ವಿಜಯಪುರ: ಅಕ್ರಮವಾಗಿ ಅಫೀಮು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಪೊಲೀಸರು ಬಂಧಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಅಫೀಮು ಹಾಗೂ ವಾಹನವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರನ್ನು ಮುನಿರಾಮ್ ಬಿಸನೋಯಿ ಹಾಗೂ ಪೂನಮ್ ಚಂದ್ ಬಿಸನೋಯಿ ಎಂದು ಗುರುತಿಸಲಾಗಿದೆ. ಇವರು ನಗರದ ಹೊರವಲಯದ ಹಿಟ್ಟಳ್ಳಿ ಟೋಲ್ ಗೇಟ್ ಬಳಿಯ ಪೆಟ್ರೋಲ್ ಬಂಕ್ ಹತ್ತಿರ ಅಕ್ರಮವಾಗಿ ಅಫೀಮು ಹಾಗೂ ಪೌಡರ್ ಮಾರಾಟ ಮಾಡುತ್ತಿದ್ದು, ಇವರನ್ನು ಬಂಧಿಸುವಲ್ಲಿ ಅಬಕಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಅವರ ಬಳಿ ಇದ್ದ 4 ಕೆಜಿ ಅಫೀಮು ಗಿಡದ ಕಾಯಿ ಹಾಗೂ ಒಂದು ಕೆಜಿಯಷ್ಟು ಅಫೀಮು ಪೌಡರ್ ವಶಕ್ಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ಒಂದು ಲಾರಿ ಸಹ ವಶಪಡಿಸಿಕೊಂಡಿದ್ದಾರೆ. ಅಬಕಾರಿ ನಿರೀಕ್ಷಕ ಮಹಾದೇವ ಪೂಜಾರಿ ನೇತೃತ್ವದಲ್ಲಿ ಸಿಬ್ಬಂದಿ ಭೀಮಣ್ಣ ಕುಂಬಾರ, ಪರಶುರಾಮ ತೆಲಗಿ ದಾಳಿಯಲ್ಲಿ ಭಾಗವಹಿಸಿದ್ದರು.