ETV Bharat / state

ಯಲ್ಲಾಪುರ ಉಪ ಚುನಾವಣೆ... ಅಕ್ರಮ ಮದ್ಯ ತಡೆಗೆ ಡಿಸಿ ಖಡಕ್ ಸೂಚನೆ - DC order to stop illegal liquor transport

ಗಡಿ ಜಿಲ್ಲೆಯಾಗಿರುವ ಉತ್ತರ ಕನ್ನಡದಲ್ಲಿ ಅಕ್ರಮ ಮದ್ಯದ ಸಾಗಾಟ ಅಥವಾ ದಾಸ್ತಾನುಗಳ ಬಗ್ಗೆ ವಿಶೇಷ ನಿಗಾ ವಹಿಸಬೇಕು. ಉಪ ಚುನಾವಣೆ ನಡೆಯುವ ಕ್ಷೇತ್ರವಲ್ಲದೆ ಬೇರೆ ತಾಲೂಕುಗಳಲ್ಲಿಯೂ ಅಕ್ರಮ ನಡೆಯದಂತೆ ಕ್ರಮ ವಹಿಸಬೇಕಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.

ಅಕ್ರಮ ಮದ್ಯ ತಡೆಗೆ ಡಿಸಿ ಖಡಕ್ ಸೂಚನೆ
author img

By

Published : Sep 25, 2019, 5:36 AM IST

ಕಾರವಾರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಮದ್ಯದ ಅಕ್ರಮ ದಾಸ್ತಾನು, ಸರಬರಾಜು ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ಹರೀಶ್‍ಕುಮಾರ್ ಕೆ. ಅಬಕಾರಿ ಇಲಾಖೆಗೆ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮುಕ್ತ ಹಾಗೂ ನ್ಯಾಯಸಮ್ಮತ ಉಪ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಅವಕಾಶ ನೀಡದಂತೆ ನಿಯೋಜಿತ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಸೂಚಿಸಿದರು.

ಉತ್ತರ ಕನ್ನಡ ಗಡಿ ಜಿಲ್ಲೆಯಾಗಿರುವುದರಿಂದ ಅಕ್ರಮ ಮದ್ಯದ ಸಾಗಾಟ ಅಥವಾ ದಾಸ್ತಾನುಗಳ ಬಗ್ಗೆ ವಿಶೇಷ ನಿಗಾ ವಹಿಸಬೇಕು. ಉಪ ಚುನಾವಣೆ ನಡೆಯುವ ಕ್ಷೇತ್ರವಲ್ಲದೆ ಬೇರೆ ತಾಲೂಕುಗಳಲ್ಲಿಯೂ ಅಕ್ರಮಗಳು ನಡೆಯದಂತೆ ಕ್ರಮ ವಹಿಸಬೇಕಿದೆ ಎಂದರು. ಇಲಾಖೆಯಿಂದ ತಂಡಗಳನ್ನು ರಚಿಸಿ ಅಕ್ರಮಗಳನ್ನು ತಡೆಗಟ್ಟಬೇಕು. ಅಲ್ಲದೆ, ಮತದಾನದ ದಿನ ಮತ್ತು ಮತ ಎಣಿಕೆ ದಿನ ಹೊರಡಿಸುವ ನಿಷೇಧಾಜ್ಞೆ ಆದೇಶವನ್ನು ಕಟ್ಟನಿಟ್ಟಾಗಿ ಜಾರಿ ತರುವಂತೆ ಸೂಚಿಸಿದರು.

Uttar Kannada DC order to stop illegal liquor transport
ಅಕ್ರಮ ಮದ್ಯ ತಡೆಗೆ ಡಿಸಿ ಖಡಕ್ ಸೂಚನೆ

ಅಬಕಾರಿ ಉಪಯುಕ್ತ ಮೇರುನಂದನ್ ಮಾತನಾಡಿ, ಉಪ ಚುನಾವಣೆ ನಿಮಿತ್ತ ಈಗಾಗಲೇ ತಂಡಗಳನ್ನು ರಚಿಸಲಾಗಿದೆ. ಅಬಕಾರಿ ಅಕ್ರಮಗಳನ್ನು ತಡೆಯಲು ಕ್ರಮ ವಹಿಸಲಾಗಿದೆ. ಜಿಲ್ಲಾ ಕಂಟ್ರೋಲ್ ರೂಂ ಸೇರಿದಂತೆ ಯಲ್ಲಾಪುರ ವಲಯದಲ್ಲಿ ನಾಲ್ಕು ಕಂಟ್ರೋಲ್ ರೂಂಗಳನ್ನು ರಚಿಸಲಾಗಿದೆ. ಯಲ್ಲಾಪುರ ಅಬಕಾರಿ ಉಪ ಅಧೀಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.

ಮುಕ್ತ ಹಾಗೂ ನಿಷ್ಪಕ್ಷವಾದ ಚುನಾವಣೆ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲು ಚೆಕ್‍ ಪೋಸ್ಟ್​ಗಳನ್ನು ನಿರ್ಮಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಹಾಗೂ ಉಪ ಚುನಾವಣೆ ನಡೆಯುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಲ್ಲಾಪುರ, ಮುಂಡಗೋಡ, ಶಿರಸಿ ತಾಲೂಕುಗಳಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದರು.

ಸಾರ್ವಜನಿಕರು ಅಕ್ರಮ ಮದ್ಯದ ಮಾಹಿತಿ ಇದ್ದಲ್ಲಿ ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08382-227094, ತಾಲೂಕು ಕಂಟ್ರೋಲ್ ರೂಂ ಯಲ್ಲಾಪುರ ವಲಯ ಅಬಕಾರಿ ನಿರೀಕ್ಷಕರ ಕಚೇರಿ 08419-261510, ತಹಸೀಲ್ದಾರ್ ಕಚೇರಿ ಮುಂಡಗೋಡ 08301-222122, ಅಬಕಾರಿ ನಿರೀಕ್ಷಕರ ಕಚೇರಿ ಸಿರಸಿ ವಲಯ 08384-224168 ಆಗಿರುತ್ತದೆ. ಈ ಕಂಟ್ರೋಲ್ ರೂಂಗಳ ಉಸ್ತುವಾರಿ ನೋಡಿಕೊಳ್ಳಲು ಯಲ್ಲಾಪುರ ಉಪ ವಿಭಾಗ ಅಬಕಾರಿ ಉಪ ನಿರೀಕ್ಷಕ ಆರ್.ವಿ. ತಳೇಕರ್ 9449597124, 9538721125 ಇವರನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.

Intro:Body:ಯಲ್ಲಾಪುರ ಉಪ ಚುನಾವಣೆ... ಅಕ್ರಮ ಮದ್ಯ ತಡೆಗೆ ಡಿಸಿ ಖಡಕ್ ಸೂಚನೆ

ಕಾರವಾರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಮದ್ಯದ ಅಕ್ರಮ ದಸ್ತಾನು, ಸರಬರಾಜು ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ. ಅಬಕಾರಿ ಇಲಾಖೆಗೆ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮುಕ್ತ ಹಾಗೂ ನ್ಯಾಯಸಮ್ಮತ ಉಪ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಯಾವುದೇ ಆಮಿಷಗಳಿಗೆ ಅವಕಾಶ ನೀಡದಂತೆ ನಿಯೋಜಿತ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಅವರು ತಿಳಿಸಿದರು.
ಉತ್ತರ ಕನ್ನಡ ಗಡಿ ಜಿಲ್ಲೆಯಾಗಿರುವುದರಿಂದ ಅಕ್ರಮ ಮದ್ಯದ ಸಾಗಾಟ ಅಥವಾ ದಾಸ್ತಾನುಗಳ ಬಗ್ಗೆ ವಿಶೇಷ ನಿಗಾ ವಹಿಸಬೇಕು. ಉಪ ಚುನಾವಣೆ ನಡೆಯುವ ಕ್ಷೇತ್ರವಲ್ಲದೆ ಬೇರೆ ತಾಲೂಕುಗಳಲ್ಲಿಯೂ ಅಕ್ರಮಗಳು ನಡೆಯದಂತೆ ಕ್ರಮವಹಿಸಬೇಕಿದೆ ಎಂದ ಅವರು ಇಲಾಖೆಯಿಂದ ತಂಡಗಳನ್ನು ರಚಿಸಿ ಅಕ್ರಮಗಳನ್ನು ತಡೆಗಟ್ಟಬೇಕು. ಅಲ್ಲದೆ, ಮತದಾನದ ದಿನ ಮತ್ತು ಮತ ಎಣಿಕೆ ದಿನ ಹೊರಡಿಸುವ ನಿಷೇಧಾಜ್ಞೆ ಆದೇಶಗಳ ಕಟ್ಟನಿಟ್ಟಿನ ಜಾರಿಗೆ ಕ್ರಮ ವಹಿಸುವಂತೆ ಅವರು ಸೂಚಿಸಿದರು.
ಅಬಕಾರಿ ಉಪಯುಕ್ತ ಮೇರುನಂದನ್ ಅವರು, ಉಪ ಚುನಾವಣೆ ನಿಮಿತ್ತ ಈಗಾಗಲೇ ತಂಡಗಳನ್ನು ರಚಿಸಲಾಗಿದ್ದು ಅಬಕಾರಿ ಅಕ್ರಮಗಳನ್ನು ತಡಯಲು ಕ್ರಮ ವಹಿಸಲಾಗಿದೆ. ಜಿಲ್ಲಾ ಕಂಟ್ರೋಲ್ ರೂಮ್ ಸೇರಿದಂತೆ ಯಲ್ಲಾಪುರ ವಲಯದಲ್ಲಿ ನಾಲ್ಕು ಕಂಟ್ರೋಲ್ ರೂಮ್‍ಗಳನ್ನು ರಚಿಸಲಾಗಿದೆ ಹಾಗೂ ಯಲ್ಲಾಪುರ ಅಬಕಾರಿ ಉಪ ಅಧೀಕ್ಷಕರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.
ಮುಕ್ತ ಹಾಗೂ ನಿಷ್ಪಕ್ಷವಾದ ಚುನಾವಣೆ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲು ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಹಾಗೂ ಉಪ ಚುನಾವಣೆ ನಡೆಯುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಲ್ಲಾಪುರ, ಮುಂಡಗೋಡ, ಶಿರಸಿ ತಾಲೂಕುಗಳಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದರು. ಸಾರ್ವಜನಿಕರು ಅಕ್ರಮ ಮದ್ಯದ ಮಾಹಿತಿ ಇದ್ದಲ್ಲಿ ಜಿಲ್ಲಾ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08382-227094, ತಾಲೂಕು ಕಂಟ್ರೋಲ್ ರೂಮ್ ಯಲ್ಲಾಪುರ ವಲಯ ಅಬಕಾರಿ ನಿರೀಕ್ಷಕರ ಕಚೇರಿ 08419-261510, ತಹಸೀಲ್ದಾರ್ ಕಚೇರಿ ಮುಂಡಗೋಡ 08301-222122, ಅಬಕಾರಿ ನಿರೀಕ್ಷಕರ ಕಚೇರಿ ಸಿರಸಿ ವಲಯ 08384-224168 ಆಗಿರುತ್ತದೆ. ಈ ಕಂಟ್ರೋಲ್ ರೂಮ್‍ಗಳ ಉಸ್ತುವಾರಿ ನೋಡಿಕೊಳ್ಳಲು ಉಲ್ಲಾಪುರ ಉಪವಿಭಾಗ ಅಬಕಾರಿ ಉಪ ನಿರೀಕ್ಷಕ ಆರ್.ವಿ.ತಳೇಕರ್ 9449597124, 9538721125 ಇವರನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.