ETV Bharat / state

ಕಾರವಾರ ಕಡಲತೀರದಲ್ಲಿ ಏಷ್ಯನ್ ಚಾಂಪಿಯನ್‌ಶಿಪ್ ಯಾಚ್ ಸ್ಪರ್ಧಾಳುಗಳಿಗೆ ತರಬೇತಿ - Yacht Sports Training For Asian Championship Players In Karwar

ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಯಾಚ್ ಸ್ಪರ್ಧಾ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳು ಉತ್ತರಕನ್ನಡ ಜಿಲ್ಲೆಯ ಕಾರವಾರದ ಕಡಲಿನಲ್ಲಿ ಅಭ್ಯಾಸ ಪ್ರಾರಂಭಿಸಿದ್ದಾರೆ.

ಏಷ್ಯನ್ ಚಾಂಪಿಯನ್‌ಶಿಪ್ ಯಾಚ್ ಸ್ಪರ್ಧಾಳುಗಳಿಗೆ ತರಬೇತಿ

author img

By

Published : Feb 7, 2022, 5:25 PM IST

ಕಾರವಾರ: ಅಬುದಾಬಿಯಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್‌ಶಿಪ್‌ನ ಯಾಚ್ ಸ್ಪರ್ಧಾಳುಗಳಿಗೆ ಇದೀಗ ಕಾರವಾರದ ಬಳಿ ಅರಬ್ಬಿ ಸಮುದ್ರದಲ್ಲಿ ತರಬೇತಿ ನೀಡಲಾಗುತ್ತಿದ್ದು, ಸಮುದ್ರದ ಅಬ್ಬರದ ಅಲೆಗಳನ್ನು ಎದುರಿಸುತ್ತಾ ಗಾಳಿಯನ್ನೇ ಆಧಾರವಾಗಿರಿಸಿಕೊಂಡು ಕ್ರೀಡಾಪಟುಗಳು ವೇಗವಾಗಿ ಸಾಗುವ ಪರಿ ನೋಡುಗರನ್ನು ಹುಬ್ಬೇರಿಸುವಂತೆ ಮಾಡುತ್ತಿದೆ.

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ಬೆಂಗಳೂರು, ಯಾಚಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಹಾಗೂ ಉತ್ತರಕನ್ನಡ ಜಿಲ್ಲಾಡಳಿತದ ಸಹಯೋಗದಲ್ಲಿ ಯಾಚ್ ಸ್ಪರ್ಧೆಯಲ್ಲಿ ಭಾಗವಹಿಸಲು ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತೀರದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿರುವ ಈ ತರಬೇತಿಯಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ 26 ಕ್ರೀಡಾಪಟುಗಳು ಇಲ್ಲಿ ಯಾಚ್ ಓಡಿಸುವ ತರಬೇತಿಯಲ್ಲಿ ನಿರತರಾಗಿದ್ದಾರೆ.

ಏಷ್ಯನ್ ಚಾಂಪಿಯನ್‌ಶಿಪ್ ಯಾಚ್ ಸ್ಪರ್ಧಾಳುಗಳಿಗೆ ತರಬೇತಿ

ಕಳೆದ ಎರಡು ತಿಂಗಳಿನಿಂದ ಈ 26 ಕ್ರೀಡಾಪಟುಗಳಿಗೆ ಸಾಹಸ ಕ್ರೀಡಾ ತರಬೇತಿ ನೀಡಲಾಗುತ್ತಿದೆ. ಈ ಹಿಂದೆ ಮೈಸೂರಿನಲ್ಲಿ ಕಾವೇರಿ ಹಿನ್ನೀರಿನಲ್ಲಿ ತರಬೇತಿ ಪಡೆಯುತ್ತಿದ್ದರು. ಆದರೆ, ಅಲ್ಲಿಗಿಂತಲೂ ಕಾರವಾರದ ದೇವಭಾಗ್ ಬೀಚ್ ಉತ್ತಮ ಸ್ಥಳವಾಗಿದ್ದು, ಇಲ್ಲಿ ಸೂಕ್ತ ತರಬೇತಿ ಪಡೆಯಲು ಅನುಕೂಲಕರವಾದ ಗಾಳಿ ಹಾಗೂ ದೊಡ್ಡ ದೊಡ್ಡ ಅಲೆಗಳು ಇರುವುದರಿಂದ ಉತ್ತಮ ತರಬೇತಿ ಪಡೆಯಲು ಸಾಧ್ಯವಾಗುತ್ತಿದೆ ಎಂದು ತರಬೇತುದಾರ ಶಿವನ್ ಮಾಹಿತಿ ಹಂಚಿಕೊಂಡಿದ್ದಾರೆ.

ಓದಿ: ಹೆಣ್ಣೂರು ಇನ್ಸ್​​ಪೆಕ್ಟರ್​​ ವಿರುದ್ಧ ಮತ್ತೊಂದು ಆರೋಪ: ಪೊಲೀಸ್ ಠಾಣೆ ಮುತ್ತಿಗೆ ಹಾಕಿದ ದಲಿತಪರ ಸಂಘಟನೆಗಳು

ಇನ್ನು ಭೋರ್ಗರೆಯುವ ಸಮುದ್ರದ ಅಲೆಗಳ ಮೇಲೆ ಗಾಳಿಯನ್ನೇ ಆಧಾರವನ್ನಾಗಿಸಿಕೊಂಡು ಕ್ರೀಡಾಪಟುಗಳು ಮುನ್ನುಗ್ಗಿ ತೆರಳುವ ಸಾಹಸ ಚಟುವಟಿಕೆಗಳು ಮೈ ಜುಮ್​ ಎನಿಸುತ್ತದೆ. ಹಾಯು (ಯಾಚ್) ದೋಣಿ ಮೂಲಕ ಕಡಲ ಅಲೆಗಳನ್ನು ಎದುರಿಸಿಕೊಂಡು ಯುವಕರು ಸಾಗುವ ಪರಿ ನೋಡುಗರಲ್ಲಿ ರೋಮಾಂಚನ ಮೂಡಿಸುತ್ತದೆ. ದೇವಭಾಗ್ ಕಡಲತೀರ ತರಬೇತಿಗೆ ಉತ್ತಮ ತಾಣವಾಗಿದ್ದು, ಸ್ಪರ್ಧಾಳುಗಳಿಗೆ ಉತ್ತಮ ಅನುಭವ ನೀಡಿದೆ.

ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ 8 ರಿಂದ 18 ವಯಸ್ಸಿನ ಶಿಬಿರಾರ್ಥಿಗಳಿಗೆ ಇಲ್ಲಿ ಹಾಯು ದೋಣಿ ಚಲಾಯಿಸುವ ತರಬೇತಿ ನೀಡಲಾಗುತ್ತಿದೆ. ಕ್ರೀಡೆಗೆಂದೇ ವಿಶೇಷವಾಗಿ ನಿರ್ಮಿಸಲಾಗಿರುವ ಈ ಹಾಯು ದೋಣಿಯಲ್ಲಿ ಕ್ರೀಡಾಪಟುಗಳು ಗಾಳಿ ಮತ್ತು ಅಲೆಗಳ ಸಹಾಯದಿಂದ ಟ್ರೈ ಯಾಂಗಲ್​ನಲ್ಲಿ ಚಲಿಸುತ್ತಾರೆ. ಈ ಸ್ಪರ್ಧೆಯಲ್ಲಿ ಭಾಗಿಯಾಗುವ ಕ್ರೀಡಾಪಟುಗಳಿಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಕಲೆ ಕರಗತವಾಗಿರಬೇಕು.

ಸ್ವಲ್ಪ ಹೆಚ್ಚು ಕಮ್ಮಿ ಆದರೂ ಕ್ರೀಡಾಪಟುಗಳಿಗೆ ಮುಂದಿನ ಆಯ್ಕೆಯ ಹಂತದಲ್ಲಿ ಅವಕಾಶ ಕೈ ತಪ್ಪುವ ಸಾಧ್ಯತೆಗಳಿವೆ. ಹೀಗಾಗಿ, ಇದರ ತರಬೇತಿಯನ್ನು ಅರಬ್ಬಿ ಸಮುದ್ರದಲ್ಲಿ ನೀಡಲಾಗುತ್ತಿದೆ. ದೇವಭಾಗ್ ಬೀಚ್ ತರಬೇತಿಗೆ ಉತ್ತಮ ಪ್ರದೇಶವಾಗಿದ್ದು, ಉತ್ತರಕನ್ನಡ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿದೆ. ಮುಂದಿನ ದಿನಗಳಲ್ಲಿ ಸೈಲಿಂಗ್ ಕ್ಲಬ್ಬನ್ನು ಪ್ರಾರಂಭಿಸುವ ಉದ್ದೇಶ ಕೂಡ ಇದೆ ಎನ್ನುತ್ತಾರೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ತರಬೇತುದಾರ ಪ್ರಕಾಶ್​ ಹರಿಕಾಂತ.

ಓದಿ: ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ಗೆ ಟ್ವಿಟರ್​ನಲ್ಲಿ ಕೊಲೆ ಬೆದರಿಕೆ.. ಎಫ್​ಐಆರ್​ ದಾಖಲು

ಒಟ್ಟಿನಲ್ಲಿ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳು ಇದೇ ತಿಂಗಳ ಅಂತ್ಯದಲ್ಲಿ ನಡೆಯುವ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದು, ಕಾರವಾರದಲ್ಲಿ ಪಡೆದ ತರಬೇತಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಕ್ರೀಡಾಪಟುಗಳಿಗೆ ಗೆಲುವು ತಂದುಕೊಡಲಿ ಎಂಬುದೇ ಎಲ್ಲರ ಆಶಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.