ವಿಜಯಪುರ: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಪುರಸಭೆ ಸದಸ್ಯನ ಮೇಲೆ 6 ಜನರಿದ್ದ ಗುಂಪು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಇಂಡಿ ಪಟ್ಟಣದಲ್ಲಿ ನಡೆದಿದೆ. ಕಟ್ಟಿಗೆ, ಬಡಿಗೆಗಳಿಂದ ಮನಸೋಇಚ್ಚೆ ಹಲ್ಲೆ ಮಾಡಲಾಗಿದೆ. ಇಂಡಿ ವಾರ್ಡ್ ನಂಬರ್ 15ರ ಸದಸ್ಯ ಶಬೀರ್ ಖಾಜಿ ಹಲ್ಲೆಗೊಳಗಾಗಿದ್ದಾರೆ.
ಎಂ.ಬಿ.ಮಾಣಿಕ್ ಹಾಗೂ ಆತನ ಸಹಚರರು ಹಲ್ಲೆಗೈದ ಆರೋಪಿಗಳಾಗಿದ್ದಾರೆ. ಮನೆಯ ಪಕ್ಕದ ಜಾಗಕ್ಕಾಗಿ ಪುರಸಭೆ ಸದಸ್ಯ ಮತ್ತು ಮಾಣಿಕ್ ಮಧ್ಯೆ ನಡೆದ ಜಗಳದ ವೇಳೆ ಮಾಣಿಕ್ ಮತ್ತು ಆತನ ಸಹಚರರು ಮಾರಣಾಂತಿಕ ಹಲ್ಲೆ ಮಾಡಿರುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದೆ. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ವಿವಾಹೇತರ ಸಂಬಂಧ ಉಳಿಸಿಕೊಳ್ಳಲು ಜನ್ಮ ನೀಡಿದ ಮಗುವನ್ನೇ ಕೊಂದ ತಾಯಿ!