ವಿಜಯಪುರ: ಜಿಲ್ಲೆಯಲ್ಲಿ ಮತ್ತೊಮ್ಮೆ ಕೊರೊನಾ ಆಘಾತ ಸೃಷ್ಟಿಸಿದೆ. ಇಂದು ಮತ್ತೆ 37 ಹೊಸ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಲ್ಲಿ ಒಟ್ಟಾರೆ 507 ಪಾಸಿಟಿವ್ ಪ್ರಕರಣ ದೃಢಪಟ್ಟಂತಾಗಿದೆ.
ಇಂದು 37 ಪಾಸಿಟಿವ್ ಪ್ರಕರಣದಲ್ಲಿ ಇಬ್ಬರು ಬಾಲಕಿಯರು, ಇಬ್ಬರು ಯುವತಿಯರು, 25 ಜನ ಪುರುಷ ಹಾಗೂ 8 ಮಹಿಳೆಯರು ಸೇರಿದ್ದಾರೆ. ಇವರಲ್ಲಿ ಮಹಾರಾಷ್ಟ್ರ ಸಂಪರ್ಕದಿಂದ ಇಬ್ಬರಿಗೆ, ಬೆಂಗಳೂರಿನಿಂದ ಇಬ್ಬರು, ತೀವ್ರ ಉಸಿರಾಟ ಸಮಸ್ಯೆ ಹೊಂದಿದ್ದ ಇಬ್ಬರು, ಶೀತ, ನೆಗಡಿಯಿಂದ 23 ಹಾಗೂ ಇಬ್ಬರ ಸಂಪರ್ಕ ಹುಡುಕಲಾಗುತ್ತಿದೆ.
ಇಂದು 24 ಜನ ಸೇರಿ ಇಲ್ಲಿಯವರೆಗೆ 374 ಸೊಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇನ್ನೂ 122 ಜನ ಸೊಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 11 ಮಂದಿ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.