ETV Bharat / state

ವಿಜಯಪುರದಲ್ಲಿ ಮತ್ತೆ 10 ಬ್ಲ್ಯಾಕ್ ಫಂಗಸ್ ಪ್ರಕರಣ ಪತ್ತೆ - Vijayapura latest News

ಬ್ಲ್ಯಾಕ್ ಫಂಗಸ್ ವೈರಸ್​ಗೆ ಬಿಎಲ್​ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ರೋಗಿಯೊಬ್ಬರಿಗೆ ಔಷಧಿ ದೊರೆಯದೇ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ‌ ನೀಡಿ ಔಷಧಿ ಪೂರೈಸಲು ಮನವಿ‌ ಮಾಡಿದ್ದಾರೆ..

ಬ್ಕ್ಯಾಕ್ ಫಂಗಸ್
ಬ್ಕ್ಯಾಕ್ ಫಂಗಸ್
author img

By

Published : May 18, 2021, 6:52 PM IST

Updated : May 18, 2021, 9:52 PM IST

ವಿಜಯಪುರ : ಕೊರೊನಾ ಮಹಾಮಾರಿಯ ಮುಂದುವರೆದ ಭಾಗವಾಗಿರುವ ಬ್ಲ್ಯಾಕ್ ಫಂಗಸ್ ವೈರಸ್​ನ 10 ಪ್ರಕರಣ ಪತ್ತೆಯಾಗಿದ್ದು, ಕೇಸ್​ಗಳ ಸಂಖ್ಯೆ 36ಕ್ಕೆ ಏರಿಕೆಯಾಗಿದೆ.

ಎರಡು ದಿನಗಳ ಹಿಂದೆ ವಿಜಯಪುರ ‌ನಗರದ ವಿವಿಧ ಆಸ್ಪತ್ರೆಯಲ್ಲಿ 26 ಬ್ಲ್ಯಾಕ್ ಫಂಗಸ್ ವೈರಸ್ ಪ್ರಕರಣ ಪತ್ತೆಯಾಗಿದ್ದವು.‌ ಇಂದು ಮತ್ತೆ 10 ಪ್ರಕರಣ ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಪಿ. ಸುನಿಲ್‌ಕುಮಾರ್ ಮಾಹಿತಿ ನೀಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸದ್ಯ 36 ಬ್ಲ್ಯಾಕ್ ಫಂಗಸ್ ಪ್ರಕರಣ ದಾಖಲಾಗಿವೆ.‌

ಸದ್ಯ ಬ್ಲ್ಯಾಕ್ ಫಂಗಸ್ ಪ್ರಕರಣಕ್ಕೆ ಪ್ರತ್ಯೇಕ ವಾರ್ಡ್ ಮಾಡಿ ಬಿಎಲ್​ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ. ನಗರದ ಬಿಎಲ್​ಡಿಇ ಆಸ್ಪತ್ರೆಯಲ್ಲಿ 23, ಅಲ್ ಅಮೀನ್ ಆಸ್ಪತ್ರೆ 1,ಆಯುಷ್ 5, ಅಶ್ವಿನಿ1, ಚೌಧರಿ 2 ಹಾಗೂ ಯಶೋಧಾ ಆಸ್ಪತ್ರೆಯಲ್ಲಿ ನಾಲ್ಕು ರೋಗಿಗಳು ಪತ್ತೆಯಾಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಇನ್ನೂ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.

ಔಷಧಿ ಕೊರತೆ : ಬ್ಲ್ಯಾಕ್ ಫಂಗಸ್ ರೋಗ ತಡೆಯ ಔಷಧಿ ಸ್ವಲ್ಪ ದುಬಾರಿಯಾಗಿದೆ. ಬಹಳ ರೋಗಿಗಳಿಗೆ ವಿಜಯಪುರದಲ್ಲಿ ಔಷಧಿಯೇ ದೊರೆಯುತ್ತಿಲ್ಲ ಎಂಬ ದೂರು ಕೇಳಿ ಬಂದಿವೆ.

ಬ್ಲ್ಯಾಕ್ ಫಂಗಸ್ ವೈರಸ್​ಗೆ ಬಿಎಲ್​ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ರೋಗಿಯೊಬ್ಬರಿಗೆ ಔಷಧಿ ದೊರೆಯದೇ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ‌ ನೀಡಿ ಔಷಧಿ ಪೂರೈಸಲು ಮನವಿ‌ ಮಾಡಿದ್ದಾರೆ.

Last Updated : May 18, 2021, 9:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.