ETV Bharat / state

ವಿಜಯಪುರದಲ್ಲಿ 28ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌: ಹಲವು ವಿಭಾಗದಲ್ಲಿ ಪ್ರಶಸ್ತಿ ಗೆದ್ದ ರಾಜ್ಯದ ಸೈಕ್ಲಿಸ್ಟ್​ಗಳು - ಸೈಕ್ಲಿಂಗ್ ಚಾಂಪಿಯನ್‌ಶಿಪ್‌

ವಿಜಯಪುರದಲ್ಲಿ ನಡೆದ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್​ನಲ್ಲಿ ರಾಜ್ಯದ ಸೈಕ್ಲಿಸ್ಟ್​ಗಳು ಹಲವು ವಿಭಾಗದಲ್ಲಿ ಪ್ರಶಸ್ತಿ ಜಯಿಸಿದ್ದಾರೆ.

Etv Bharat
Etv Bharat
author img

By ETV Bharat Karnataka Team

Published : Jan 13, 2024, 10:58 PM IST

ವಿಜಯಪುರದಲ್ಲಿ 28ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌

ವಿಜಯಪುರ: 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ ವಿಜಯಪುರದಲ್ಲಿ ಅದ್ಧೂರಿಯಾಗಿ ನಡೆಯಿತು. ವಿಜಯಪುರ– ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ ನಾಲ್ಕು ದಿನ ಕಾಲ ನೆರವೇರಿತು. ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ 850 ಸೈಕ್ಲಿಸ್ಟ್‌ಗಳು 150 ತಾಂತ್ರಿಕ ಅಧಿಕಾರಿಗಳು ಈ ಸೈಕ್ಲಿಂಗ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದರು. ಜನವರಿ 9 ರಿಂದ 12 ವರೆಗೆ ನಾಲ್ಕು ದಿನಗಳ ಕಾಲ ನಡೆದ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ ಎಲ್ಲರ ಗಮನ ಸೆಳೆಯಿತು.

ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜು ಬಿರಾದಾರ ಮಾತನಾಡಿ, "ವಿಜಯಪುರ ಜಿಲ್ಲೆ ಸೈಕ್ಲಿಂಗ್ ಕಾಶಿ ಎಂದು ಹೆಸರುವಾಸಿಯಾಗಿರುವ ಜಿಲ್ಲೆ. 28ನೇ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್​ಗೆ 850 ಸೈಕ್ಲಿಸ್ಟ್‌ಗಳು 150 ತಾಂತ್ರಿಕ ಅಧಿಕಾರಿಗಳು ಬಂದಿದ್ದಾರೆ. ಅದರ ಜೊತೆಗೆ ಸೈಕ್ಲಿಂಗ್​ ಫೆಡರೇಷನ್​ ಆಫ್​ ಇಂಡಿಯಾದ 25 ಮಂದಿ ತಾಂತ್ರಿಕ ಅಧಿಕಾರಿಗಳು ಬಂದಿದ್ದಾರೆ. ಇಲ್ಲಿ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ ಆಯೋಜಿಸಬೇಕು ಎಂದು ರಾಷ್ಟ್ರೀಯ ಸೈಕ್ಲಿಂಗ್​ ಫೆಡರೆಷನ್​ ಆಫ್​ ಇಂಡಿಯಾದ ಅಧ್ಯಕ್ಷ ಪಂಕಜ್​ ಸಿಂಗ್​ ಹಾಗೂ ಕಾರ್ಯದರ್ಶಿ ಮಣಿಂದರ್ ಪಾಲ್​ ಸಿಂಗ್​ ಅವರನ್ನು ಕೇಳಿದಾಗ ಒಪ್ಪಿಗೆ ಕೊಟ್ಟರು. ರಾಷ್ಟ್ರೀಯ ರೋಡ್​ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ ವಿಜಯಪುರದಲ್ಲಿ ನಡೆಯುತ್ತಿರುವುದು ಎರಡನೇ ಬಾರಿ ಆಗಿದೆ. ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ ಆಯೋಜನೆ ಅವಕಾಶ ಮಾಡಿಕೊಟ್ಟ ಎನ್​ಹೆಚ್​ಐ ಮತ್ತು ವಿಜಯಪುರ ಜಿಲ್ಲಾಧಿಕಾರಿಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.

ಸೈಕ್ಲಿಸ್ಟ್‌ ಗಾಯತ್ರಿ ಕಿತ್ತೂರು ಮಾತನಾಡಿ, ನಾನು ಇಲ್ಲಿನ ಸೈಕ್ಲಿಂಗ್ ಕ್ಯಾಂಪ್​ಗೆ ಬಂದು 40 ದಿನ ಆಗಿದೆ. ನಾನು ಬೇರೆ ರಾಜ್ಯಗಳಲ್ಲಿ ನಡೆದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ, ಆದರೆ,ಈಗ ವಿಜಯಪುರದಲ್ಲಿ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್‌​ನಲ್ಲಿ ಚಿನ್ನದ ಪದಕ ಪಡೆದಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ನನಗೆ ತರಬೇತಿ ನೀಡಿದ ಎಲ್ಲ ತರಬೇತುದಾರರಿಗೆ ಧನ್ಯವಾದಗಳು ಎಂದರು.

ಇನ್ನು ಸೈಕ್ಲಿಂಗ್ ನೋಡಲು ವಿಜಯಪುರ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಕ್ರೀಡಾಭಿಮಾನಿಗಳು ಮುಗಿಬಿದ್ದಿದ್ದರು. ರಾಷ್ಟ್ರೀಯ ಹೆದ್ದಾರಿ ಒನ್ ವೇ ಮಾಡಿ ಒಂದು ಕಡೆ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಸ್ಪರ್ಧೆ ನಡೆಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವಕಾಶ ಕಲ್ಪಿಸಿತ್ತು. ವಿಜಯಪುರದಲ್ಲಿ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಆಯೋಜಿಸಿದಕ್ಕೆ ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ಇನ್ನೂ ನಮ್ಮ‌ ರಾಜ್ಯದ ಸೈಕ್ಲಿಸ್ಟ್‌ ಹಲವು ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.

ಇದನ್ನೂ ಓದಿ: ಕರ್ನಾಟಕ ರಣಜಿ ತಂಡದಲ್ಲಿ ಬೆಳಗಾವಿಯ ಕುಸ್ತಿಪಟುವಿನ ಮಗ: ಹಲವು ವರ್ಷಗಳ ಪರಿಶ್ರಮಕ್ಕೆ ಸಿಕ್ಕ ಫಲ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.