ಯಾರ್ಥಿಗಳು ತಯಾರಿಸಿದ್ದಾರೆ. ಇನ್ಸ್​ಪೈರ್​ ಅವಾರ್ಡ್​ ಸಹ ಗೆದ್ದುಕೊಂಡಿದ್ದಾರೆ.

ಜಿಲ್ಲೆಯ ಇಂಡಿ ತಾಲೂಕಿನ ಸರ್ಕಾರಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ‘ಭೀಮ ಸಲಗ’ ಎಂಬ ಯಂತ್ರ ತಯಾರಿಸಿದ್ದಾರೆ. ಈ ಯಂತ್ರಕ್ಕೆ ಇನ್ಸ್​ಪೈರ್​​​​ ಅವಾರ್ಡ್​​​​ ಸಹ ಬಂದಿದೆ. ಇಲ್ಲಿನ ನಾದ ಕೆ ಡಿ ಗ್ರಾಮದ ಸರ್ಕಾರಿ ಮಾಧ್ಯಮಿಕ ಶಾಲೆಯ ದೇವೀಂದ್ರ ಬಿರಾದಾರ್ ಹಾಗೂ ಕಾರ್ತಿಕ್ ಈ ಸಾಧನೆ ಮಾಡಿದ್ದಾರೆ.

ಹಳ್ಳಿ ಹುಡುಗರ ಕೃಷಿ ಯಂತ್ರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿ.

ಹಳೆ ವಸ್ತು ಬಳಸಿ ಯಂತ್ರ ತಯಾರಿ

ಶಾಲೆಯಲ್ಲಿನ ನಿರುಪಯುಕ್ತ ವಸ್ತುಗಳು, ಹಳೆಯ ಫ್ಯಾನ್ ಭಾಗ, ಹಳೆಯ ಸೈಕಲ್ ವ್ಹೀಲ್​ಗಳು ಸೇರಿ ಇತರ ವಸ್ತು ಬಳಸಿ ಕಟಾವು ಯಂತ್ರ ತಯಾರು ಮಾಡಿದ್ದಾರೆ. ಸುಮಾರು 25 ರಿಂದ 30 ಸಾವಿರ ರೂಪಾಯಿ ಖರ್ಚು ಮಾಡಿ ಯಂತ್ರವನ್ನು ತಯಾರಿಸಿ 2019-20ನೇ ಸಾಲಿನ ಇನ್ಸ್​ಪೈರ್ ಅವಾರ್ಡ್ ವರ್ಚುವಲ್ ಸ್ಪರ್ಧೆಯಲ್ಲಿ ಭಾಗವಹಿಸಲಾಗಿತ್ತು.

ರಾಜ್ಯ ಸರ್ಕಾರ ಆಯೋಜಿಸುವ ಇನ್ಸ್​ಪೈರ್​ ಅವಾರ್ಡ್​ನಲ್ಲಿ ಭಾಗಿಯಾಗಿ ರಾಜ್ಯಕ್ಕೆ 4ನೇ ಸ್ಥಾನ ಹಾಗೂ ರಾಷ್ಟ್ರಪಟ್ಟದಲ್ಲಿ 28ನೇ ಸ್ಥಾನ ಪಡೆದಿರುವುದಲ್ಲದೇ, 10 ಸಾವಿರ ಪ್ರೋತ್ಸಾಹ ಧನ ತಮ್ಮದಾಗಿಸಿಕೊಂಡಿದ್ದಾರೆ.

ವಿದ್ಯುತ್​ನಿಂದ ಕಾರ್ಯ ನಿರ್ವಹಿಸುವ ಯಂತ್ರ

ಕೃಷಿ ಕೆಲಸಗಳಲ್ಲಿ ಪವರ್ ಟಿಲ್ಲರ್, ರೂಟರ್, ಬಿತ್ತನೆ ಕಾರ್ಯ, ಕಳೆ ಕತ್ತರಿಸುವುದು, ಔಷಧ ಸಿಂಪಡಣೆ, ಗುಂಡಿ ತೋಡುವುದು, ಗ್ರಾಸ್ ಕಟಿಂಗ್, ಪುಟ್ಟ ಪುಟ್ಟ ಮರಗಳ ಬಾರ್ಡರ್ ಕಟಿಂಗ್ ಸೇರಿದಂತೆ ಇತರ ಕೆಲಸಗಳನ್ನು ಈ ಒಂದೇ ಯಂತ್ರದ ಮೂಲಕ ಮಾಡಬಹುದಾಗಿದೆ.

ಪ್ರಾಯೋಗಿಕವಾದ ಯಂತ್ರವನ್ನು ಸದ್ಯ ವಿದ್ಯುತ್ ಸಹಾಯದಿಂದ ಉಪಯೋಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೋಲಾರ್ ಹಾಗೂ ಇಂಧನ ಶಕ್ತಿ ಮೂಲಕ ನಿರ್ವಹಿಸುವಂತೆ ರೂಪಿಸುವ ಕನಸು ಹೊಂದಿದ್ದಾರೆ.

ಈಗಾಗಲೇ ಈ ಯಂತ್ರಕ್ಕೆ ಅವಾರ್ಡ್ ಬಂದ ಕಾರಣ ಮುಂಬರುವ ದಿನಗಳಲ್ಲಿ ಈ ಸಾಧನಕ್ಕೆ ಪೇಟೆಂಟ್​ ಪಡೆದು ಹೆಚ್ಚಿನ‌ ಸಂಖ್ಯೆಯಲ್ಲಿ ಉತ್ಪಾದಿಸಿ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ರೈತರಿಗೆ ಸಿಗುವಂತೆ ಮಾಡುವ ಗುರಿಯನ್ನು ಈ ಯುವಕರು ಹೊಂದಿದ್ದಾರೆ.

Last Updated : Sep 28, 2021, 7:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.