ETV Bharat / state

ವಿಜಯಪುರದಲ್ಲಿ ಕೋವಿಡ್​ಗೆ 2 ವರ್ಷದ ಮಗು ಬಲಿ - ಕೋವಿಡ್​ಗೆ 2 ವರ್ಷದ ಮಗು ಬಲಿ

ವಿಜಯಪುರ ಜಿಲ್ಲೆಯಲ್ಲಿ ಕೊರೊನಾಗೆ ಎರಡು ವರ್ಷದ ಮಗುವೊಂದು ಬಲಿಯಾಗಿದೆ. ಈ ಮಗು ಉಸಿರಾಟ ಸಮಸ್ಯೆಯಿಂದ ಬಳಲುತ್ತಿತ್ತು. ಈ ಕುರಿತಂತೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋವಿಡ್​ಗೆ 2 ವರ್ಷದ ಮಗು ಬಲಿ
child death by corona
author img

By

Published : Sep 9, 2021, 12:18 PM IST

ವಿಜಯಪುರ: ಎರಡು ವರ್ಷದ ಹೆಣ್ಣು ಮಗುವೊಂದು ಕೋವಿಡ್​​ಗೆ ಬಲಿಯಾಗಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತಂತೆ ಜಿಲ್ಲಾಧಿಕಾರಿ ಪಿ.ಸುನೀಲ್​ ಕುಮಾರ್​ರವರು ಮಾಧ್ಯಮಗಳೊಂದಿಗೆ ಮಾಹಿತಿ ನೀಡಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 2 ವರ್ಷದ ಮಗುವಿಗೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಆ. 20 ರಂದು ಮಗು ಸಾವನ್ನಪ್ಪಿದೆ.

ಮಗುವಿಗೆ ವೈದ್ಯರು ಆರ್​ಟಿ-ಪಿಸಿಆರ್​​ ಪರೀಕ್ಷೆ ನಡೆಸಿದ್ದರು. ಆಗ ವರದಿ ನೆಗೆಟಿವ್ ಬಂದಿತ್ತು. ಆದರೆ ಮಗುವಿಗೆ ಕೊರೊನಾ ಲಕ್ಷಣಗಳು ಇದ್ದುದರಿಂದ ಇದನ್ನು ಕೋವಿಡ್ ಡೆತ್ ಎಂದೇ ಪರಿಗಣನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ ಎಂದು ತಜ್ಞರು ಈ ಹಿಂದೆ ಎಚ್ಚರಿಕೆ ನೀಡಿದ್ದರು.‌ ಅದರಂತೆ ಜಿಲ್ಲೆಯಲ್ಲಿ ಮಗು ಕೋವಿಡ್​​​​ಗೆ ಬಲಿಯಾಗಿದೆ. ಇದರಿಂದ ಜಿಲ್ಲಾಡಳಿತ ರೋಗ ಲಕ್ಷಣ ಕಂಡು ಬಂದ ಮಕ್ಕಳಿಗೆ ಆರ್​​​ಟಿ-ಪಿಸಿಆರ್​​ ಪರೀಕ್ಷೆ ನಡೆಸಲು ಆರಂಭಿಸಿದೆ.

ಓದಿ: ರಸ್ತೆ ವಿಸ್ತರಣೆಗಾಗಿ ಮರ ಕಡಿಯಲು ಮುಂದಾದ ಪಾಲಿಕೆ.. ವಿದ್ಯಾರ್ಥಿಗಳಿಂದ ಅಪ್ಪಿಕೋ ಚಳವಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.