ವಿಜಯಪುರ: ಜಿಲ್ಲೆಯಲ್ಲಿ 15 ವರ್ಷದ ಒಳಗಿನ ಮಕ್ಕಳಲ್ಲಿಯೂ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಆತಂಕ ಮೂಡಿಸಿದೆ. ಜನವರಿ 1 ರಿಂದ 9 ರವರೆಗೆ ಇಲ್ಲಿಯವರೆಗೆ 32 ಮಕ್ಕಳಿಗೆ ಕೊರೊನಾ ಅಟ್ಯಾಕ್ ಮಾಡಿದೆ.
ಅದರಲ್ಲಿ 2 ರಿಂದ 5 ವರ್ಷದ ಇಬ್ಬರು ಮಕ್ಕಳಿಗೆ, 6 ರಿಂದ 10 ವರ್ಷದ ಐವರು ಹಾಗೂ 11 ರಿಂದ 15 ವರ್ಷದ ಒಳಗಿನ 25 ಮಕ್ಕಳು ಸೇರಿ ಒಟ್ಟು 32 ಮಕ್ಕಳಿಗೆ ಸೋಂಕು ತಗುಲಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಪ್ರಾಥಮಿಕ ಸಂಪರ್ಕ: ಸಚಿವ ಸುಧಾಕರ್ ಹೋಂ ಐಸೋಲೇಟ್
ಒಟ್ಟು ಜನವರಿ 1 ರಿಂದ ಇಲ್ಲಿಯವರೆಗೆ ಜಿಲ್ಲೆಯ 222 ಜನರು ಕೋವಿಡ್ಗೆ ಒಳಗಾಗಿದ್ದಾರೆ. 12,772 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.