ETV Bharat / state

ವಿಜಯಪುರದಲ್ಲಿ 71 ಕೊರೊನಾ ಸೋಂಕಿತರು ಪತ್ತೆ, ಒಂದು ಸಾವು - Coronavirus update

ವಿಜಯಪುರ ಜಿಲ್ಲೆಯಲ್ಲಿ ಈವರೆಗೂ ದಾಖಲಾದ 3,295 ಸೋಂಕಿತರ ಪೈಕಿ 2,271 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 39 ಮಂದಿ ಸಾವು ವರದಿಯಾಗಿದೆ.

Covid-19 Hospital
ಕೋವಿಡ್​-19 ಆಸ್ಪತ್ರೆ
author img

By

Published : Aug 4, 2020, 8:14 PM IST

ವಿಜಯಪುರ: ಜಿಲ್ಲೆಯಲ್ಲಿ ಇಂದು 71 ಕೊರೊನಾ ಸೋಂಕಿತ ಪ್ರಕರಣಗಳು ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 3,295ಕ್ಕೆ ಏರಿದೆ. 70 ವರ್ಷದ ವೃದ್ಧ ವ್ಯಕ್ತಿ (ರೋಗಿ ಸಂಖ್ಯೆ: 1,33,807) ಮೃತಪಟ್ಟಿರುವುದು ವರದಿಯಾಗಿದೆ.

ಇವರು ತೀವ್ರ ಉಸಿರಾಟದ ತೊಂದರೆಯಿಂದ ಜುಲೈ 31ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಇವರು ಅಂತ್ಯಸಂಸ್ಕಾರವನ್ನು ಸರ್ಕಾರದ ಶಿಷ್ಟಾಚಾರದಂತೆ‌ ನೆರವೇರಿಸಲಾಗಿದೆ.

ಜಿಲ್ಲೆಯಲ್ಲಿಂದು 78 ಮಂದಿ ಡಿಸ್ಚಾರ್ಜ್​ ಆಗಿದ್ದು, ಗುಣಮುಖರಾದವರ ಸಂಖ್ಯೆ 2,271ಕ್ಕೆ ತಲುಪಿದೆ. ಈವರೆಗೂ 39 ಮಂದಿ ಮೃತಪಟ್ಟಿದ್ದು, 985 ಸಕ್ರಿಯ ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.