ETV Bharat / state

ಭಟ್ಕಳದಲ್ಲಿ ನಡೆಯಬೇಕಿದ್ದ ಬಾಲ್ಯ ವಿವಾಹಕ್ಕೆ ಬ್ರೇಕ್​ ಹಾಕಿದ ಅಧಿಕಾರಿಗಳು

ಭಟ್ಕಳ ತಾಲೂಕಿನ ಕೋಕ್ತಿ ನಗರದ 2ನೇ ಕ್ರಾಸ್​ನ ಮದಿನಾಹಾಲ್​ನಲ್ಲಿ ಇಂದು ನಡೆಯಬೇಕಿದ್ದ ಬಾಲ್ಯ ವಿವಾಹ ತಡೆದು ಬಾಲಕಿ ರಕ್ಷಣೆ ಮಾಡಲಾಗಿದೆ.

womens-savannah-center-staff-stopped-child-marriage-in-bhatkal
ಭಟ್ಕಳದಲ್ಲಿ ನಡೆಯಬೇಕಿದ್ದ ಬಾಲ್ಯ ವಿವಾಹಕ್ಕೆ ಬ್ರೇಕ್​ ಹಾಕಿದ ಅಧಿಕಾರಿಗಳು
author img

By

Published : Dec 29, 2020, 5:39 PM IST

ಭಟ್ಕಳ (ಉತ್ತರಕನ್ನಡ): ತಾಲೂಕಿನ ಕೋಕ್ತಿ ನಗರದ 2ನೇ ಕ್ರಾಸ್​ನ ಮದಿನಾಹಾಲ್​ನಲ್ಲಿ ಇಂದು ನಡೆಯಬೇಕಿದ್ದ ಬಾಲ್ಯ ವಿವಾಹವನ್ನು ತಡೆದು ಬಾಲಕಿಯನ್ನು ರಕ್ಷಣೆ ಮಾಡಲಾಗಿದೆ.

ಭಟ್ಕಳದಲ್ಲಿ ನಡೆಯಬೇಕಿದ್ದ ಬಾಲ್ಯ ವಿವಾಹಕ್ಕೆ ಬ್ರೇಕ್​ ಹಾಕಿದ ಅಧಿಕಾರಿಗಳು

ಮದಿನಾಹಾಲ್​ನಲ್ಲಿ 16 ವರ್ಷದ ಬಾಲಕಿಗೆ ವಿವಾಹ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ, ಬಾಲ್ಯ ವಿವಾಹ ತಡೆದು ಬಾಲಕಿಯನ್ನು ರಕ್ಷಿಸಿದ್ದಾರೆ. ಬಳಿಕ ಬಾಲ್ಯ ವಿವಾಹ ಮಾಡಿದರೆ ನೀಡುವ ಶಿಕ್ಷೆ, ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಬಾಲಕಿಯ ಪೋಷಕರಿಗೆ ತಿಳಿ ಹೇಳಿದ್ದಾರೆ.

ಜೊತೆಗೆ ಬಾಲಕಿಗೆ 18 ವರ್ಷ ತುಂಬಿದ ನಂತರವೇ ತಮ್ಮ ಗಮನಕ್ಕೆ ತಂದು ಮದುವೆ ಮಾಡುವಂತೆ ಬಾಲಕಿ ತಂದೆ ಹಾಗೂ ಮದುವೆಯಾಗಲು ಹೊರಟಿದ್ದ ಯುವಕನ ಬಳಿ ಮುಚ್ಚಳಿಕೆ ಬರೆಯಿಸಿಕೊಳ್ಳಲಾಗಿದೆ. ಇದರೊಂದಿಗೆ ಭಟ್ಕಳದಲ್ಲಿ ಒಂದು ವಾರದೊಳಗೆ ಮೂರು ಬಾಲ್ಯ ವಿವಾಹವನ್ನ ಅಧಿಕಾರಿಗಳು ತಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.