ಶಿರಸಿ: ಹುಡುಗರು ತಮ್ಮ ದ್ವಿಚಕ್ರ ವಾಹನಕ್ಕೆ ಜಾಗ ಕೊಡಲಿಲ್ಲ ಎಂಬ ಕಾರಣಕ್ಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕನಿಗೆ ಥಳಿಸಿದ ಘಟನೆ ನಗರದ ಬಸ್ ಡಿಪೋ ಬಳಿ ನಡೆದಿದೆ.
ನಾಗೇಶ್ ರಾಮಚಂದ್ರ ಆಚಾರಿ (56) ಥಳಿತಕ್ಕೆ ಒಳಗಾದ ಸಾರಿಗೆ ಸಂಸ್ಥೆಯ ಚಾಲಕ. ಇವರು ಹುಬ್ಬಳ್ಳಿಯಿಂದ ಶಿರಸಿಗೆ ಬರುತ್ತಿದ್ದ ವೇಳೆ ಶಿರಸಿಯ ತಬ್ರೇಜ್ ಮೊಹಮ್ಮದ್ ಜಾಫರ್ ಹಾಗೂ ಸಂಶೀರ್ ಮೊಹಮ್ಮದ್ ಜಾಫರ್ ಎಂಬ ಯುವಕರು ತಮ್ಮ ಪಲ್ಸರ್ ಬೈಕ್ನಲ್ಲಿ ಅತಿಯಾದ ವೇಗದಲ್ಲಿ ಬರುತ್ತಿದ್ದರಂತೆ. ಇವರಿಗೆ ಚಾಲಕ ಆಚಾರಿ ಬೈಕ್ ಮುಂದೆ ಹೋಗಲು ಜಾಗ ನೀಡಲಿಲ್ಲ ಎನ್ನಲಾಗಿದೆ. ಇದರಿಂದ ಸಿಟ್ಟಿಗೆದ್ದ ಯುವಕರು ಡಿಪೋವರೆಗೂ ಬಸ್ ಹಿಂದೆಯೇ ಬಂದು ಚಾಲಕನಿಗೆ ಥಳಿದ್ದಾರೆ.
ಚಾಲಕ ನಾಗೇಶ್ ಶಿರಸಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯುವಕರನ್ನು ಈಗಾಗಲೇ ಪೊಲೀಸರು ವಾಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.