ETV Bharat / state

ಮೂರು ಹಾವುಗಳ ಜೊತೆ ಚೆಲ್ಲಾಟ: ಸಾವಿರಾರು ಉರಗಗಳ ರಕ್ಷಕ ಎಡವಟ್ಟಿನಿಂದ ಆಸ್ಪತ್ರೆ ಸೇರಿದ - ಹಾವುಗಳ ಜೊತೆ ಚೆಲ್ಲಾಟವಾಡಿದ್ದ ಶಿರಶಿ ಯುವಕ

Snake bites an youth in Sirsi: ನಾಗರ ಹಾವಿನೊಂದಿಗಿನ ಆಟವೆಂದರೆ ಜೀವವನ್ನು ಪಣಕ್ಕಿಡುವ ಆಟ ಎಂದೇ ಜನ ಹೇಳುತ್ತಾರೆ. ಆದರೆ, ಈ ಯುವಕ ಮೊದಲಿನಿಂದಲೂ ನಾಗರಹಾವನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದ. ಹಾಗೆ 3 ಸಾವಿರಕ್ಕೂ ಅಧಿಕ ಉರಗಗಳನ್ನು ಕೂಡ ರಕ್ಷಿಸಿದ್ದಾನೆ. ಆದ್ರೆ ಈಗ ಭಂಡ ಧೈರ್ಯದಿಂದ ಎಡವಟ್ಟು ಮಾಡಿಕೊಂಡಿದ್ದಾನೆ.

ಮೂರು ಹಾವುಗಳ ಜೊತೆ ಚೆಲ್ಲಾಟ
ಮೂರು ಹಾವುಗಳ ಜೊತೆ ಚೆಲ್ಲಾಟ
author img

By

Published : Mar 17, 2022, 7:05 PM IST

Updated : Mar 17, 2022, 9:22 PM IST

ಶಿರಸಿ: ನಮ್ಮ ಮುಂದೆ ಒಂದು ಸಣ್ಣ ಹಾವಿನ ಮರಿ ಕಂಡರೆ ಸಾಕು ಕಿರುಚಾಡಿಕೊಂಡು ಸ್ಥಳದಿಂದ ಕಾಲ್ಕಿಳುವವರ ಮಧ್ಯೆ ಈ ಯುವಕ ಭಿನ್ನ. ಕಾರಣ ಮೂರು ಹಾವುಗಳೊಂದಿಗೆ ಆಟ ಆಡುತ್ತಿದ್ದ ಯುವಕ ಹಾವಿನ ಕಡಿತಕ್ಕೆ ಒಳಗಾಗಿದ್ದಾನೆ. ಈ ಆಟದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು.

ನಾಗರ ಹಾವಿನೊಂದಿಗಿನ ಆಟವೆಂದರೆ ಜೀವವನ್ನು ಪಣಕ್ಕಿಡುವ ಆಟ ಎಂದೇ ಜನ ಹೇಳುತ್ತಾರೆ. ಆದರೆ, ಈ ಯುವಕ ಮೊದಲಿನಿಂದಲೂ ನಾಗರಹಾವನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದ. ಹಾಗೆ 3 ಸಾವಿರಕ್ಕೂ ಅಧಿಕ ಹಾವುಗಳ ರಕ್ಷಣೆ ಕೂಡ ಮಾಡಿದ್ದಾನೆ. ಆದ್ರೆ ಈ ಬಾರಿ ಭಂಡ ಧೈರ್ಯ ತೋರಿ ಎಡವಟ್ಟು ಮಾಡಿಕೊಂಡಿದ್ದಾನೆ.

ಸಾವಿರಾರು ಉರಗಗಳ ರಕ್ಷಕ ಎಡವಟ್ಟಿನಿಂದ ಆಸ್ಪತ್ರೆ ಸೇರಿದ

ಇದನ್ನೂ ಓದಿ: 'ದಿ ಕಾಶ್ಮೀರಿ ಫೈಲ್ಸ್' ಸಿನಿಮಾ ನೋಡದವರನ್ನು ಜೈಲಿಗಟ್ಟುವ ಕಾನೂನು ತನ್ನಿ: ಯಶವಂತ್ ಸಿನ್ಹಾ ವ್ಯಂಗ್ಯ

ಶಿರಸಿಯ ಮುಸ್ಲಿಂ ಗಲ್ಲಿಯ ಸೈಯದ್ (20) ಎಂಬ ಯುವಕ ಹಾವಿನ ಕಡಿತಕ್ಕೆ ಒಳಗಾಗಿ ಆಸ್ಪತ್ರೆ ಸೇರಿರುವ ಯುವಕ. ದೇವಿದ ಕೆರೆ ಕಾಡಿನಲ್ಲಿ ಈ ಘಟನೆ ಜರುಗಿದೆ. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, 3 ದಿನಗಳ ಕಾಲ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾನೆ.

ಸಾವಿರಾರು ಹಾವುಗಳ ರಕ್ಷಣೆ ಮಾಡಿದ್ದ ಯುವಕ ಈಗ ಆಸ್ಪತ್ರೆಯಲ್ಲಿ

ವಿಡಿಯೋದಲ್ಲಿ ಕಾಣುವಂತೆ 3 ಹಾವುಗಳೊಂದಿಗೆ ಆಟ ಆಡುವಾಗ ಒಂದು ಹಾವು ಈತನ ಕಾಲಿಗೆ ಕಚ್ಚಿದೆ. ಘಟನೆ ಸಂಬಂಧ ಐಎಫ್ಎಸ್ ಅಧಿಕಾರಿ ಸುಶಾಂತ್ ನಂದಾ ಅವರು ಟ್ವೀಟ್ ಮಾಡಿ ಈ ರೀತಿಯಾಗಿ ಯುವಕ ಮಾಡಿದ್ದನ್ನು ವಿರೋಧಿಸಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಚಾಮರಾಜನಗರ ಜಿಲ್ಲೆಯ ಪರಿಸರ ಹೋರಾಟಗಾರ ಜೋಸೆಫ್​ ಅವರು, ಅರಣ್ಯ ಇಲಾಖೆ ಇಂತಹವರ ಬಗ್ಗೆ ನಿಗಾ ಇಡಬೇಕು. ವನ್ಯ ಜೀವಿಗಳನ್ನು ಮುಟ್ಟುವ ಹಾಗಿಲ್ಲ ಎಂಬ ಆದೇಶ ಹೊರಡಿಸಬೇಕು. ಕೆಲವರು ಪಬ್ಲಿಷಿಟಿಗೆ ಏನೇನೋ ಸ್ಟಂಟ್​ ಮಾಡಲು ಹೋಗಿ ಈ ರೀತಿಯ ಅಚಾತುರ್ಯಗಳು ನಡೆಯುತ್ತವೆ ಎಂದಿದ್ದಾರೆ.

ಪರಿಸರ ಹೋರಾಟಗಾರರ ಅಭಿಪ್ರಾಯ

ಇನ್ನು ಉರುಗ ಪ್ರೇಮಿ ಮಹೇಶ್ ಮಾತನಾಡಿ, ವಿಡಿಯೋಗಳನ್ನು ನೋಡಿ ಹಾವುಗಳ ಜೊತೆ ಆಟವಾಡುವುದು ಮತ್ತು ತರಬೇತಿ ಇಲ್ಲದೇ ಹಾವುಗಳ ಸಂರಕ್ಷಣೆ ಮಾಡುವುದು ಅಪಾಯಕರ. ಈ ರೀತಿ ಯಾರೂ ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

Last Updated : Mar 17, 2022, 9:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.