ವಿಜಯಪುರ: ವಿಜಯಪುರ ಜಿಲ್ಲಾಡಳಿತ ನಡೆಸಿದ ಮನೆ ಮನೆ ಸಮೀಕ್ಷೆ ಫಲಪ್ರದವಾಗಿದ್ದು, ಜಿಲ್ಲೆಯಲ್ಲಿ 118 ಗ್ರಾಮಗಳು ಕೊರೊನಾ ಸೋಂಕು ಮುಕ್ತ ಗ್ರಾಮಗಳಾಗಿ ಗುರುತಿಸಿ ಕೊಂಡಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲೆಯ 12 ತಾಲೂಕಿನ 629 ಗ್ರಾಮಗಳಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿ ಗ್ರಾಮಗಳಿಗೆ ತೆರಳಿ ಮನೆ ಮನೆ ಸಮೀಕ್ಷೆ ನಡೆಸಿದ್ದರು. ಕೋವಿಡ್ ಲಕ್ಷ್ಮಣಗಳು ಕಂಡು ಬಂದ ಎಲ್ಲರಿಗೂ ಸ್ವ್ಯಾಬ್ ಟೆಸ್ಟ್ಗೆ ಒಳಪಡಿಸಲಾಗಿತ್ತು. ಸಮೀಕ್ಷೆ ಮುಗಿದ ನಂತರ ಒಟ್ಟು 118 ಗ್ರಾಮಗಳು ಕೊರೊನಾ ಸೊಂಕು ಮುಕ್ತ ಗ್ರಾಮಗಳಾಗಿ ಗುರುತಿಸಲಾಗಿದೆ. ಅದರಲ್ಲಿ ವಿಜಯಪುರ ತಾಲೂಕಿನಲ್ಲಿ 22, ಮುದ್ದೇಬಿಹಾಳ 23, ಸಿಂದಗಿ 18, ಇಂಡಿ 12 ಹಾಗೂ ಬಸವನಬಾಗೇವಾಡಿ ತಾಲೂಕಿನಲ್ಲಿ ಅತಿ ಹೆಚ್ಚು 43 ಗ್ರಾಮಗಳು ಸೇರಿ ಒಟ್ಟು 118 ಗ್ರಾಮಗಳು ಕೊರೊನಾ ಸೊಂಕು ಮುಕ್ತವಾಗಿವೆ.
ಉಳಿದ 7 ತಾಲೂಕಿನಲ್ಲಿ ಪ್ರತಿ ಹಳ್ಳಿಗಳಲ್ಲಿಯೂ ಸೋಂಕಿತರನ್ನು ಗುರುತಿಸಲಾಗಿದೆ. ಇವುಗಳಲ್ಲಿ ಮೂರು ಜಿಲ್ಲಾ ಪಂಚಾಯಿತಿಗಳು ಕೊರೊನಾ ಸೊಂಕು ಮುಕ್ತ ಪಂಚಾಯಿಗಳು ಒಳಗೊಂಡಿವೆ. ಅವುಗಳಲ್ಲಿ ಝಳಕಿ, ಅಂಜುಟಗಿ ಬಿ.ಕೆ. ಹಾಗೂ ಶಿರಶ್ಯಾಡ್ ಜಿಲ್ಲಾ ಪಂಚಾಯಿತಿಗಳಾಗಿವೆ. ಮನೆ ಮನೆ ಸಮೀಕ್ಷೆಯನ್ನು ಕಳೆದ 10 ದಿನಗಳಿಂದ ನಡೆಸಲಾಗಿತ್ತು. ಗ್ರಾಮಗಳಲ್ಲಿ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸಲಾಗಿದೆ. ಯಾರಿಗಾದರೂ ಸೋಂಕಿನ ಲಕ್ಷ್ಮಣ ಕಂಡು ಬಂದರೆ ತಕ್ಷಣ ಸ್ವ್ಯಾಬ್ ಟೆಸ್ಟ್ ಮಾಡಿಸಲಾಗುತ್ತಿದೆ. ಅಗತ್ಯ ಔಷಧ ನೀಡಿ 7 ದಿನ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದಿದ್ದಾರೆ.
BSYಗೆ ಆಡಳಿತ ನಡೆಸುವುದು ಗೊತ್ತು..ಮತ್ತೊಬ್ಬರ ಸಲಹೆ ಅಗತ್ಯವಿಲ್ಲ: ಯೋಗೇಶ್ವರ್ಗೆ ವಿಜಯೇಂದ್ರ ಟಾಂಗ್..!