ETV Bharat / state

15 ಶಾಸಕರು ಯಾವ ಕಾರಣಕ್ಕೂ ರಾಜೀನಾಮೆ ನೀಡಲ್ಲ: ಎಂ.ಬಿ. ಪಾಟೀಲ್ ವಿಶ್ವಾಸ - ಎಂ.ಬಿ.ಪಾಟೀಲ್

ನಾಲ್ವರು ಶಾಸಕರ ರಾಜೀನಾಮೆ ಕುರಿತು ಎಂ ಬಿ ಪಾಟೀಲರಿಗೆ ಮಾಹಿತಿ ಇದೆ ಎಂಬ ಈಶ್ವರಪ್ಪ ಹೇಳಿಕೆಗೆ ಗರಂ ಆದ ಗೃಹ ಸಚಿವರು, ಈಶ್ವರಪ್ಪರಷ್ಟು ಇಂಟೆಲಿಜೆನ್ಸ್​ ನೆಟ್​ವರ್ಕ್ ನಮ್ಮದಲ್ಲ. ಅವರು ದೊಡ್ಡವರು, ಮೇಧಾವಿಗಳು, ಅವರನ್ನೇ ಈ ಬಗ್ಗೆ ಕೇಳಿ ಎಂದರು.

ಗೃಹ ಸಚಿವ ಎಂ.ಬಿ.ಪಾಟೀಲ್​
author img

By

Published : Jul 2, 2019, 5:10 PM IST

ವಿಜಯಪುರ: ಆನಂದ ಸಿಂಗ್​, ರಮೇಶ್ ಜಾರಕಿಹೊಳಿ ತಮ್ಮ ರಾಜೀನಾಮೆ ಪತ್ರ ಕಳಿಸಿದ ಮಾತ್ರಕ್ಕೆ ರಾಜೀನಾಮೆ ಅಂಗೀಕಾರ ಆಗೋದಿಲ್ಲ. ಖುದ್ದಾಗಿ ಬಂದು ಸ್ಪೀಕರ್ ಬಳಿ ರಾಜೀನಾಮೆ ಪತ್ರ ನೀಡಬೇಕು. ಸ್ಪೀಕರ್ ತನಿಖೆ ಮಾಡಬೇಕಾಗುತ್ತೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್​ ಹೇಳಿದ್ದಾರೆ.

ಜಿಲ್ಲೆಯ ಸೋಮದೇವರಹಟ್ಟಿಯಲ್ಲಿ ಮಾತನಾಡಿದ ಅವರು, ಆನಂದ ಸಿಂಗ್ ಹಾಗೂ ರಮೇಶ್ ಜಾರಕಿಹೊಳಿ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದರು. ಇನ್ನು 4 ಜನ ರಾಜೀನಾಮೆ ಕುರಿತು ಎಂ ಬಿ ಪಾಟೀಲರಿಗೆ ಮಾಹಿತಿ ಇದೆ ಎಂಬ ಈಶ್ವರಪ್ಪ ಹೇಳಿಕೆಗೆ ಗರಂ ಆದ್ರು. ಈಶ್ವರಪ್ಪ ಅವರಷ್ಟು ಇಂಟೆಲಿಜೆನ್ಸ್​ ನೆಟ್​ವರ್ಕ್ ನಮ್ಮದಲ್ಲ. ಅವರು ದೊಡ್ಡವರು, ಮೇಧಾವಿಗಳು, ಅವರನ್ನೇ ಈ ಬಗ್ಗೆ ಕೇಳಿ ಎಂದು ಕುಹಕವಾಡಿದರು.

ಗೃಹ ಸಚಿವ ಎಂ.ಬಿ.ಪಾಟೀಲ್​

ಇನ್ನು, ಮೈತ್ರಿ ಸರ್ಕಾರ ಅಸ್ಥಿರ ಮಾಡಲು 15 ಶಾಸಕರು ರಾಜೀನಾಮೆ ನೀಡಬೇಕು. ಇದು ಬಿಜೆಪಿಯ ವ್ಯರ್ಥ ಪ್ರಯತ್ನ, 15 ಶಾಸಕರು ಯಾವ ಕಾರಣಕ್ಕೂ ರಾಜೀನಾಮೆ ನೀಡಲ್ಲ. ಅಧಿಕಾರ ನಮ್ಮ ಕಡೆ ಇದ್ದು, ನಂಬರ್ಸ್ ಕೂಡ ನಮ್ಮ ಕಡೆ ಇವೆ. ಪ್ರಜಾಪ್ರಭುತ್ವದ ಕಾನೂನಿನಂತೆ ಅಧಿಕಾರ ನಡೆಸುತ್ತಿದ್ದೇವೆ ಎಂದು ಗೃಹ ಸಚಿವರು ಹೇಳಿದರು. ಇದೇ ವೇಳೆ ಸಿದ್ದರಾಮಯ್ಯ ಮತ್ತೆ ಸಿಎಂ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿ ಆ ಪ್ರಶ್ನೆ ಈಗ ಉದ್ಭವಿಸಲ್ಲ ಎಂದರು.

sample description
ETV Bharat Logo

Copyright © 2024 Ushodaya Enterprises Pvt. Ltd., All Rights Reserved.