ETV Bharat / state

ಮಾಜಿ ಸಚಿವ ಎಂಸಿ ಮನಗೂಳಿ ನಿಧನ, ಅಕಾಲಿಕ ಮಳೆ ಸೇರಿ ವಿಜಯಪುರದಲ್ಲಿ 2021ರ ಹಿನ್ನೋಟ ಹೀಗಿದೆ..

ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿದ್ದ ಎಂಸಿ ಮನಗೂಳಿ ನಿಧನ, ಮುಳವಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನ, ಉಪ ಚುನಾವಣೆ ಸೇರಿದಂತೆ 2021ರಲ್ಲಿ ವಿಜಯಪುರ ಜಿಲ್ಲೆ ಹಲವು ಏರಿಳಿತಗಳನ್ನು ಕಂಡಿದೆ. ಅದರ ಒಂದು ಕಿರು ನೋಟ ಇಲ್ಲಿದೆ..

2021 flashback in vijayapura district
ಮಾಜಿ ಸಚಿವ ಎಂಸಿ ಮನಗೂಳಿ ಸೇರಿ ವಿಜಯಪುರದಲ್ಲಿ 2021ರ ಹಿನ್ನೋಟ ಹೀಗಿದೆ...
author img

By

Published : Dec 31, 2021, 5:59 PM IST

ವಿಜಯಪುರ : 2022ರ ಹೊಸ ವರ್ಷದ ಹೊಸ್ತಿಲಿನಲ್ಲಿರುವ ನಮಗೆ ಹಳೆಯ ವರ್ಷದ ಆಗು ಹೋಗುಗಳ ನೆನಪುಗಳು ಯಾವಾಗಲೂ ಇರಬೇಕಾಗುತ್ತದೆ. ವಿಜಯಪುರ ಜಿಲ್ಲೆಗೆ 2021 ಖುಷಿಗಿಂತ ಕಹಿಯೇ ಹೆಚ್ಚಾಗಿದೆ ಎಂದರೆ ತಪ್ಪಾಗಲಾರದು.

ಕೊರೊನಾ, ಅಕಾಲಿಕ ಮಳೆ, ಭೂಪಂಕನ, ಹವಾಮಾನ ವೈಪರೀತ್ಯ ಸೇರಿದಂತೆ ಹತ್ತು ಹಲವಾರು ಸಂಕಷ್ಟಗಳು ಜಿಲ್ಲೆಗೆ ಎದುರಾದವು.‌ ಮೊದಲು ಅರ್ಧ ವರ್ಷ ಕೊರೊನಾ ಸಂಕಷ್ಟಕ್ಕೆ ಸಿಲುಕಿ ಸಾಕಷ್ಟು ಮಂದಿ ಮೃತಪಟ್ಟರು.‌ ಆಕ್ಷಿಜನ್ ಇಲ್ಲದೇ ಎಷ್ಟೋ ಜೀವಗಳ ಪ್ರಾಣ ಪಕ್ಷಿ ಹಾರಿ ಹೋಗಿದೆ. ಕೆಲ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಷಿಜನ್ ಸಿಗದೇ ಸಾಕಷ್ಟು ಜನ ಜೀವ ಕಳೆದು ಕೊಳ್ಳಬೇಕಾಯಿತು.

ಮಾಜಿ ಸಚಿವ ಎಂಸಿ ಮನಗೂಳಿ ನಿಧನ, ಅಕಾಲಿಕ ಮಳೆ ಸೇರಿ ವಿಜಯಪುರದಲ್ಲಿ 2021ರ ಹಿನ್ನೋಟ..

ಗಣ್ಯರ ಅಗಲಿಕೆ : ಮಾಜಿ ಸಚಿವ ಎಂ.ಸಿ.‌ಮನಗೂಳಿ ವಯೋಸಹಜ ಕಾಯಿಲೆಯಿಂದ ನಿಧನರಾದರು.‌ ಮಾಜಿ ಶಾಸಕರಾದ ಆರ್ ಆರ್ ಕಲ್ಲೂರ, ಎನ್.ಎಸ್. ಖೇಡ್ ಕೂಡ ವಿಧಿವಶರಾದರು.
ಹಾಸ್ಯನಟನ ಮೇಲೆ ಹಲ್ಲೆ : ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಅವರ ಸಂಸಾರಿಕ ಜೀವನದಲ್ಲಿ ಎದ್ದ ಬಿರುಗಾಳಿಯಿಂದ ಅವರ ಸಂಬಂಧಿಕರಿಂದಲೇ ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಬೇಕಾಯಿತು. ಯೋಗಾಪುರ ಕಾಲೋನಿಯ ಅಕ್ಕನ ಮಗನ ಮಡದಿಗೆ ವಿಷ ಕುಡಿಸಿ ಕೊಲೆಗೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು.

ಉಪಚುನಾವಣೆ : ಸಿಂದಗಿ ವಿಧಾನಸಭೆ ಮತಕ್ಷೇತ್ರದ ಶಾಸಕರಾಗಿದ್ದ ಎಂ.ಸಿ.ಮನಗೂಳಿ ನಿಧನದ ನಂತರ ನಡೆದ ಉಪಚುನಾವಣೆ ರಾಜಕೀಯ ಮಜಲನ್ನು ಬದಲಿಸಿತ್ತು. ಅವರ ಪುತ್ರ ಅಶೋಕ ಮನಗೂಳಿ ಕಾಂಗ್ರೆಸ್ ಸೇರಿ ಅಲ್ಲಿಂದ ಸ್ಪರ್ಧೆಗೆ ಇಳಿದರೆ. ಎರಡು ಬಾರಿ‌ ಕ್ಷೇತ್ರದ ಶಾಸಕರಾಗಿದ್ದ ರಮೇಶ ಭೂಸನೂರ ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದು ಜಯ ಸಾಧಿಸಿದರು.

ಭೂಕಂಪನ : ಮುಳವಾಡ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನದ ಅನುಭವ ಆಯಿತು.‌ ಸೆಪ್ಟೆಂಬರ್‌ನಿಂದ ಅಕ್ಟೋಬರ್‌ವರೆಗೆ 14 ಬಾರಿ ಭೂಮಿ ಕಂಪಿಸಿತ್ತು.‌ ನಂತರ ತಜ್ಞರ ತಂಡ ಸಹ ಭೇಟಿ ನೀಡಿ ಪರಿಶೀಲಿಸಿದೆ.

ಅಕಾಲಿಕ ಮಳೆ : ಸೆಪ್ಟೆಂಬರ್ ಮೊದಲ ವಾರದಲ್ಲಿ ಸುರಿದ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಗೊಳಗಾಯಿತು. 12.56 ಸೆಂಟರ್ ಮೀಟರ್ ಮಳೆಯಾದ ಕಾರಣ ಕೆರೆ-ಕಟ್ಟೆಗಳು ಭರ್ತಿಯಾದವು. ನಂತರ ಡಿಸೆಂಬರ್ ಮೊದಲ ವಾರ ಸುರಿದ ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗೆ ಗೋನಿ ರೋಗ ಹಾಗೂ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆದ ತೊಗರಿ ಬೆಳೆಗೆ ಕೊಳೆತ ಕಂಡು ಬಂದ ಕಾರಣ ಅನ್ನದಾತನ ಆಕಾಶದ ಗೋಪುರವೇ ಕಳಚಿ ಹೋಯಿತು.‌

ಸಿಡಿ ಪ್ರಕರಣ ಸದ್ದು : ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಲೈಂಗಿಕ‌ ರಾಸಲೀಲೆ ಪ್ರಕರಣ ಜಿಲ್ಲೆಗೂ ಅಂಟಿಕೊಂಡಿತ್ತು. ಸಿಡಿಯಲ್ಲಿದ್ದ ಸಂತ್ರಸ್ತೆ ಜಿಲ್ಲೆಯ ನಿಡಗುಂದಿಯವಳು ಎಂದು ಗೊತ್ತಾದ ಕ್ಷಣ ಆಕೆಯ ಮನೆಗೂ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.‌

ಘಟಿಕೋತ್ಸವ : ರಾಜ್ಯದ ಮೊದಲು‌ ಮಹಿಳಾ ವಿಶ್ವವಿದ್ಯಾಲಯ ಅಕ್ಕಮಹಾದೇವಿ ವಿವಿ ಘಟಿಕೋತ್ಸವ ನವೆಂಬರ್ 9ರಂದು ನಡೆಯಿತು. ವರ್ಚುವಲ್ ಮೂಲಕ ರಾಜ್ಯಪಾಲರು ಘಟಿಕೋತ್ಸವ ಉದ್ಘಾಟಿಸಿ ಮಾತನಾಡಿದರು.‌

ಇದನ್ನೂ ಓದಿ: ಜನರ ಹಿತಕ್ಕಾಗಿ ಕಾರ್ಯನಿರ್ವಹಿಸಿ: ಜಿಲ್ಲಾಧಿಕಾರಿಗೆ ಸಿಎಂ ಬೊಮ್ಮಾಯಿ ಸೂಚನೆ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.