ಯಲ್ಲಾಪುರ: ತೀವ್ರ ಕುತೂಹಲ ಕೆರಳಿಸಿದ್ದ ಯಲ್ಲಾಪುರ ಮುಂಡಗೋಡ ಕ್ಷೇತ್ರದ ಉಪ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಮತದಾರರು ಬರೆದ ಏಳು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಯಲ್ಲಾಪುರ ಮುಂಡಗೋಡ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಶೇ. 77.52 ರಷ್ಟು ಮತದಾನವಾಗಿದೆ. ಮತದಾನ ಬಳಿಕ ಇವಿಎಂ, ವಿವಿಪ್ಯಾಟ್ ಸೇರಿದಂತೆ ಇನ್ನಿತರ ಪರಿಕರಗಳನ್ನು ಚುನಾವಣಾ ಸಿಬ್ಬಂದಿ, ಯಲ್ಲಾಪುರದ ವಿಶ್ವದರ್ಶನ ಶಾಲೆಗೆ ತಂದು ಸ್ಟ್ರಾಂಗ್ ರೂಂಗೆ ಹಸ್ತಾಂತರಿಸಿದರು. ನಂತರ ಶಿರಸಿಯ ಭದ್ರತಾ ಕೊಟ್ಟಡಿಗೆಗೆ ಸಾಗಿಸಲಾಯಿತು.