ವಿಜಯಪುರ: ಕುರಿಗಾಹಿ ಮತ್ತು ಕುರಿಗಳ ಮೇಲೆ ಬೊಲೆರೋ ವಾಹನ ಡಿಕ್ಕಿಯಾಗಿ 10 ಕುರಿ ಸಾವನ್ನಪ್ಪಿದ್ದು, ಕುರಿಗಾಹಿಯೊಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ಬಸ್ ಡಿಪೋ ಹತ್ತಿರ ಸೋಮವಾರ ರಾತ್ರಿ ಸಂಭವಿಸಿದೆ.
ಕುರಿಗಾಹಿ ಲಿಂಗರಾಜ ಗುರವಿನ (21) ಸ್ಥಿತಿ ಗಂಭೀರವಾಗಿದ್ದು, ಈತನ ಜೊತೆ ಇದ್ದ ಸಹೋದರನಿಗೆ ಚಿಕ್ಕಪುಟ್ಟ ಗಾಯಗಳಾಗಿವೆ. ಇಬ್ಬರನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕುರಿ ಮೆಯಿಸಿಕೊಂಡು ಬಾಗೇವಾಡಿ ಬಸ್ ನಿಲ್ದಾಣದ ಬಳಿ ರಸ್ತೆ ದಾಟಿಸುವಾಗ ಹೂವಿನ ಹಿಪ್ಪರಗಿಯಿಂದ ಬಸವನಬಾಗೇವಾಡಿ ಪಟ್ಟಣಕ್ಕೆ ಬರುವ ಬೊಲೆರೋ ವಾಹನ ಡಿಕ್ಕಿ ಹೊಡೆದಿದೆ.
ಕುರಿಗಾಹಿ ಲಿಂಗರಾಜ ಗುರವಿನ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನ ಸಹೋದರನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಚಿಕಿತ್ಸೆಗಾಗಿ ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಾಲಕ ಪರಾರಿಯಾಗಿದ್ದಾನೆ. ಈ ಕುರಿತಾಗಿ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.