ಮುದ್ದೇಬಿಹಾಳ: ಹಂದಿಗಳ ಕಾಟದಿಂದ ಬೆಳೆ ಉಳಿಸಿಕೊಳ್ಳಲು ವಿದ್ಯುತ್ ತಂತಿ ಬೇಲಿ ಹಾಕಿದ್ದ ರೈತನೊಬ್ಬ ರಾತ್ರಿ ಕಾವಲಿಗೆಂದು ಹೋದಾಗ ತಾನೇ ಹಾಕಿದ್ದ ವಿದ್ಯುತ್ ಬೇಲಿಗೆ ಸಿಲುಕಿಕೊಂಡು ಸಾವನ್ನಪ್ಪಿರುವ ಘಟನೆ ತಾಲೂಕಿನ ಚಲಮಿಯಲ್ಲಿ ಜುಲೈ 5ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಬಸಪ್ಪ ಮಲ್ಲಪ್ಪ ಬಾದರದಿನ್ನಿ (40) ಮೃತ ರೈತ. ಚಲಮಿ ಗ್ರಾಮದಲ್ಲಿರುವ ತನ್ನ ಹೊಲದಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯನ್ನು ಹಂದಿಗಳ ಕಾಟದಿಂದ ರಕ್ಷಿಸಲು ಹೊಲದ ಸುತ್ತಲು ಕಬ್ಬಿಣದ ತಂತಿ ಬೇಲಿ ಹಾಕಿ ಅದಕ್ಕೆ ವಿದ್ಯುತ್ ಸಂಪರ್ಕ ನೀಡಿದ್ದ.
ಕಳೆದ ಜುಲೈ 5ರಂದು ರಾತ್ರಿ 10 ಗಂಟೆ ಸುಮಾರಿಗೆ ಬೆಳೆಯ ಕಾವಲಿಗೆಂದು ಹೊಲಕ್ಕೆ ಹೋದ ವೇಳೆ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿರುವುದನ್ನು ಲೆಕ್ಕಿಸದೆ ಹೊಲದೊಳಕ್ಕೆ ಹೋಗಿದ್ದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಪಿಎಸ್ಐ ಮಲ್ಲಪ್ಪ ಮಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.